ಎಸಿ ಬಳಕೆ ತುಂಬಾನೇ ಹೆಚ್ಚಾಗಿದೆ ಅತಿ ಹೆಚ್ಚು ಜನ ಏಸಿಯನ್ನ ಉಪಯೋಗಿಸುತ್ತಾರೆ ರಾತ್ರಿ ಹಗಲು ಎಂದದೆ ಎಸಿ ಯಾವಾಗಲೂ ಆನ್ ನಲ್ಲಿ ಇರುತ್ತದೆ ಆದರೆ ಹೆಚ್ಚು ಏಸಿಯನ್ನ ಬಳಸುವುದರಿಂದ ಅದರಲ್ಲಿ ಉತ್ಪತ್ತಿಯಾಗುವ ತಂಪು ಗಾಳಿಯಿಂದ ಆರೋಗ್ಯಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಹಾಗಾದ್ರೆ ಯಾವುದೆಲ್ಲ ಸಮಸ್ಯೆ ಅನ್ನೋದ್ರ ವಿವರ ಇಲ್ಲಿದೆ ನೋಡಿ.

ಚರ್ಮ ಒಣಗುತ್ತದೆ
ಅತಿಯಾಗಿ ಎಸಿ ಯನ್ನು ಬಳಸುವುದರಿಂದ ಅದರಲ್ಲಿ ಬರುವಂತಹ ತಂಪಾದ ಗಾಳಿಯಿಂದ ನಮ್ಮ ಚರ್ಮವು ಒಣಗುತ್ತದೆ ಮಾತ್ರವಲ್ಲದೆ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ.
ಕಣ್ಣುಗಳು ಒಣಗುತ್ತದೆ
ಬೆಳಗ್ಗೆ ಕೆಲಸ ಮಾಡುವಾಗ ಅಥವಾ ರಾತ್ರಿ ಹೊತ್ತು ಮಲಗುವಾಗ ಅತಿಯಾಗಿ ಎಸಿಯನ್ನ ಬಳಸುವುದರಿಂದ ಕಣ್ಣಿನಲ್ಲಿರುವಂತಹ ನೀರಿನ ತೇವಾಂಶ ಕಡಿಮೆಯಾಗಿ ಕಣ್ಣು ಒಣಗುತ್ತದೆ. ಇದರಿಂದ ಕಣ್ಣು ಕೆಂಪಾಗುವಂಥದ್ದು ಕಣ್ಣಿನಲ್ಲಿ ಹೆಚ್ಚು ಉರಿಯುವಂತದ್ದು ಶುರುವಾಗುತ್ತದೆ. ಕಣ್ಣಿನಲ್ಲಿ ಅಲರ್ಜಿ ಆಗುವುದಕ್ಕೆ ಇವು ಪ್ರಮುಖ ಕಾರಣವಾಗುತ್ತದೆ.

ಶ್ವಾಸಕೋಶದಲ್ಲಿ ತೊಂದರೆ
ಎಸಿ ಬಳಕೆ ಹೆಚ್ಚಾದರೆ ಶ್ವಾಸಕೋಶದಲ್ಲಿ ತೊಂದರೆ ಉಂಟಾಗುತ್ತದೆ ,ಹಾಗೂ ಮೂಗು ಒಣಗುವುದು ಗಂಟಲು ಡ್ರೈಯಾಗುವುದು ಹಾಗೂ ಒಣ ಕೆಮ್ಮು ಹೆಚ್ಚಾಗುತ್ತದೆ ಇದರಿಂದಾಗಿ ಉಸಿರಾಟದ ಸಮಸ್ಯೆ ಶುರುವಾಗುತ್ತದೆ. ಇದರಲ್ಲಿ ಬರುವಂತಹ ಗಾಳಿಯು ಉಸಿರಾಟದ ಸಮಸ್ಯೆಯನ್ನ ಹೆಚ್ಚು ಮಾಡುತ್ತದೆ ದೇಹದ ಒಳಭಾಗವನ್ನು ಕೂಡ ಒಣಗುವಂತೆ ಮಾಡುತ್ತದೆ.

ತಲೆನೋವಿನ ಸಮಸ್ಯೆ
ಹೆಚ್ಚು ಜನರಲ್ಲಿ ಕೇಳಿರುವ ಒಂದು ಪ್ರಮುಖ ಆರೋಗ್ಯ ಸಮಸ್ಯೆ ಅದು ಕೂಡ ಎಸಿಯಿಂದ ಮೂಡಿರುವುದು ಅಂದರೆ ತಲೆನೋವು. ಒಂದು ತಾಪಮಾನದಿಂದ ಇನ್ನೊಂದು ತಾಪಮಾನಗಳಿರುತ್ತೆ, ಆ ಬದಲಾವಣೆಗಳಾದಾಗ ದೇಹದಲ್ಲಿ ಆಯಾಸ ಸುಸ್ತು ಅಸ್ವಸ್ಥತೆ ಕಾಣಿಸಿಕೊಳ್ಳುವುದು ಸಹಜ.

ನಿದ್ರಾಹೀನತೆ
ಎಸಿ ಆನ್ ಮಾಡಿ ನಿದ್ರೆ ಮಾಡುವುದರಿಂದ ಮಧ್ಯರಾತ್ರಿ ಎಚ್ಚರವಾಗುವಂತದ್ದು ನಿದ್ರೆ ಸರಿಯಾಗಿ ಆಗದೆ ಇರುವಂತದ್ದು ಹಾಗೂ ಉಸಿರಾಟದ ಸಮಸ್ಯೆ ಆಗಾಗ ಎಚ್ಚರವಾಗುವಂತದ್ದು ಹೆಚ್ಚಾಗಿ ಮಕ್ಕಳಲ್ಲಿ ಈ ಸಮಸ್ಯೆಗಳು ಎದುರಾಗುತ್ತದೆ.