ಕೋಟೆನಾಡು ಚಿತ್ರದುರ್ಗ (chitradurga) ಲೋಕಸಭಾ ರಣಕಣ ರಂಗೇರುತ್ತಿದೆ. ಬಿಜೆಪಿ (bjp) ವಲಯದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯಶ್ರೀ (basavamurthy madara chennaiah shri) ಅವರನ್ನು ಅಭ್ಯರ್ಥಿ ಮಾಡಲು ಹೆಸರು ಮುನ್ನಲೆಗೆ ಬಂದಿದೆ. ಅಭ್ಯರ್ಥಿಯಾಗಿ ಬಸವಮೂರ್ತಿ ಮಾದಾರ ಶ್ರೀಗಳ ಹೆಸರು ಮುನ್ನಲೆಗೆ ಬಂದಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಲೋಕಸಭಾ ಸ್ಪರ್ಧೆಗೆ ಇಳಿಸಲು ಬಿಜೆಪಿ ರಾಜ್ಯ ಹಾಗು ಕೇಂದ್ರ ನಾಯಕರು ಬಾರಿ ಕಸರತ್ತು ಮಾಡಿದ್ದಾರೆ. ಎಸ್ಸಿ (sc) ಮೀಸಲು ಕ್ಷೇತ್ರವಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಕೊನೆ ಕ್ಷಣದಲ್ಲಿ ಟಿಕೆಟ್ ನಿರಾಕರಿಸಿದ್ದರು. ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀಗಳನ್ನ ಕಣಕ್ಕಿಳಿಸಲು RSS ಕೂಡ ಚಿಂತನೆ ಮಾಡ್ತಿದೆ ಎನ್ನಲಾಗಿದೆ.
![](https://pratidhvani.com/wp-content/uploads/2024/02/prajavani_2024-02_37be656e-a2e9-4997-bee4-12fe2f227f6d_file7lhmqohrqyp1jwvrckdw-jpg.webp)
ಸಂಘ ಪರಿವಾರದ ಮುಖಂಡರು ಶ್ರೀಗಳ ನಿರಂತರ ಸಂಪರ್ಕದಲ್ಲಿದ್ದು, ಯೋಗಿ ಆಧಿತ್ಯನಾಥ್ (yogiadithyanath) ರೀತಿ ಚೆನ್ನಯ್ಯ ಶ್ರೀಗಳನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ಸಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಎಡಗೈ ಮತ ಸೆಳೆಯಲು ಮಾದಾರ ಶ್ರೀಗಳನ್ನು ಬಳಸಿಕೊಳ್ಳಲು BJP ಪ್ಲಾನ್ ಮಾಡಿದೆ ಎನ್ನಲಾಗ್ತಿದೆ. ಚಿತ್ರದುರ್ಗ ಕ್ಷೇತ್ರದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮಾದಿಗ ಸಮುದಾಯದ ಮತದಾರರು ಇದ್ದಾರೆ. ಸ್ವಾಮೀಜಿಯನ್ನ ರಾಜಕಾರಣಕ್ಕೆ ಕರೆತಂದರೆ ಆ ಮತಗಳು ಒಟ್ಟಿಗೆ ಬಿಜೆಪಿ ಬರಲಿದೆ ಅನ್ನೋದು ಲೆಕ್ಕಾಚಾರ. ಈಗಾಗಲೇ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ (A Narayanaswamy) ಚುನಾವಣೆ ನಿಲ್ಲಲ್ಲ ಎಂದಿದ್ದು, ಬೇರೆ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ.
#chitradurga #mpelection #bjp