ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ಮಾಜಿ ಕೇಂದ್ರ ಸಚಿವೆ ಉಮಾಭಾರತಿ ಅವರು ಮಾರ್ಚ್ 13 ರ ಭಾನುವಾರದಂದು ಭೋಪಾಲ್ನ ಆಜಾದ್ ನಗರ ಪ್ರದೇಶದ ಮದ್ಯದಂಗಡಿಗೆ ದೊಡ್ಡ ಎಕಲ್ಲನ್ನು ಎಸೆದ ಘಟನೆ ಡೆದಿದೆ.
ಮಧ್ಯಪ್ರದೇಶದಲ್ಲಿ ಮದ್ಯಪಾನ ನಿಷೇಧಕ್ಕೆ ಒತ್ತಾಯಿಸುತ್ತಿರುವ ಭಾರತಿ ಅವರು, ಮದ್ಯಪಾನವನ್ನು ನಿಷೇಧಿಸಬೇಕು ಎಂಬ ಸುದೀರ್ಘ ಥ್ರೆಡ್ನ ಭಾಗವಾಗಿ ತಮ್ಮದೇ ಆದ ಟ್ವಿಟರ್ ಹ್ಯಾಂಡಲ್ನಿಂದ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ.
ವೀಡಿಯೊದಲ್ಲಿ, ಭಾರತಿ , ತನ್ನ ಬೆಂಬಲಿಗರ ಗುಂಪಿನಿಂದ ಮದ್ಯದಂಗಡಿಗೆ ಪ್ರವೇಶಿಸಿ ಕೆಲವು ಬಾಟಲಿಗಳ ಮೇಲೆ ಕಲ್ಲು ಎಸೆದು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ವಿಡಿಯೋದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯನ್ನು ಕೂಡ ಕಾಣಬಹುದು, ಆದರೆ, ಅವರು ಈ ಕೃತ್ಯವನ್ನು ತಡೆಯುವ ಯಾವುದೇ ಪ್ರಯತ್ನಿ ಮಾಡುವುದಿಲ್ಲ.
ಟ್ವಿಟರ್ ಥ್ರೆಡ್ನಲ್ಲಿ, ಭಾರತಿ ಅವರು ಈ ಪ್ರದೇಶದಲ್ಲಿ ಕಾರ್ಮಿಕರ ಸೆಟೆಲ್ಮೆಂಟ್ಗಳು ನಡೆಯುತ್ತವೆ, ದೇವಾಲಯಗಳು, ಸಣ್ಣ ಮಕ್ಕಳ ಶಾಲೆಗಳಿವೆ ಮತ್ತು “ಮಹಿಳೆಯರು ತಮ್ಮ ವರಾಂಡಾಗಳಿಗೆ ಬಂದಾಗ, ಪುರುಷರು ಎದ್ದು ಮೂತ್ರ ವಿಸರ್ಜನೆ ಮಾಡುವ ಮೂಲಕ ಅವಮಾನ ಮಾಡುತ್ತಾರೆ” ಎಂದು ಬೆರೆದುಕೊಂಡಿದ್ದಾರೆ.
ಕಾರ್ಮಿಕರು ತಮ್ಮ ಸಂಪೂರ್ಣ ಸಂಪಾದನೆಯನ್ನು ಮದ್ಯಕ್ಕೆ ವ್ಯಯಿಸುತ್ತಾರೆ ಮತ್ತು ಅಂಗಡಿಯು “ಸರ್ಕಾರಿ ನೀತಿಗೆ ವಿರುದ್ಧವಾಗಿದ್ದು” ಸ್ಥಳೀಯರು ಅದರ ವಿರುದ್ಧ “ಧರಣಿ” ಮಾಡುತಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯ ಬಿಜೆಪಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಮಧ್ಯಪ್ರದೇಶದ ಬಿಜೆಪಿ ಮತ್ತು ಕಾಂಗ್ರೆಸ್ನ ಟ್ವಿಟರ್ ಹ್ಯಾಂಡಲ್ಗಳನ್ನು ಟ್ಯಾಗ್ ಮಾಡುವ ಮೂಲಕ ಭಾರತಿ ಅವರು “ವಾರದೊಳಗೆ ಅಂಗಡಿಯನ್ನು ಮುಚ್ಚುವಂತೆ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ” ಎಂದು ಹೇಳಿದ್ದಾರೆ.
ಘಟನೆಯ ಮೂರು ದಿನಗಳ ಮೊದಲು, ಮುಖ್ಯಮಂತ್ರಿಯವರ ಸರಣಿ ಟ್ವೀಟ್ಗಳ ಪ್ರಕಾರ, “ಮದ್ಯಪಾನ ಮತ್ತು ವ್ಯಸನದಂತಹ ಸಾಮಾಜಿಕ ಸಮಸ್ಯೆಯನ್ನು” ಪರಿಹರಿಸಲು ಭಾರತಿ ಚೌಹಾಣ್ ಅವರನ್ನು ತಮ್ಮ ನಿವಾಸದಲ್ಲಿ ಭೇಟಿಯಾಗಿದ್ದರು.
ಸಾಮಾಜಿಕ ಸಂಘಟನೆಗಳು ಮತ್ತು ನಾಗರಿಕರೊಂದಿಗೆ ಸರ್ಕಾರವು ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ನಡೆಸಲಿದೆ ಎಂದು ಭಾರತಿಗೆ ತಿಳಿಸಿದ್ದನ್ನು ಚೌಹಾಣ್ ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ ಮತ್ತು ಈ ಅಭಿಯಾನಗಳನ್ನು ಬೆಂಬಲಿಸುವಂತೆ ಭಾರತಿ ಅವರನ್ನು ಒತ್ತಾಯಿಸಿದರು.
ಆದಾಗ್ಯೂ, ಈ ವರ್ಷ ಜನವರಿ 18 ರಂದು, ಮಧ್ಯಪ್ರದೇಶ ಸರ್ಕಾರವು ಹೊಸ ಅಬಕಾರಿ ನೀತಿಯನ್ನು ಘೋಷಿಸಿತು, ಇದರಲ್ಲಿ ಮದ್ಯದ ಬೆಲೆಯನ್ನು 20% ರಷ್ಟು ಕಡಿತಗೊಳಿಸಿತು, ಜೊತೆಗೆ ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳು ಮತ್ತು ಆಯ್ದ ಸೂಪರ್ಮಾರ್ಕೆಟ್ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿತು. ಹಲವಾರು ನಗರಗಳಲ್ಲಿ, ಮತ್ತು ವಾರ್ಷಿಕವಾಗಿ ರೂ 1 ಕೋಟಿಗಿಂತ ಹೆಚ್ಚು ಆದಾಯ ಗಳಿಸುವ ವ್ಯಕ್ತಿಗಳಿಗೆ ‘ಹೋಮ್ ಬಾರ್ ಲೈಸೆನ್ಸ್’ಗಳನ್ನು ನೀಡುವುದಾಗಿ ಹೇಳಿದೆ.
ಇದಲ್ಲದೆ, ಬಿಜೆಪಿ ರಾಜ್ಯ ವಕ್ತಾರರಾದ ಹಿತೇಶ್ ಬಾಜ್ಪೇಯ್ ಅವರು ರಾಜ್ಯದಲ್ಲಿ ಮದ್ಯವನ್ನು ನಿಷೇಧಿಸುವ ಅವರ “ಅಭಿಯಾನ” ಅವರ ವೈಯಕ್ತಿಕ ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಬಿಜೆಪಿಯು ಭಾರತಿ ಅವರ ನಡೆಯಿಂದ ದೂರವಿರಲು ಪ್ರಯತ್ನಿಸಿತು.