• Home
  • About Us
  • ಕರ್ನಾಟಕ
Saturday, January 17, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿಶೇಷ

20 ಸಾವಿರಕ್ಕೂ ಹೆಚ್ಚು ಭಕ್ತರನ್ನು ಸ್ವಾತಂತ್ರ್ಯ ಹೋರಾಟಕ್ಕಿಳಿಸಿದ ಇಂಚಗೇರಿ ಮಠ

ರಾಕೇಶ್ ಬಿಜಾಪುರ್ by ರಾಕೇಶ್ ಬಿಜಾಪುರ್
January 26, 2022
in ವಿಶೇಷ
0
20 ಸಾವಿರಕ್ಕೂ ಹೆಚ್ಚು ಭಕ್ತರನ್ನು ಸ್ವಾತಂತ್ರ್ಯ ಹೋರಾಟಕ್ಕಿಳಿಸಿದ ಇಂಚಗೇರಿ ಮಠ
Share on WhatsAppShare on FacebookShare on Telegram
ADVERTISEMENT

1929 ರ ಪ್ರಾಯದಲ್ಲೆ ಮಹಾದೇವರು ಬ್ರಿಟಿಷರ ಹುಟ್ಟಡಗಿಸಲು ನಿರ್ಧರಿಸಿ, ತಮ್ಮ ಅನುಯಾಯಿಗಳೊಂದಿಗೆ ಸೇರಿ ಹುಲಕೋಟೆ, ಸಾವಳಗಿ, ಇಂಚಗೇರಿ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನ ಅಪಹರಿಸಿದ್ದರು. ಹಲವು ಅಂಚೆ, ನಾಡ ಕಚೇರಿಗೆ ಬೆಂಕಿ ಹಚ್ಚಿದ್ದರು. ಬ್ರಿಟಿಷರ ಸಂಪರ್ಕ ಸಾಧನವಾಗಿದ್ದ ರೈಲು ಹಳಿಗಳನ್ನ ಕಿತ್ತಹಾಕಿ ಠಾಣೆಗಳನ್ನ ಧ್ವಂಸಗೊಳಿಸಿದ್ದರು. ಇನ್ನು ಬ್ರಿಟಿಷ ಸರ್ಕಾರಕ್ಕೆ ಸೇರಬೇಕಿದ್ದ ಬೊಕ್ಕಸವನ್ನ ದೋಚಿದ್ದು ಆ ಸಮಯದಲ್ಲಿ ಬಾರಿ ಸಾಹಸ ಪ್ರಕರಣವಾಗಿತ್ತು. ಇದರ ಫಲವಾಗಿ 27 ಬಾರಿ ಜೈಲು ವಾಸ ಅನುಭವಿಸಿದ್ದಾರೆ.

ಇವತ್ತಿಗೂ ಈ ಮಠದ ಸಾವಿರಾರು ಅನುಯಾಯಿಗಳು ಕೇಂದ್ರ ಸರ್ಕಾರದ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪಿಂಚಣಿ ಪಡೆದುಕೊಳ್ತಿದ್ದಾರೆ ಎನ್ನೊದೆ ಸೋಜಿಗ. ಇನ್ನು ಸ್ವಾತಂತ್ರ ನಂತರ ಮಠಕ್ಕೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿಯವರ ಮೊಮ್ಮಗ ಅರುಣ ಗಾಂಧಿ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಮಾಧವಾನಂದರ ಕೊಡುಗೆ ಹಾಗೂ ಮಠದ ಪಾತ್ರದ ಬಗ್ಗೆ ವಿದೇಶಗಳಲ್ಲಿ ಅತ್ಯಧಿಕ ಪ್ರಸಾರ ಉಳ್ಳ “ದಿ ಇಂಪ್ರಿಂಟ್” ಇಂಗ್ಲಿಷ ಪತ್ರಿಕೆಯಲ್ಲಿ ಬರೆದಿದ್ದರು. ಇದನ್ನ ಓದಿದ ಅದೇಷ್ಟೋ ವಿದೇಶಿಗರು ಕೂಡ ಸದ್ಯ ಮಠದ ಭಕ್ತರಾಗಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿ ಜನಿಸಿದ ಮಾಧವಾನಂದರು ತಮ್ಮ 22 ನೇ ವಯಸ್ಸಿನಲ್ಲೆ ಸ್ವಾತಂತ್ರ ಹೋರಾಟಲ್ಲಿ ಪಾಲ್ಗೊಂಡರು. ಚಲೇ ಜಾವ್ ಚಳುವಳಿ, ಉಪ್ಪಿನ ಸತ್ಯಾಗ್ರಹ, ಗೋವಾ ವಿಮೋಚನೆ ಸೇರಿದಂತೆ ಅನೇಕ ಹೋರಾಟಗಳಲ್ಲಿ ಮಾಧವಾನಂದ ಪ್ರಭುಜಿಗಳ ತಮ್ಮ ಮಠದ ಭಕ್ತರೊಂದಿಗೆ ಪಾಲ್ಗೊಂಡಿದ್ದರು. ಮಹಾತ್ಮಾ ಗಾಂಧೀಜಿ, ಸುಭಾಷ ಚಂದ್ರ ಬೋಸ್ ರೊಂದಗೆ ನಿಕಟ ಸಂಪರ್ಕ ಹೊಂದಿದ್ದರು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಬಳಿ ಇರುವ ಗಿರೀಶ ಆಶ್ರಮದಲ್ಲಿ ಸ್ವಾತಂತ್ರ್ಯ ಹೋರಾಟದ ಕುರಿತಾಗಿ ಮಾಧವಾನಂದ ಪ್ರಭುಜಿಗಳು ನಡೆಸಿದ ಗುಪ್ತ ಸಭೆಯಲ್ಲಿ ಸುಬಾಷಚಂದ್ರ ಬೋಸ್ ಪಾಲ್ಗೊಂಡಿದ್ದರು ಅನ್ನೋದು ಗಮನಾರ್ಹ.

1938 ರಲ್ಲಿ ಸ್ವಾತಂತ್ರ ಹೋರಾಟ ಉಗ್ರ ಸ್ವರೂಪ ಪಡೆದಾಗ ಮಾಧವಾನಂದರು ತಮ್ಮ ಮಠದ ಭಕ್ತರೊಂದಿಗೆ ಜೈಲು ವಾಸ ಅನುಭವಿಸಿದ್ದರು. ಆ ಸಂದರ್ಭದಲ್ಲಿ ಮಾಧವಾನಂದರ ಉಗ್ರ ಸ್ವರೂಪದ ಹೋರಾಟ ಕಂಡ ಬ್ರಿಟಿಷ್ ಸರ್ಕಾರ ಅವರ ಮೇಲೆ ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಿತ್ತು. ಅದರಂತೆ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಭಕ್ತರನ್ನ ಒಟ್ಟು ಗೂಡಿಸಲು ಮಾಧವಾನಂದರು ತಮ್ಮ ವಾಹನದಲ್ಲಿ ಹೊರಟಿದ್ದಾಗ ಬೆಳಗಾವಿ ಜಿಲ್ಲೆಯ ಗೋಕಾಕ್ ಬಳಿಯಲ್ಲಿ ಬ್ರಿಟಿಷ್ ಪೊಲೀಸರು ಇವರ ಮೇಲೆ ಗುಂಡು ಹಾರಿಸಿದರು. ಹಲವು ಸುತ್ತು ಗಂಡು ಹಾರಿಸಿದ ಪೊಲೀಸರು ಬಂದು ನೋಡಿದಾಗ ಅಲ್ಲಿ ಮಾಧವಾನಂದರು ಇರಲೆ ಇಲ್ಲ. ಅವರು ಅಂದುಕೊಂಡಂತೆ ಗೋಕಾಕ ಬಳಿಯ ಹಳ್ಳಿಯೊಂದರಲ್ಲಿ ಸ್ವಾತಂತ್ರ್ಯ ಹೋರಾಟದ ಉದ್ದೇಶಕ್ಕಾಗಿ ನಡೆದ ಗುಪ್ತ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದನ್ನ ಮಾಧವಾನಂದ ಪ್ರಬುಜಿಗಳ ಪವಾಡ ಎನ್ನಲಾಗಿದೆ. ಈ ಚಮತ್ಕಾರವನ್ನ ಕಂಡಿದ್ದ ಬ್ರಿಟಿಷ್ ಪೊಲೀಸರು ಮತ್ಯಾವತ್ತು ಮಾಧವಾನಂದರ ಮೇಲೆ ಗುಂಡು ಹಾರಿಸುವ ಪ್ರಯ್ನಕ್ಕೆ ಹೋಗಲಿಲ್ಲವಂತೆ. ಹೀಗಾಗಿ ಮಾಧವಾನಂದರ ಅನುಯಾಯಿಗಳು ಅವರನ್ನ ದೇವರು ಅಂತಲೇ ಸಂಬೋದಿಸುತ್ತಿದ್ದರು. ಈಗಲು ಮಠದಲ್ಲಿ ಅದು ಜಾರಿಯಲ್ಲಿದೆ.

ಕೇವಲ ಭಾರತ ಸ್ವಾತಂತ್ರ್ಯ ಅಷ್ಟೆ ಅಲ್ಲದೆ ಮಾಧವಾನಂದರು ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಪ್ರಮುಖ ಪಾತ್ರವಹಿಸಿ ಮೈಸೂರು ಕರ್ನಾಟಕವಾಗಬೇಕೆಂದು ಉಪವಾಸ ಸತ್ಯಾಗ್ರಹ ಮಾಡಿದ್ದರು. ಹೀಗಾಗಿ ಕರ್ನಾಟಕ ಸರ್ಕಾರ ಸುವರ್ಣ ಕರ್ನಾಟಕ ಸಂಭ್ರಮದ ಸಂದರ್ಭದಲ್ಲಿ ಮಾಧವಾನಂದ ಪ್ರಬುಜಿಗಳಿಗೆ ಮರಣೋತ್ತರವಾಗಿ “ಕರ್ನಾಟಕ ಏಕೀಕರಣ ಪ್ರಶಸ್ತಿ” ನೀಡಿ ಗೌರವಿಸಿದೆ. ಇನ್ನು ಸ್ವಾತಂತ್ರ್ಯ ನಂತರ ಉಂಟಾದ ರೈತರು ಹಾಗೂ ಭೂ ಹಿಡುವಳಿದಾರರ ನಡುವಿನ ಸಂಘರ್ಷ, ರಜಾಕರ ಹಾವಳಿ ಹತ್ತಿಕ್ಕುವಲ್ಲು ಶ್ರೀಗಳ ಕೊಡುಗೆ ಅಪಾರವಾಗಿದೆ. ಭಾರತಕ್ಕೆ ಸ್ವಾತಂತ್ರ ಸಿಕ್ಕ ನಂತರವು ಗೋವಾ ಹಾಗೂ ದೀವ್, ದಮನ್ ದ್ವೀಪಗಳು ಪೋರ್ಚುಗೀಜರ ಹಿಡಿತದಲ್ಲಿದ್ದು. ಇದನ್ನ ವಿರೋಧಿಸಿದ್ದ ಮಾಧವಾನಂದರು ಗೋವಾ ರಾಜ್ಯಧಾನಿ ಪಣಜಿಯಲ್ಲಿ ಭಾರತ ದೇಶ ಧ್ವಜ ಹಾರಾಡಿಸಿ ಪೋರ್ಚುಗಿಜರ ವಿರುದ್ಧ ಹೋರಾಟ ಮಾಡಿದ್ದರು. ಈ ಮೂಲಕ ಗೋವಾ ವಿಮೋಚನೆ ಮಾಡುವ ಮೂಲಕ ಗೋವಾ ರಾಜ್ಯವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಮಾಡುವಲ್ಲಿ ಮಾಧವಾನಂದರ ಪಾತ್ರ ಹಿರಿದಾಗಿದೆ.

ಭಾರತ ಸ್ವಾತಂತ್ರ ಹೋರಾಟದಲ್ಲಿ ಉಗ್ರ ಸ್ವರೂಪದ ಹೋರಾಟದಿಂದಲೆ ಬ್ರೀಟಿಷರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಮಾಧವಾನಂದ ಪ್ರಬುಜಿಗಳು ಸಮಾಜದಲ್ಲಿಯ ಜಾತೀಯತೆ ಹೋಗಲಾಡಿಸಲು 20 ಸಾವಿರಕ್ಕೂ ಅಧಿಕ ಅಂತರ್ ಜಾತಿ, ಅಂತರ್ ಧರ್ಮಗಳ ಮದುವೆ ಮಾಡಿದ್ದಾರೆ. ಸ್ವತಃ ತಮ್ಮ ಮೊಮ್ಮಗಳನ್ನ ಮುಸ್ಲಿಂ ಸಮೂದಾಯದ ಯುವಕನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಈ ಮೂಲಕ ಸಮಾಜದಲ್ಲಿನ ಮೇಲು-ಕೀಳು, ಜಾತೀಯತೆ ಹೋಗಲಾಡಿಸಿ ಇಂಚಗೇರಿ ಮಠವನ್ನ ಜಾತ್ಯಾತೀತ ಮಠವನ್ನಾಗಿ ರೂಪಿಸಿದ ಕೀರ್ತಿ ಮಾಧವಾನಂದ ಪ್ರಭುಜಿಗಳಿಗೆ ಸಲ್ಲುತ್ತದೆ. ವಿಶೇಷ ಅಂದರೆ 200 ವರ್ಷಗಳ ಹಿಂದೆ ಗುರುಲಿಂಗ ಜಂಗಮ ಮಹಾರಾಜರಿಂದ ಸ್ಥಾಪನೆಯಾದ ಮಠದ ತತ್ವಾದರ್ಶಗಳಿಗೆ ವಿದೇಶಿಗರು ಬೆರಗಾಗಿದ್ದಾರೆ. ಇಲ್ಲಿನ ಭಾಹುಸಾಹೇಬ ಮಹಾರಾಜರಿಂದ ಉಪದೇಶ ಪಡೆದ ಪ್ರಪಂಚದ ಮೂಲೆ ಮೂಲೆಯ ವಿದೇಶಿಗರ ವಂಶಜರು ಇಂದಿಗು ಮಠಕ್ಕೆ ನಡೆದುಕೊಳ್ತಾರೆ.

1945ರ ವೇಳೆ ಮಹಾತ್ಮಾ ಗಾಂಧೀಜಿ ಕರೆಕೊಟ್ಟಿದ್ದ ಕಾನೂನು ಭಂಗ ಚಳುವಳಿ, ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹಗಳಲ್ಲಿ ಮಾಧವಾನಂದರು ತಮ್ಮ ಶಿಷ್ಯ ಬಳಗದೊಂದಿಗೆ ಪಾಲ್ಗೊಂಡು ಉತ್ತರ ಕರ್ನಾಟಕ ಭಾಗದಲ್ಲಿ ಹೋರಾಟದ ಧಿಕ್ಕನ್ನೆ ಬದಲಾಯಿಸಿದ್ದರು. ಬಿಜಾಪೂರ, ಬಾಗಲಕೋಟೆ, ಹಳೆ ದಾರವಾಡ, ದಾವಣಗೇರೆ ಭಾಗಗಳಲ್ಲಿ ಗುಪ್ತ ಸಭೆಗಳನ್ನ ನಡೆಸಿ ತಮ್ಮ ಶಿಷ್ಯರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸುತ್ತಿದ್ದರು. 1945 ರ ವೇಳೆ ಹುಬ್ಬಳ್ಳಿಯ ಗಿರೀಶ ಆಶ್ರಮದಲ್ಲಿ ನಡೆದ ಗುಪ್ತ ಸಭೆಗಳಲ್ಲಿ ಸುಭಾಷ್ ಚಂದ್ರ ಬೋಸ್ ಕೂಡ ಪಾಲ್ಗೊಂಡು ಸ್ವಾತಂತ್ರ್ಯ ಹೋರಾಟದ ಕುರಿತು ಮಾಧವಾನಂದ ಪ್ರಭುಗಳೊಂದಿಗೆ ಚರ್ಚಿಸಿದ್ದರು. ಗೋವಾ ವಿಮೋಚನೆಗಾಗಿ, ಪೋರ್ಚುಗೀಜರ ಹಾವಳಿಯ ವಿರುದ್ಧ ಮಹಾದೇವರು ಹೋರಾಟ ನಡೆಸಿದ್ದರು. ಹೀಗೆ ದೇಶದ ಸ್ವಾತಂತ್ರ್ಯಕ್ಕಾಗಿ ಬದುಕನ್ನೆ ಮೀಸಲಿಟ್ಟು ತಮ್ಮ 48 ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು. ಇನ್ನು ಜಾತಿ, ಧರ್ಮಗಳ ನಡುವೆ ಸಂಘರ್ಷಗಳು ನಡೆಯುತ್ತಿದ್ದ ವೇಳೆಯಲ್ಲಿ ಮಾಧವಾನಂದರು ತಮ್ಮ ಮಠದ ಸಪ್ತಾಹಗಳಲ್ಲಿ 25 ಸಾವಿರಕ್ಕೂ ಅಧಿಕ ಅಂತರ್ ಜಾತಿ, ಧರ್ಮಗಳ ವಿವಾಹ ಮಾಡಿದ್ದಾರೆ. ಕೆಲ ಮೂಲಭೂತವಾಧೀಗಳು ಅವರ ನಡೆಯ ಬಗ್ಗೆ ಸಂಶಯ ವ್ಯಕ್ತ ಪಡೆಸಿದಾಗ ತಮ್ಮ ಸ್ವಂತ ಮೊಮ್ಮಗಳನ್ನ ಮುಸ್ಲಿಂದ ಕುಟುಂಬಕ್ಕೆ ಮದುವೆ ಮಾಡಿಕೊಟ್ಟು, ಮುಸ್ಲಿಂ ಧರ್ಮಿಯ ಹೆಣ್ಣು ಮಗಳನ್ನ ತಮ್ಮ ಅಣ್ಣನ ಮಗನಿಗೆ ಕೊಟ್ಟು ಮದ್ವೆ ಮಾಡಿದ್ದರು. ಹೀಗಾಗಿ ಇಂದಿಗೂ ಪ್ರತಿವರ್ಷ ನಡೆಯುವ ಮಾಧವಾನಂದ ಶ್ರೀಗಳ ಪೂಣ್ಯಸ್ಮರಣೆಯ ದಿನ ಅಂತರ್ ಜಾತಿಯ ವಿವಾಹಗಳನ್ನ ಮಾಡಿಕೊಂಡು ಬರಲಾಗುತ್ತಿದೆ.

ಮಹಾದೇವರ ಸ್ಮರಣಾರ್ಥ ಇವತ್ತು ಕೂಡ ಅಂತರ್ ಜಾತಿಯ ವಿವಾಹಗಳು ಜರುಗುತ್ತವೆ.

ಮಾಘ ಸಪ್ತಾಹ ಕಾರ್ಯಕ್ರಮ ನಡೆಯುವ ಹಿಂದಿನ ದಿನ ರಷ್ಯಾ, ಜರ್ಮನಿ, ಇಟಲಿ, ಅಮೇರಿಕಾ ಸೇರಿದಂತೆ ಅನೇಕ ದೇಶಗಳಿಂದ ಮಠಕ್ಕೆ ಆಗಮಿಸಿ ಗುರುಗಳ ಗದ್ದುಗೆಗಳಿಗೆ ಪೂಜೆ ಸಲ್ಲಿಸುತ್ತಾರೆ. ವಿಚಿತ್ರ ಅಂದ್ರೆ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿರುವ ಇಂಚಗೇರಿ ಸಾಂಪ್ರದಾಯದ ಪ್ರಾರ್ಥನೆ, ಭಜನೆಗಳನ್ನ ಕಲಿತು ಆರಾಧಿಸುತ್ತಾರೆ. ಮಠದ 7ನೇ ಧರ್ಮಾಧಿಕಾರಿಗಳಾಗಿದ್ದ ಗುರುಪುತ್ರಪ್ಪ ಮಹಾರಾಜರು ರಷ್ಯಾ ದೇಶದ ಜುಕೋಸ್ಲೋವಾಕಿಯಾದ ಪ್ರಾಗ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಹಾಗೇ ವಿಶ್ವದ ನಾನಾ ದೇಶಗಳ ಪರ್ಯಟನೆ ನಡೆಸಿದ್ದರು. ಹೀಗಾಗಿ ಮಠದ ತತ್ವಾದರ್ಶ, ಸಿದ್ದಾಂತಗಳಿಗೆ ಮನಸೋತ ಅದೇಷ್ಟೋ ವಿದೇಶಿಗರು ಇಂದಿಗು ಸಾಂಪ್ರದಾಯ ಮೆಚ್ಚಿ ಕೊಂಡಾಡುತ್ತಿದ್ದಾರೆ.

ಯಾವುದೇ ಧರ್ಮ, ಜಾತಿ ಇಲ್ಲದ ಭಾರತದ ಏಕೈಕ ಮಠ ಇಂಚಗೇರಿ ಮಠ. ಗುರುಪರಂಪರೆ ಅನ್ನೋದು ನಮ್ಮ ಮಠದ ಮೂಲ ಮಂತ್ರ, ಇಲ್ಲಿ ಯಾವುದೇ ಡಾಂಭಿಕ ಆಚರಣೆಗೆ ಅವಕಾಶವಿಲ್ಲ. ಧ್ಯಾನದ ಮೂಲಕ ಎಲ್ಲವೂ ಪಡೆದುಕೊಳ್ಳಬೇಕು. ಸರ್ವರು ಸಮಾನರು, ದೇವರನ್ನು ನಿನ್ನೊಳಗೆ ಕಾಣು ಎಂಬುದು ಧರ್ಮದ ಮೂಲ. ಗುರುವಿನ ಹಾದಿಯಲ್ಲೆ ನಡೆಯೋದೆ ಭಕ್ತರ ಕಾಯಕ ಎನ್ನುತ್ತಾರೆ ಹಿರಿಯ ಪತ್ರಕರ್ತರು ಹಾಗೂ ಮಠದ ಭಕ್ತರಾದ ಷಡಕ್ಷರಿ ಕಂಪೂನವರ್

20 ಸಾವಿರಕ್ಕೂ ಹೆಚ್ಚು ಭಕ್ತರನ್ನು ಸ್ವಾತಂತ್ರ್ಯ ಹೋರಾಟಕ್ಕಿಳಿಸಿದ ಇಂಚಗೇರಿ ಮಠ
Tags: ಇಂಚಗೇರಿ ಮಠಬ್ರಿಟಿಷರುಮಹಾದೇವರುಸ್ವಾತಂತ್ರ್ಯ ಹೋರಾಟ
Previous Post

50ರ ಸಂಭ್ರಮದಲ್ಲಿ ಕರ್ನಾಟಕ : ರಾಜಪಥದಲ್ಲಿ ದೇಶದ ಗಮನ ಸೆಳೆದ ರಾಜ್ಯದ ʼಜಾನಪದ ಸಿರಿ ಸ್ತಬ್ಧಚಿತ್ರʼ

Next Post

ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಸಿಎಂ ಬೊಮ್ಮಾಯಿಗೆ ಗಣರಾಜ್ಯೋತ್ಸವದಂದೇ ಗಣ್ಯರಿಂದ ಬಹಿರಂಗ ಪತ್ರ

Related Posts

ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ : ಸಿಎಂ ಸಿದ್ದರಾಮಯ್ಯ
Top Story

ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 16, 2026
0

ಬೆಂಗಳೂರಿನಲ್ಲಿ ಅನೇಕ ಭಾಷೆ, ಧರ್ಮಗಳಿದ್ದು, ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕೈಗಾರಿಕೆ ವಲಯ ಮತ್ತು ವಿವಿಧ...

Read moreDetails
ವಿಶ್ವಸಂಸ್ಥೆಯಲ್ಲಿ ಕನ್ನಡತಿಯ ಸಾಧನೆ : ಸೇನಾಧಿಕಾರಿ ಸ್ವಾತಿ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಶ್ಲಾಘನೆ..

ವಿಶ್ವಸಂಸ್ಥೆಯಲ್ಲಿ ಕನ್ನಡತಿಯ ಸಾಧನೆ : ಸೇನಾಧಿಕಾರಿ ಸ್ವಾತಿ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಶ್ಲಾಘನೆ..

January 15, 2026
ಪೌರಾಯುಕ್ತೆ ವಿರುದ್ಧ ನಾಲಿಗೆ ಹರಿಬಿಟ್ಟ ಕೈ ಮುಖಂಡನಿಗೆ ಸಂಕಷ್ಟ : ಎಸ್ಕೇಪ್ ಆದ ರಾಜೀವ್‌ ಗೌಡ…

ಪೌರಾಯುಕ್ತೆ ವಿರುದ್ಧ ನಾಲಿಗೆ ಹರಿಬಿಟ್ಟ ಕೈ ಮುಖಂಡನಿಗೆ ಸಂಕಷ್ಟ : ಎಸ್ಕೇಪ್ ಆದ ರಾಜೀವ್‌ ಗೌಡ…

January 15, 2026
Daily Horoscope: ಇಂದು ಎಲ್ಲಾ ಕ್ಷೇತ್ರದಲ್ಲೂ ಲಾಭ ಪಡೆಯುವ ರಾಶಿಗಳಿವು..!

Daily Horoscope: ಇಂದು ಎಲ್ಲಾ ಕ್ಷೇತ್ರದಲ್ಲೂ ಲಾಭ ಪಡೆಯುವ ರಾಶಿಗಳಿವು..!

January 15, 2026
ಸುರಂಗ ಮಾರ್ಗದಿಂದ ಲಾಲ್ ಬಾಗ್ ಗೆ ಯಾವುದೇ ತೊಂದರೆ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಸುರಂಗ ಮಾರ್ಗದಿಂದ ಲಾಲ್ ಬಾಗ್ ಗೆ ಯಾವುದೇ ತೊಂದರೆ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

January 14, 2026
Next Post
ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಸಿಎಂ ಬೊಮ್ಮಾಯಿಗೆ ಗಣರಾಜ್ಯೋತ್ಸವದಂದೇ ಗಣ್ಯರಿಂದ ಬಹಿರಂಗ ಪತ್ರ

ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಸಿಎಂ ಬೊಮ್ಮಾಯಿಗೆ ಗಣರಾಜ್ಯೋತ್ಸವದಂದೇ ಗಣ್ಯರಿಂದ ಬಹಿರಂಗ ಪತ್ರ

Please login to join discussion

Recent News

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್
Top Story

ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

by ಪ್ರತಿಧ್ವನಿ
January 17, 2026
Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?
Top Story

Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

January 17, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

January 17, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada