ಕೇರಳದಲ್ಲಿ ಸಾಮಾನ್ಯಕ್ಕಿಂತ ಮೂರು ದಿನ ಮುಂಚಿತವಾಗಿ ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಅಧಿಕಾರಿಗಳು ನೈಋತ್ಯ ಮಾನ್ಸೂನ್ ಜೂನ್ 1ರಂದು ಕೇರಳ ಪ್ರವೇಶಿಸಬೇಕಿತ್ತು. ಆದರೆ, ಮೇ 29ರಂದು ಕೇರಳ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕರಾದ ಮೃತ್ಯುಂಜಯ ಮೊಹಾಪಾತ್ರ ಟ್ವೀಟ್ ಮಾಡಿದ್ದಾರೆ.
ನೈಋತ್ಯ ಮಾನ್ಸೂನ್ ಅನ್ನು ಭಾರತದ ಕೃಷಿ ಆಧಾರಿತ ಆರ್ಥಿಕತೆಯ ಜೀವನಾಡಿ ಎಂಉ ಪರಿಗಣಿಸಲಾಗಿದೆ. ಇದಕ್ಕು ಮೊದಲು ಬಂಗಾಳ ಕೊಲ್ಲಿಯಲ್ಲಿ ಅಸನಿ ಚಂಡಮಾರುತ ಅಪ್ಪಳಿಸಿತ್ತು.