ರಾಜ್ಯದ ಒಂದೊಂದೇ ಜಿಲ್ಲೆಗಳಲ್ಲಿ ಬಿಪಿಎಲ್ ಪಡಿತರ ಚೀಟಿ (BPL card) ರದ್ದು ಪ್ರಕ್ರಿಯೆ ಆರಂಭವಾಗಿದ್ದು, ಈಗ ರೇಷ್ಮೆ ನಾಡಿನ ಸರದಿ. ರಾಮನಗರ (Ramnagar) ಜಿಲ್ಲೆಯಲ್ಲಿ ಒಟ್ಟು 11 ಸಾವಿರದ 94 ಬಿಪಿಎಲ್ ಕಾರ್ಡ್ಗಳನ್ನ ರದ್ದು ಮಾಡಲಾಗಿದೆ.
ರಾಮನಗರ ಜಿಲ್ಲೆಯಾದ್ಯಂತ ಇರುವ ತೆರಿಗೆ ಪಾವತಿದಾರರು ಸೇರಿದಂತೆ ವಾರ್ಷಿಕ 1.5 ಲಕ್ಷಕ್ಕೂ ಹೆಚ್ಚು ಆದಾಯ ಹೊಂದಿರುವ ಬಡತನ ರೇಖೆಗೆ ಕಡಿಮೆ ಇರುವ ಬಿಪಿಎಲ್ ಕಾರ್ಡ್ಗಳನ್ನ ಗುರುತಿಸುವಂತೆ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿತ್ತು.
ಈ ಪೈಕಿ ರಾಮನಗರದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಒಟ್ಟು 11 ಸಾವಿರದ 94 ಬಿಪಿಎಲ್ ಕಾರ್ಡ್ಗಳನ್ನ ಗುರುತಿಸಿದ್ದಾರೆ. ಇದ್ರಲ್ಲಿ 6 ತಿಂಗಳಿಂದ 11 ಸಾವಿರ ಮಂದಿಯಲ್ಲಿ 9 ಸಾವಿರ ಮಂದಿ ಪಡಿತರ ತೆಗೆದುಕೊಂಡಿಲ್ಲ. ಇನ್ನು, ಜಿಲ್ಲೆಯಲ್ಲಿ ಒಟ್ಟು 2.95 ಲಕ್ಷ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ಗಳಿದ್ದು, ಪ್ರತಿ ತಿಂಗಳು ಸರ್ಕಾರದಿಂದ ನೀಡಲಾಗ್ತಿರುವ ಪಡಿತರವನ್ನು ಒದಗಿಸಲಾಗುತ್ತಿದೆ.