ತುಮಕೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಸರಿಯಾಗಿ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಹೆಸರು ಘೋಷಣೆಯಲ್ಲಿ ಬ್ಯುಸಿಯಾಗಿವೆ. ತುಮಕೂರಿನಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೊಂಡವಾಡಿ ಚಂದ್ರಶೇಖರ್ ಟಿಕೆಟ್ ಸಿಗದ ಕಾರಣ ಬಂಡಾಯವೆದ್ದು ಇಂದು ಜೆಡಿಎಸ್ಗೆ ಹಾರಿದ್ದಾರೆ. ಕೊಂಡವಾಡಿ ಚಂದ್ರಶೇಖರ್ ಬೆಂಬಲಿಗರೂ ಸಹ ಇಂದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಕೈಯಲ್ಲಿ ಕಂತೆ ಕಂತೆ ನೋಟು ಹಿಡಿದು ಕಾಣಿಸಿಕೊಂಡಿದ್ದು ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿದೆ.
ಕಾರ್ಯಕರ್ತರಿಗೆ ಹಣ ನೀಡಲು ಕುಮಾರಸ್ವಾಮಿ 500 ರೂಪಾಯಿ ಮುಖಬೆಲೆಯ ನೋಟು ತೆಗೆಯಲು ಮುಂದಾಗಿದ್ದಾರೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೈಮರ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಕೆಲವು ದಿನಗಳ ಹಿಂದಷ್ಟೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಇದೇ ರೀತಿ ಕಾರ್ಯಕರ್ತರ ಮೇಲೆ ಹಣ ಎಸೆದು ಸುದ್ದಿಯಾಗಿದ್ದರು.

ಕ್ಯಾಮರಾ ಕಣ್ಣಿಗೆ ಬೀಳುತ್ತಿರುವುದು ಗೊತ್ತಾದ ಬಳಿಕ ಹೆಚ್ಡಿಕೆ ಕಾರ್ಯಕರ್ತರನ್ನು ಹಿಂದಕ್ಕೆ ಕಳುಹಿಸಿದ್ದಾರೆ. ಆದರೆ ಈ ರೀತಿ ಹಣದ ಆಮಿಷವೊಡ್ಡಿ ಕಾರ್ಯಕರ್ತರನ್ನು ಖರೀದಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.











