ದಾವಣಗೆರೆಯಲ್ಲಿ ಮುಸ್ಲಿಮರೇ ಇಲ್ಲದ ಊರಿನಲ್ಲೂ ವಕ್ಸ್ ಬೋರ್ಡ್ಗೆ ಆಸ್ತಿ ನೋಂದಣಿ ಆಗಿದೆ.ಸುಂಕದಕಟ್ಟೆ ಗ್ರಾಮದ ITI ಕಾಲೇಜ್ ಪಕ್ಕದಲ್ಲಿರೋ ಗೋಮಾಳ ಜಮೀನು, ಹೊನ್ನಾಳಿ ಜಾಮೀಯಾ ಮಸೀದಿಗೆ ಗೆಜೆಟ್ ಆಗಿದ್ದು, ಇದೀಗ ವಕ್ಸ್ ಬೋರ್ಡ್ ಆದೇಶಕ್ಕೆ ಮಾಜಿ ಸಚಿವ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಹೊನ್ನಾಳಿ ತುಂಗಭದ್ರ ತಟದಲ್ಲಿ 60 ಕೋಟಿ ಮೌಲ್ಯದ 24 ಎಕರೆ ಆಸ್ತಿ ವಕ್ಸ್ ಹೆಸರಿಗೆ ಬರೆಯಲಾಗಿದೆ. ರೈತರ ಜಮೀನು, ಬಗರ್ ಹುಕುಂ, ಗೋಮಾಳ ಜಮೀನು ವಕ್ಸ್ ವಶಪಡಿಸಿಕೊಂಡಿದೆ. ಒಂದು ಸಮುದಾಯವನ್ನ ಮೆಚ್ಚಿಸಲು ಈ ರೀತಿ ಮಾಡೋದು ಸರಿಯಲ್ಲ ಅಂತ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.