ಸೀಸನ್ಗೆ ತಕ್ಕಂತೆ ಫ್ಯಾಷನ್ ಗಳು ಬದಲಾಗ್ತಾ ಹೋಗುತ್ತೆ. ಸದ್ಯಕ್ಕೆ ಮಳೆಗಾಲ ಶುರುವಾಗಿದೆ ಮಳೆಗಾಲ ಶುರುವಾಯಿತು ಅಂದ್ರೆ ಸ್ಕೂಲು ಕಾಲೇಜ್ಗಳು ಕೂಡ ಶುರುವಾಗುತ್ತೆ. ಸಮ್ಮರ್ ಹಾಲಿಡೇಸ್ ಮುಗಿಸಿ ಮಕ್ಕಳು ಮತ್ತೆ ಶಾಲಾ ತರಗತಿಗಳಿಗೆ ಹೊರಡುವ ಸಮಯ.. ಈ ಟೈಮಲ್ಲಿ ಹೊಸ ಉನಿಫಾರ್ಮ್ ನ್ಯೂ ಅಂಬ್ರೆಲಾ, ಹಾಗೂ ಹೆಚ್ಚು ಜನ ಕಾನ್ಸನ್ಟ್ರೇಟ್ ಮಾಡೋದು ಅಂದ್ರೆ ಹೊಸ ಫುಟ್ ವೇರ್.
![](https://pratidhvani.com/wp-content/uploads/2024/06/IMG_8498.jpeg)
ಸದ್ಯ ಮಳೆ ಶುರುವಾಗಿದೆ.. ಮಳೆಗೆ ಅಂತನೇ ಹೊಸ ರೀತಿಯ ಬಗೆ ಬಗೆಯ ಸ್ಯಾಂಡಲ್ಸ್ ಗಳು ಮಾರ್ಕೆಟ್ಗೆ ಲಗ್ಗೇಟಿವೆ.. ಅದನ್ನು ಕೂಡ ಎಲ್ಲಾ ಬ್ರಾಂಡ್ ಗಳಲ್ಲೂ ಕೂಡ ವಿಭಿನ್ನ ರೀತಿಯ ಸ್ಯಾಂಡಲ್ಸ್ ಗಳು ಲಭ್ಯವಾಗುತ್ತಿದೆ..
ಬೇಸಿಗೆ ಮುಗಿಸಿ ಮಾನ್ಸೂನ್ ಕಡೆಗೆ ಕಾಲಿಡುವಷ್ಟರಲ್ಲಿ ಟ್ರೆಂಡ್ ಕೂಡ ಬದಲಾಗಿರುತ್ತೆ..ಈ ಟೈಮಲ್ಲಿ ನಾವು ಗ್ರಾಂಡ್ ಲುಕ್ ಅಥವಾ ಹೈ ಹಿಲ್ಸ್ , ವೆಲ್ವೆಟ್ ಶೂಸ್ ಆರ್ ಸ್ಯಾಂಡಲ್ಸ್, ಇವುಗಳನ್ನು ವೇರ್ ಮಾಡೋದಕ್ಕೆ ಕಷ್ಟ ಯಾಕೆಂದರೆ ಮಳೆಗಾಲದಲ್ಲಿ ಸ್ವಲ್ಪ ಗಲೀಜುವಾದರೂ ಕ್ಲೀನ್ ಮಾಡೋದಿಕ್ಕೆ ಕಷ್ಟವಾಗುತ್ತೆ. ಹಾಗೂ ನಡೆಯುವಾಗ ಬೀಳ್ತೀವಿ ಜಾರುತ್ತದೆ ಎನ್ನುವ ಭಯ ಕೂಡ ಹೆಚ್ಚಿರುತ್ತೆ ಹಾಗಾಗಿ ಗ್ರಿಪ್ ಇರುವಂತಹ ಕಂಫರ್ಟ್ ಇರುವಂತಹ ಸ್ಯಾಂಡಲ್ಸ್ ಅನ್ನ ಉಪಯೋಗಿಸುವುದು ಉತ್ತಮ.
![](https://pratidhvani.com/wp-content/uploads/2024/06/IMG_8499.png)
ಕಮ್ಫರ್ಟ್ ಕೊಡುವ ಫುಟ್ ವೇರ್ ಅಂದ್ರೆ..ಬೂಟ್ಸ್ , ಇನ್ನು ಹೆಣ್ಣುಮಕ್ಕಳಿಗೆ ಸ್ಯಾಂಡಲ್ಸ್ ಹಾಗೂ ಫ್ಲಿಪ್-ಫ್ಲಾಪ್ಗಳನ್ನು ಬೆಸ್ಟ್. ಇನ್ನು ಹುಡುಗಿಯರು ಕ್ರೂಕ್ಸ್ ಹಾಗೂ ಬ್ಯಾಲೇರಿನಾ ಶೂಗಳಂತವನ್ನು ಬಳಸುವುದು ಉತ್ತಮ..
ಇನ್ನು ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳಿಗೆ ನಾನಾ ಬಗೆಯ ಶೋಗಳು ಮಾರ್ಕೆಟ್ ನಲ್ಲಿ ಟ್ರೆಂಡ್ ಮಾಡ್ತಾ ಇದೆ,ಫೋಮ್ ಕ್ಲಾಗ್ಸ್ , ಫ್ಲಿಪ್ಫ್ಲಾಪ್, ವೆಡ್ಜಸ್ ಬೆಲ್ಲಿ ಶೂಸ್, ಸ್ಕಿಪ್ಪರ್ ಕ್ಲಾಗ್ಸ್, ಜೆಲ್ಲಿ ಫ್ಲಾಟ್ಸ್, ಬ್ಯಾಲೇರಿನಾ ಫ್ಲಾಟ್ ಸ್ಯಾಂಡಲ್ಸ್, ಫಂಕಿ ಕ್ರೂಕ್ಸ್, ರೈನ್ ಶೂ, ಅಕ್ವಾ ಶೂಸ್, ಗಮ್ ಬೂಟ್ಸ್, ಕ್ಯಾನ್ವಾಸ್, ಮಾನ್ಸೂನ್ ಸ್ನೀಕರ್.
![](https://pratidhvani.com/wp-content/uploads/2024/06/IMG_8497.jpeg)
ಒಟ್ಟಿನಲ್ಲಿ ಪ್ರತಿ ಸಲಕ್ಕಿಂತ ಈ ಬಾರಿ ಮಾರ್ಕೆಟ್ ನಲ್ಲಿ ಹೊಸ ರೀತಿಯ ಮಾನ್ಸೂನ್ ಫುಟ್ ವೇರ್ಗಳು ಲಭ್ಯವಾಗುತ್ತಿವೆ.