ಬಿಜೆಪಿ ಕಚೇರಿಯಲ್ಲಿ ಪರಿಷತ್ ಸದಸ್ಯ ಸಿ ಟಿ ರವಿ ಹೇಳಿಕೆ, ವಾಲ್ಮೀಕಿ ನಿಗಮದ ಹಗರಣದ ತನಿಖೆ ವಿಚಾರ ಎಸ್ಐಟಿ ಒತ್ತಡಕ್ಕೆ ಅನುಗುಣವಾಗಿ ಕೆಲಸ ಮಾಡ್ತಿದೆ.
ಇಡೀ ಹಗರಣ ಲೂಟಿ ಹೊಡೆಯೋಕ್ಕೆ ಅಂತಾನೇ ಮಾಡಿದ್ದಾರೆ ಶಾಂಗ್ರೀಲಾ ಹೊಟೇಲ್ ನಲ್ಲಿ ನೆಕ್ಕುಂಟಿ ನಾಗರಾಜ್ ಗೆ ನಾಗೇಂದ್ರ ಲಿಂಕ್ ಮಾಡಿಕೊಟ್ಟಿದ್ರು.
ಇದರಲ್ಲಿ ಕಾಂಗ್ರೆಸ್ ಗೂ ಹಣ ಹೋಗಿದೆ, ಹೀಗಾಗಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ನಡೀತಿದೆ.
ಲೂಟಿ ಹೊಡೆಯಲು ಹಗರಣ ನಡೆಸಲಾಗಿದೆ
ದೊಡ್ಡ ದೊಡ್ಡವರು ಇರುವ ಕಾರಣವೇ ಎಸ್‌ಐಟಿ ಗೆ ಸಮಗ್ರ ತನಿಖೆ ನಡೆಸುವ ಇಚ್ಛೆ ಇಲ್ಲ, ಬಂಧಿತ ಅಧಿಕಾರಿಗಳ ಪೋನ್ ಕಾಲ್ ಆಡಿಯೋ ವಿಚಾರ
ಈಗ ವೈರಲ್ ಆಗಿರುವ ಪದ್ಮನಾಭ್ ಮತ್ತು ಪರಶುರಾಮ್ ಆಡಿಯೋ ಕೂಡಾ ತನಿಖೆಗೆ ಪೂರಕವಾಗಿರುತ್ತೆ, ಈ ಆಡಿಯೋದ ಹಿನ್ನೆಲೆ ಮುನ್ನೆಲೆ ಬಗ್ಗೆ ನನಗೆ ಗೊತ್ತಿಲ್ಲ, ಈಗ ಪ್ರತಿಕ್ರಿಯೆ ಕೊಡಲ್ಲ ಪ್ರಕರಣದಲ್ಲಿ ದೊಡ್ಡವರ ರಕ್ಷಣೆಗೆ ಈ ಆಡಿಯೋ ಬಿಟ್ಟಿದ್ದಾರಾ ಇಲ್ವಾ ಅಂತ ಗೊತ್ತಿಲ್ಲ.
ಅರ್ಕಾವತಿ ರೀಡೂ ಪ್ರಕರಣದಲ್ಲಿ ನ್ಯಾ.ಕೆಂಪಣ್ಣ ವರದಿ ಕೊಟ್ಟಿದ್ದಾರೆ, ಈ ವರದಿಯನ್ನು ಸದನದಲ್ಲಿ ಮಂಡಿಸಲಿ, ಮುಡಾ ಅಕ್ರಮ ಸಹ ಇನ್ನೊಂದು ರೀಡೂ ಪ್ರಕರಣ ಆಗದಿರಲಿ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆಯೇ ಪರಿಹಾರ
ನಂತರ ಪ್ರಕರಣದಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ, ಯಾರ್ಯಾರಿಗೆ ಎಷ್ಟೆಷ್ಟು ಸೈಟ್ ಹಂಚಿಕೆ ಆಗಿದೆ ಇದರ ಬಗ್ಗೆ ನ್ಯಾಯಾಂಗ ತನಿಖೆ ಆಗಲಿ, ಮುಡಾ ಪ್ರಕರಣದಲ್ಲಿ ನ್ಯಾಯಾಂಗ ತನಿಖೆ ಆಗಲಿ ಇದೇ ನಮ್ಮಆಗ್ರಹ, ನ್ಯಾಯಾಂಗ ತನಿಖೆಗೂ ಮುನ್ನ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ