ಕಳೆದ ಎರಡೂವರೆ ವರ್ಷದಿಂದ ಜನಾಂಗೀಯ ಘರ್ಷಣೆಯಲ್ಲಿ ಬೆಂದು ಹೋಗಿರುವ ಈಶಾನ್ಯ ರಾಜ್ಯ ಮಣಿಪುರಕ್ಕೆ (Manipur) ನಾಳೆ (ಸೆ.12) ಪ್ರಧಾನಿ ಮೋದಿ (Pm modi) ಭೇಟಿ ನೀಡಲಿದ್ದು, ಸುಮಾರು 8500 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

2023ರ ಮೇ ತಿಂಗಳಿನಲ್ಲಿ ಕುಕಿಸ್ ಹಾಗೂ ಮೈಥೇಯಿ ಜನಾಂಗದ ನಡುವೆ ಜನಾಂಗೀಯ ಸಂಘರ್ಷ ಭುಗಿಲೆದ್ದಿತ್ತು. ಇದರಲ್ಲಿ 260ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವು ಜನರು ಗಂಭೀರ ಗಾಯಗೊಂಡಿದ್ರು ಜೊತೆಗೆ ಸಾವಿರಾರು ಮಂದಿ ಮನೆ-ಮಠ ತೊರೆದು ಸ್ಥಳಾಂತರಗೊಂಡಿದ್ದರು. ಇದೀಗ ಮೋದಿ ಕುಕಿ ಸಮುದಾಯವೇ ಹೆಚ್ಚು ನೆಲೆಸಿರುವ ಚುರಚಂದ್ ಪುರದಲ್ಲೇ 7300 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಇದಾದ ಬಳಿಕ ಇಂಫಾಲದ ಕಾಂಗ್ಲಾ ಕೋಟೆಯಲ್ಲಿ ಜನರನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದರೆ. ಈ ಗಲಭೆ ನಂತರ ಸ್ಥಳಾಂತರಗೊಂಡಿರುವ ಕುಟುಂಬಗಳನ್ನು ಭೇಟಿಯಾಗಿ ಪುನರ್ವಸತಿ ಪ್ಯಾಕೇಜ್ಗಳನ್ನು ಘೋಷಿಸುವ ನಿರೀಕ್ಷೆ ಇದ್ದು,ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಕುಕಿಸ್ ಸಮುದಾಯ ಸ್ವಾಗತ ನೀಡಿದೆ.











