ಮಳೆಗಾಲದಲ್ಲಿ ತಂಡಿ ಅಥವಾ ಚಳಿ ಹೆಚ್ಚಾಗುತ್ತದೆ ಅದಲು ಸ್ನಾನ ಮಾಡುವ ಹೊತ್ತಲ್ಲಿ ಪ್ರತಿಯೊಬ್ಬರು ಕೂಡ ಬಿಸಿನೀರನ್ನು ಬಳಸುತ್ತಾರೆ ಇನ್ನು ಕೆಲವರು ಅತಿಯಾದ ಬಿಸಿ ನೀರನ್ನು ಬಳಸಿ ಸ್ನಾನವನ್ನು ಮಾಡುತ್ತಾರೆ. ಹೆಚ್ಚು ಬಿಸಿ ನೀರನ್ನ ಬಳಸುವುದರಿಂದ ದೇಹಕ್ಕೆ ಯಾವುದೆಲ್ಲ ಸಮಸ್ಯೆಗಳು ಎದುರಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ..

ತಲೆನೋವು
ಕೆಲವೊಬ್ಬರು ತಲೆಗೆ ಎಣ್ಣೆ ಹಚ್ಚಿರುವ ಕಾರಣ ಅತಿಯಾದ ಬಿಸಿನೀರನ್ನು ಬಳಸಿ ಸ್ನಾನವನ್ನು ಮಾಡುತ್ತಾರೆ . ಆದ್ರೆ ಅತಿಯಾದ ಬಿಸಿ ನೀರನ್ನು ಬಳಸಿ ತಲೆಗೆ ಸ್ನಾನವನ್ನು ಮಾಡುವುದರಿಂದ ತಲೆನೋವು ಕಾಣಿಸಿಕೊಳ್ಳುತ್ತದೆ ಹೆಚ್ಚು ಜನಕ್ಕೆ ಅರ್ಧ ತಲೆನೋವು ಅಥವಾ ನೆತ್ತಿ ನೋವು ಕಾಡುತ್ತದೆ. ಹಾಗಾಗಿ ತಲೆಗೆ ಸ್ನಾನ ಮಾಡುವ ಮುನ್ನ ಉಗುರು ಬೆಚ್ಚನೀರು ಆದಕ್ಕೂ ಸ್ವಲ್ಪ ಬಿಸಿ ನೀರನ್ನು ಬಳಸಿ ಸ್ನಾನ ಮಾಡಿದರೆ ಯಾವುದೇ ರೀತಿಯ ನೋವು ಕಾಣಿಸಿಕೊಳ್ಳುವುದಿಲ್ಲ.

ಡಿಹೈಡ್ರೇಶನ್
ಅತಿಯಾದ ಬಿಸಿ ನೀರನ್ನು ಬಳಸಿ ಸ್ನಾನ ಮಾಡುವುದರಿಂದ ನಿಮ್ಮ ಬಾಡಿ ಡಿ ಹೈಡ್ರೇಟ್ ಆಗುತ್ತದೆ. ಅತಿಯಾದ ಬಿಸಿ ನೀರನ್ನು ಬಳಸಿ ಸ್ನಾನ ಮಾಡುವುದರಿಂದ ನಿಮ್ಮ ಬಾಡಿ ಡಿ ಹೈಡ್ರೇಟ್ ಆಗುತ್ತದೆ. ಹಾಗೂ ಬಾಯಾರಿಕೆ ಕೂಡ ಜಾಸ್ತಿಯಾಗುತ್ತದೆ. ಹಾಗೂ ಚರ್ಮ ಡ್ರೈ ಆಗುತ್ತದೆ.

ತಲೆಸುತ್ತು
ಅತಿಯಾದ ಬಿಸಿ ನೀರನ್ನು ಬಳಸಿ ಸ್ನಾನ ಮಾಡುವುದರಿಂದ ಸುಸ್ತಾಗುತ್ತದೆ ,,ಬಾಯಾರಿಕೆ ಹೆಚ್ಚಾಗುತ್ತದೆ. ಹಾಗೂ ಕೆಲವರಿಗೆ ನಿಲ್ಲಲು ಕೂಡ ಸಾಧ್ಯವಾಗುವುದಿಲ್ಲ ತಲೆಸುತ್ತು ಕಾಣಿಸಿಕೊಳ್ಳುತ್ತದೆ. ಕಣ್ಣು ಮಂಜಾಗುತ್ತದೆ. ಅದರಲ್ಲೂ ವಯಸ್ಸಾದವರು ಅತಿಯಾದ ಬಿಸಿ ನೀರನ್ನು ಬಳಸದೆ ಈ ಸಮಸ್ಯೆಗಳು ಎದುರಾಗುವುದು ಖಂಡಿತ.
ಇದೆಲ್ಲದರ ಜೊತೆಗೆ ಕೆಲವರಿಗೆ ವಾಕರಿಕೆ ಬಂದಂತಾಗುವುದು , ಚರ್ಮ ಒಣಗುವುದು, ಕೂದಲು ಉದುರುವಿಕೆ ಹೆಚ್ಚಾಗುವುದು, ಇವೆಲ್ಲವೂ ಕೂಡ ಅತಿಯಾದ ಬಿಸಿ ನೀರನ್ನು ಬಳಸುವುದರಿಂದ ಶುರುವಾಗುತ್ತದೆ.