ಕಳೆದ ಮೂರು ವರ್ಷಗಳಿಂದ ಕರೋನ ವೈರಸ್ ಮತ್ತದರ ರೂಪಾಂತರಿಗಳಿಗೆ ಜಗತ್ತೇ ಬೆಚ್ಚಿ ಬಿದ್ದಿದೆ. ಕೋವಿಡ್ ಹೊಡೆತಕ್ಕೆ ಜಗತ್ತಿನ ದೊಡ್ಡಣ್ಣನಂತಹ ದೇಶಗಳ ಆರ್ಥಿಕತೆ ಮಕಾಡೆ ಮಲಗಿದೆ ಇದರ ಬೆನ್ನಲ್ಲೇ ಈಗ ಮಂಕಿಪಾಕ್ಸ್ ಅನ್ನೊ ಹೊಸ ವೈರೆಸ್ ಎಲ್ಲೆಡೆ ಹರಡುತ್ತಿದ್ದು ಅನೇಕರು ಮತ್ತೊಂದು ದೊಡ್ಡ ಸಾಂಕ್ರಾಮಿಕ ರೋಗವನ್ನು ಎದುರಿಸಬೇಕೆ ಎಂಬ ಆತಂಕದಲ್ಲಿರುವ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಹಾತ್ವದ ಸುದ್ದಿಯೊಂದನ್ನು ಬಿಡುಗಡೆ ಮಾಡಿದೆ.
ಹೌದು, 12 ದೇಶಗಳಲ್ಲಿ 80 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ. ವಿಶ್ವ ಆರೋಗ್ಯ ಸಂಸ್ಥೆಯು ಇನ್ನೂ 50 ಶಂಕಿತ ಪ್ರಕರಣಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದು, ಇನ್ನು ಹೆಚ್ಚಿನ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.
ಒಂಬತ್ತು ಯುರೋಪಿಯನ್ ರಾಷ್ಟ್ರಗಳಲ್ಲಿ ಮತ್ತು ಯುಎಸ್, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಸೋಂಕುಗಳು ದೃಢಪಟ್ಟಿವೆ. ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ದೂರದ ಭಾಗಗಳಲ್ಲಿ ಮಂಕಿಪಾಕ್ಸ್ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ.
ಇದು ಅಪರೂಪದ ವೈರಲ್ ಸೋಂಕಾಗಿದ್ದು, ಇದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ ಮತ್ತು UK ಯ ರಾಷ್ಟ್ರೀಯ ಆರೋಗ್ಯ ಸೇವೆಯ ಪ್ರಕಾರ ಹೆಚ್ಚಿನ ಜನರು ಕೆಲವು ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ ಎಂದು ಬಿಬಿಸಿ ವರದಿ ಮಾಡಿದೆ.
ವೈರಸ್ ಜನರ ನಡುವೆ ಸುಲಭವಾಗಿ ಹರಡುವುದಿಲ್ಲ ಮತ್ತು ವ್ಯಾಪಕ ಸಾರ್ವಜನಿಕರಿಗೆ ಅಪಾಯವು ತುಂಬಾ ಕಡಿಮೆ ಎಂದು ಹೇಳಲಾಗುತ್ತದೆ. ಮಂಕಿಪಾಕ್ಸ್ಗೆ ಯಾವುದೇ ನಿರ್ದಿಷ್ಟ ಲಸಿಕೆ ಇಲ್ಲವಾದರೂ, ಆದರೆ ಸಿಡುಬು ಮತ್ತು ಮಂಕಿಪಾಕ್ಸ್ ಎರಡು ವೈರಸ್ಗಳು ಒಂದೇ ಸೌಮ್ಯವಾಗಿರುವುದರಿಂದ ಸಿಡುಬು ಲಸಿಕೆಯೇ 85% ರಕ್ಷಣೆ ನೀಡುತ್ತದೆ ಎಂದು ಬಿಬಿಸಿ ವರದಿ ಮಾಡಿದೆ.
ಅಧ್ಯಯನದ ಪ್ರಕಾರ, ಕರೋನ ವೈರಲ್ ನಷ್ಟು ಭಾದಿಸುವ ಯಾವುದೇ ಲಕ್ಷಣಗಳು ಇದರಲ್ಲಿ ಇಲ್ಲ. ಸಮಾನ್ಯವಾಗಿ ಬರುವ ವೈರಸ್ ಇದಾಗಿದ್ದು ಬೇಗ ಹರಡುವುದಿಲ್ಲ. ಆದರೆ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಹೊಂದಿದರೆ ಮಾತ್ರ ಸೊಂಕು ಹರಡುತ್ತದೆ ಆದರೆ ಗುಣಮುಖವಾಗುವಂತಹ ಕಾಯಿಲೆ ಇದಾಗಿದೆ ಎನ್ನಲಾಗಿದೆ.
“ಇದುವರೆಗೆ 11 ದೇಶಗಳಲ್ಲಿ ವರದಿಯಾದ ಇತ್ತೀಚಿನ ಸ್ಫೋಟಗಳು ವಿಲಕ್ಷಣವಾಗಿವೆ, ಏಕೆಂದರೆ ಅವು ಸ್ಥಳೀಯವಲ್ಲದ ದೇಶಗಳಲ್ಲಿ ಸಂಭವಿಸುತ್ತಿವೆ” ಎಂದು ಡಬ್ಲ್ಯುಎಚ್ಒ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.
ಭಾರತವು ಇನ್ನೂ ಯಾವುದೇ ಪ್ರಕರಣಗಳನ್ನು ವರದಿ ಮಾಡಿಲ್ಲವಾದರೂ, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಮತ್ತು ಐಸಿಎಂಆರ್ಗೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವಂತೆ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿದೆ.
ಕಳೆದ 21 ದಿನಗಳಲ್ಲಿ ಮಂಕಿಪಾಕ್ಸ್ ಪೀಡಿತ ದೇಶಗಳಿಗೆ ಪ್ರಯಾಣಿಸಿದ ಯಾವುದೇ ಇತಿಹಾಸವನ್ನು ಹೊಂದಿರುವ ಶಂಕಿತ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಕಟ್ಟುನಿಟ್ಟಾದ ಥರ್ಮಲ್ ಸ್ಕ್ರೀನಿಂಗ್ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಅಧಿಕಾರಿಗಳಿಗೆ ಸೂಚಿಸಿದೆ.