ಮಂಡ್ಯ(Mandya) ಸಂಸದೆ(Loka Saba Member) ಸುಮಲತಾ ಅಂಬರೀಶ್‌ಗೆ(Sumalatha Ambrish) ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ(BJP Karnataka) ಟಿಕೆಟ್ ಸಿಗುವುದು ಅನುಮಾನ ಅನ್ನೋ ಮಾತುಗಳ ನಡುವೆಯೇ ಸುಮಲತಾ ಮಹತ್ವದ ಸಭೆ ನಡೆಸಿದ್ದಾರೆ. ಮಂಡ್ಯ ಬಿಜೆಪಿ ಪ್ರಮುಖ ನಾಯಕರಲ್ಲಿ ಒಬ್ಬರಾದ ಮಾಜಿ ಸಚಿವ ನಾರಾಯಣಗೌಡ ಸೇರಿದಂತೆ ಪ್ರಮುಖ ಸಭೆ ಕರೆದಿದ್ದ ಸುಮಲತಾ, ಬೆಂಗಳೂರಿನ ನಿವಾಸದಲ್ಲಿ ಸಭೆ ನಡೆಸಿದ್ರು. ಸಭೆ ಬಳಿಕ ಮಾತನಾಡಿದ ಸಂಸದೆ ಸುಮಲತಾ, ನಾನು ಬೇರೆ ಕಡೆ ಸ್ಪರ್ಧೆ ಮಾಡುವುದಿಲ್ಲ. ಮಂಡ್ಯದಿಂದಲೇ ಸ್ಪರ್ಧೆ ಮಾಡ್ತೇನೆ ಎನ್ನುವ ಮೂಲಕ ಬಿಜೆಪಿ ನಾಯಕರಿಗೆ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ.
ಜೆಡಿಎಸ್ ನಮಗೆ ಮಂಡ್ಯ ಬಿಟ್ಟು ಕೊಡಲಿ – ನಾರಾಯಣಗೌಡ:
ಸುಮಲತಾ ಜೊತೆಗಿನ ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ನಾರಾಯಣಗೌಡ, ಸುಮಲತಾ ಜೊತೆಗೆ ಮಾತಾಡಿದ್ದೇವೆ. ಮಂಡ್ಯದಿಂದಲೇ ಸ್ಪರ್ಧೆ ಮಾಡ್ತೇನೆ ಎಂದು ಸುಮಲತಾ ಅವರು ಹೇಳಿದ್ದಾರೆ. ಬೇರೆ ಕಡೆ ಹೋಗಲ್ಲ ಎಂದು ಹೇಳಿದ್ದಾರೆ ಖುಷಿಯಾಗಿದೆ. ಜೆಡಿಎಸ್ ನಾಯಕರಿಗೂ ಮನವಿ ಮಾಡ್ತೇವೆ. ದೇವೇಗೌಡರು, ಕುಮಾರಸ್ವಾಮಿ ಮಂಡ್ಯದಿಂದ ಹುಟ್ಟಿ ಬೆಳೆದವರಲ್ಲ. ರಾಮನಗರ ಅವರ ಲಕ್ಕಿ ಪ್ಲೇಸ್. ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧೆ ಮಾಡಲಿ. ಮಂಡ್ಯ ಜಿಲ್ಲೆಯಿಂದ ಸುಮಲತಾ ಮುಂದುವರಿದ್ರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದಿದ್ದಾರೆ. ಮಂಡ್ಯ ಟಿಕೆಟ್ ವಿಚಾರವಾಗಿ ಅಮಿತ್ ಷಾ ಭೇಟಿ ಮಾಡ್ತೇವೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಬೆಳೆಸಬೇಕು. ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲೂ ಬಿಜೆಪಿ ಗೆಲ್ಲುತ್ತದೆ. ಸುಮಲತಾ ಕೂಡ ಮಂಡ್ಯದಿಂದ ಸ್ಪರ್ಧೆಗೆ ಪ್ರಿಪೇರ್ ಆಗಿದ್ದಾರೆ. ಸಿಟಿಂಗ್ ಎಂಪಿಗೆ ಏಕೆ ಟಿಕೆಟ್ ಕೊಡಲ್ಲ..? ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
ಮಂಡ್ಯದಲ್ಲಿ ಬಿಜೆಪಿ ಗೆಲ್ಲುತ್ತದೆ, ಬಿಜೆಪಿಗೂ ಗೊತ್ತಿದೆ..
ಎರಡು ದಿನಗಳ ಹಿಂದೆಯೇ ಹೊಸ ಜಿಲ್ಲಾಧ್ಯಕ್ಷರು ಬಂದು ಭೇಟಿಯಾಗಿದ್ರು. ಜಿಲ್ಲೆಯಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬ ವಿಷಯವಾಗಿ ಚರ್ಚೆ ಮಾಡಿದ್ದೇವೆ. ಹಾಲಿ ಸಂಸದರಿಗೆ ಸ್ಥಾನ ಮಾನ ಇದ್ದೇ ಇದೆ. ಹಾಲಿ ಸಂಸದರಿಗೆ ಟಿಕೆಟ್ ಕೊಡೊದು ಎಲ್ಲಾ ಪಕ್ಷಗಳಲ್ಲೂ ವಾಡಿಕೆ. ಫಸ್ಟ್ ಟೈಮ್ ಮಂಡ್ಯದಲ್ಲಿ ಹೆಚ್ಚು ಮತ ಬಿದ್ದಿರೋದು. ಮಂಡ್ಯದಲ್ಲಿ ಬಿಜೆಪಿಯನ್ನು ಉಳಿಸಬೇಕು. ಮಂಡ್ಯದಲ್ಲಿ ಉಳಿಸಿಕೊಂಡ್ರೆ ನಾವು ಗೆದ್ದೆ ಗೆಲ್ತೀವಿ. ಮಂಡ್ಯ ಜೆಡಿಎಸ್‌ಗೆ ಬಿಟ್ಟು ಕೊಡ್ತಿವಿ ಅನ್ನೋ ವಿಷ್ಯ ಇದುವರೆಗೂ ಎಲ್ಲೂ ಬಂದಿಲ್ಲ. ಮೈತ್ರಿ ಅನ್ನೋದು ಅವರಿಗೆ ಬಿಟ್ಟಿದ್ದು. ನನ್ನ ಫೋಕಸ್ ಏನಿದ್ರು ನನ್ನ ಜಿಲ್ಲೆ ಮಾತ್ರ. ಫಸ್ಟ್ ಟೈಮ್ ಎಂಪಿ ತರ ನನ್ನ ರೆಕಾರ್ಡ್ ಇಲ್ಲ. ನನ್ನ ಬಗ್ಗೆ ಕಪ್ಪು ಚುಕ್ಕಿ ಇಲ್ಲ. ಇದೆಲ್ಲ ಬಿಜೆಪಿಗೆ ಗೊತ್ತಿದೆ. ಇಂತ ವಾತಾವರಣದಲ್ಲಿ ಬಿಜೆಪಿ ಮಂಡ್ಯ ಸೀಟ್ ಉಳಿಸಿಕೊಳ್ಳುತ್ತೆ ಅನ್ನೋ ನಂಬಿಕೆ ಇದೆ ಎಂದಿದ್ದಾರೆ.
ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧೆ ಮಾಡೋದಿಲ್ಲ – ಸುಮಲತಾ
ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ವಿಚಾರಕ್ಕೆ ಕೂಲ್ ಆಗಿ ಉತ್ತರಿಸಿದ ಸಂಸದೆ ಸುಮಲತಾ, ಯಾರು ಯಾರನ್ನ ಬೇಕಾದ್ರು ಭೇಟಿ ಅಗಲಿ ಅದು ಬೇರೆ ವಿಚಾರ. ನನ್ನ ಸ್ಫರ್ಧೆ ಬಗ್ಗೆ ಸಾಕಷ್ಟು ಊಹಾಪೋಹಗಳ ಇವೆ. ನಾನು ರಾಜಕೀಯಕ್ಕೆ ಬಂದಿರೋದೆ ಮಂಡ್ಯಕ್ಕಾಗಿ. ಮಂಡ್ಯದ ಜನ ಸಾಕಷ್ಟು ಪ್ರೀತಿ ಅಭಿಮಾನ ಸಿಕ್ಕಿದೆ. ಅದನ್ನ ಬಿಟ್ಟು ನಾನು ಬೇರೆ ಕಡೆ ಹೋಗಲ್ಲ ಅದು ನನಗೆ ಅನಿವಾರ್ಯ ಅಲ್ಲ. ನಾನು ಬೇರೆ ಯಾವ ಕಡೆಗೂ ಹೋಗೊದಿಲ್ಲ. ಅಂಬರೀಶ್ ಹೋದಾಗ ನನಗೂ ಒಂದು ಜವಾಬ್ದಾರಿ ಕೊಟ್ಟು ಹೋಗಿದ್ದಾರೆ. ನನಗೆ ಕಾನ್ಪಿಡೆನ್ಸ್ ಇದೆ ಖಂಡಿತಾ ಮಂಡ್ಯದಲ್ಲಿ ಬಿಜೆಪಿ ಟಿಕೆಟ್ ಕೊಡುತ್ತೆ. ಇದುವರೆಗೂ ಮೈತ್ರಿ ವಿಚಾರವಾಗಿ ಪಕ್ಷ ನನ್ನ ಜೊತೆ ಮಾತನಾಡಿಲ್ಲ. ಅಲ್ಲದೆ ಇದುವರೆಗೂ ಸೀಟು ಹಂಚಿಕೆ ಬಗ್ಗೆ ಮಾತುಕತೆ ಆಗಿಲ್ಲ. ಸಚ್ಚಿದಾನಂದ ಕುಮಾರಸ್ವಾಮಿ ಭೇಟಿಯಾಗಲು ನಾನೆ ಹೇಳಿದ್ದು ಅನ್ನೋದು ಹಾಸ್ಯಸ್ಪದ. ಅವರು ಯಾವ ಕಾರಣಕ್ಕೆ ಹೋಗಿ ಭೇಟಿಯಾದ್ರೊ ಗೊತ್ತಿಲ್ಲ. ನಾನು ಅವರನ್ನು ಇದುವರೆಗೂ ಭೇಟಿ ಬಗ್ಗೆ ಕೇಳಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಸೇರುವ ಸುಳಿವು ಕೊಟ್ಟ ಸುಮಲತಾ..!?
ನನ್ನ ಬೆಂಬಲಿಗರಲ್ಲಿ ತುಂಬಾ ಜನ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ. ಅವರು ಕಾಂಗ್ರೆಸ್‌ಗೆ ಬನ್ನಿ ಎಂದು ಕರೆಯುತ್ತಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್ ಕೊಡಿಸ್ತಿವಿ ಬನ್ನಿ ಅಂತಾರೆ. ಅದರೆ ನನಗೂ ಒಂದು ಕಮಿಟ್ಮೆಂಟ್ ಇದೆಯಲ್ಲ. ನಾನು ದೊಡ್ಡ ಲೀಡರ್ ತರ ನಡೆದುಕೊಳ್ಳಲ್ಲ, ಮಾತನಾಡಲ್ಲ. ಮಂಡ್ಯ ಜನ ನನ್ನ ಜೊತೆ ಇದ್ದಾರೆ ಅನ್ನೋ ವಿಶ್ವಾಸ ಇದೆ. ಕಾಂಗ್ರೆಸ್‌ನ ಒಂದಷ್ಟು ನಾಯಕರು ಕಾಂಗ್ರೆಸ್‌ಗೆ ಬರುವಂತೆ ನನ್ನ ಜೊತೆ ಮಾತನಾಡಿದ್ದು ನಿಜ. ಮೈತ್ರಿಯಲ್ಲಿ ಮಂಡ್ಯ ಜೆಡಿಎಸ್‌ಗೆ ಬಿಟ್ಟು ಕೊಟ್ರೆ ಏನ್ಮಾಡ್ತಿರ ಎಂಬ ಪ್ರಶ್ನೆಗೆ ಮುಂದೆ ನೋಡಣ ಎನ್ನುವ ಮೂಲಕ ಸುಮಲತಾ, ರಾಜಕೀಯ ದಾಳ ಉರುಳಿಸಿದ್ದಾರೆ. ಅದರಲ್ಲೂ ಕಾಂಗ್ರೆಸ್‌ಗೆ ಬನ್ನಿ ಎಂದು ಕರೆಯುತ್ತಿದ್ದಾರೆ ಎನ್ನುವ ಮೂಲಕ ಬಿಜೆಪಿ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಸೇರೋದು ಖಚಿತ ಅನ್ನೋ ಸಂದೇಶ ರವಾನೆ ಮಾಡಿದ್ದಾರೆ. ಮಂಡ್ಯವನ್ನು ಜೆಡಿಎಸ್ ಬಿಟ್ಟು ಕೊಡಲ್ಲ ಅನ್ನೋದು ಸುಮಲತಾ ಸೇರಿದಂತೆ ಎಲ್ಲರಿಗೂ ಗೊತ್ತಿರೋ ಸಂಗತಿ. ಆದರೆ ಕಳೆದ ಚುನಾವಣೆ ರೀತಿಯಲ್ಲೇ ಜೆಡಿಎಸ್ ಪಕ್ಷವನ್ನು ಸೋಲಿಸುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ. ಅದೇ ಕಾರಣಕ್ಕೆ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಆದರೆ ಈ ಅಸ್ತ್ರಕ್ಕೆ ಜೆಡಿಎಸ್ ಪ್ರತ್ಯಾಸ್ತ್ರ ಹೇಗಿರುತ್ತೆ ಅನ್ನೋದ್ರ ಮೇಲೆ ಚುನಾವಣೆ ಕಾವು ಪಡೆಯಲಿದೆ.
ಕೃಷ್ಣಮಣಿ