ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ (MUDA) ಮಾಜಿ ಆಯುಕ್ತ ದಿನೇಶ್ (Dinesh) ED ಅಧಿಕಾರಿಗಳ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಕೆಲವು ದಿನಗಳ ಮುಂಚೆ ED ದಾಳಿ ನಡೆಸಿದ ಸಂದರ್ಭದಲ್ಲಿ ದಿನೇಶ್ ನಾಪತ್ತೆಯಾಗಿದ್ದರು.
ಹೀಗಾಗಿ ದಿನೇಶ್ ಅವರ ನಿವಾಸದಲ್ಲಿ ಮುಡಾ ಅಕ್ರಮಕ್ಕೆ ಸಂಬಂಧಪಟ್ಟ ದಾಖಲೆಗಳ ಪರಿಶೀಲನೆಯನ್ನು ED ಅಧಿಕಾರಿಗಳು ಕೈಗೊಂಡಿದ್ದರು. ಆನಂತರ ವಿಚಾರಣೆಗೆ ಹಾಜರಾಗುವಂತೆ ಮಾಜಿ ಆಯುಕ್ತ ದಿನೇಶ್ ಗೆ ಸಮನ್ಸ್ ನೀಡಲಾಗಿತ್ತು.
ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ ಹಿನ್ನೆಲೆ, ಇಷ್ಟು ದಿನ ನಾಪತ್ತೆಯಾಗಿದ್ದ ದಿನೇಶ್ ನವೆಂಬರ್ ಒಂಬತ್ತರ ಶನಿವಾರ ಸಂಜೆ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದು , ಕೆಲಕಾಲ ಅವರನ್ನು ವಿಚಾರಣೆಗೆ ಒಳಪಡಿಸಿ ಅಧಿಕಾರಿಗಳು ಬಿಟ್ಟು ಕಳುಹಿಸಿದ್ದಾರೆ.