ಕರೋನಾ ಪ್ರೇರಿತ ಲಾಕ್ಡೌನ್ಗಿಂತಲೂ ಮುಂಚೆ ನೂರಾರು ವಿದೇಶಿ ಪ್ರವಾಸಗಳನ್ನು ಮಾಡಿದ್ದ ಪ್ರಧಾನಿ ಮೋದಿ ಲಾಕ್ಡೌನ್ ಹಾಗೂ ಕರೋನಾ ಸಂಕಷ್ಟದ ನಂತರ ಯಾವುದೇ ವಿದೇಶಿ ಪ್ರವಾಸಗಳನ್ನು ಮಾಡಿರಲಿಲ್ಲ. ಈ ತಿಂಗಳ ಅಂತ್ಯದಲ್ಲಿ ಪ್ರಧಾನಿಯವರ ವಿದೇಶಯಾತ್ರೆ ಮತ್ತೆ ಮುಂದುವರೆಯಲಿದೆ. ಸೆಪ್ಟೆಂಬರ್ ಕೊನೆಗೆ ಅಮೇರಿಕಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ ಅಲ್ಲಿ ಜೋ ಬೈಡೆನ್ ಅವರೊಂದಿಗೆ ಸಭೆ ನಡೆಸಲಿದ್ದಾರೆ.
ಬಹುತೇಕ ಸೆಪ್ಟೆಂಬರ್ 22-27ರ ನಡುವೆ ನಡೆಯಲಿರುವ ಈ ಪ್ರವಾಸದಲ್ಲಿ, ಮೋದಿಯವರು ವಾಷಿಂಗ್ಟನ್ ಹಾಗೂ ನ್ಯೂಯಾರ್ಕ್’ಗೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ನಡೆಯಲಿರುವ ಕ್ವಾಡ್ ಶೃಂಗಸಭೆ ಹಾಗೂ ವಿಶ್ವಸಂಸ್ಥೆಯ ಸಭೆಯಲ್ಲಿಯೂ ಭಾಗವಹಿಸುವ ಸಾಧ್ಯತೆಗಳಿವೆ.
ಮೊತ್ತಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ಮೋದಿ ನೂರಕ್ಕೂ ಹೆಚ್ಚು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ. 60ಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಬಂದಿದ್ದಾರೆ. 2014ರ ಬಳಿಕ ಪ್ರಧಾನಿ ಮೋದಿ ವಿದೇಶಿ ಪ್ರವಾಸ ಕೈಗೊಳ್ಳದ ಏಕೈಕ ವರ್ಷವೆಂದರೆ ಅದು 2020. ಕಳೆದ ಎರಡು ವರ್ಷಗಳಲ್ಲಿ ಪ್ರಧಾನಿ ಮೋದಿಯ ವಿದೇಶಿ ಪ್ರವಾಸಗಳ ಸಂಪೂರ್ಣ ವಿವರ ಇಲ್ಲಿದೆ.
ದಕ್ಷಿಣ ಕೊರಿಯ ( ಫೆಬ್ರುವರಿ 21-22, 2019)
ದಕ್ಷಿಣ ಕೊರಿಯಾಗೆ ಪ್ರಧಾನಿ ಮೋದಿ ಎರಡು ದಿನಗಳ ಭೇಟಿ ನೀಡಿದ ವೇಳೆ ಅವರಿಗೆ ಪ್ರತಿಷ್ಠಿತ ಸಿಯೋಲ್ ಶಾಂತಿ ಪುರಸ್ಕಾರವನ್ನು ನೀಡಲಾಗಿತ್ತು. ಅಂತರಾಷ್ಟ್ರೀಯ ಸಹಕಾರದಲ್ಲಿ ಪ್ರಧಾನಿ ಮೋದಿಯವರ ಕೊಡುಗೆ ಹಾಗೂ ಜಾಗತಿಕ ಆರ್ಥಿಕತೆಯ ಬೆಳವಣಿಗೆಯನ್ನು ಪೋಷಿಸಿದ ಕಾರಣಕ್ಕೆ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿತ್ತು.
ಶ್ರೀಲಂಕಾ (9 ಜೂನ್ 2019)
ಈ ಪ್ರವಾಸದ ವೇಳೆ ಪ್ರಧಾನಿ ಮೋದಿ ಹಾಗೂ ಶ್ರೀಲಂಕಾದ ಹಿಂದಿನ ಅಧ್ಯಕ್ಷರಾದ ಮೈತ್ರಿಪಾಲ ಸಿರಿಸೇನಾ ಅವರು ಸಭೆ ನಡೆಸಿದ್ದರು. ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದು ಮೋದಿಯವರ ಮೊದಲನೇ ಭೇಟಿಯಾಗಿತ್ತು. ಶ್ರೀಲಂಕಾದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಿಂದಾಗಿ ಸುಮಾರು 250 ಜನರು ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಯ ಬಳಿಕ ಕೈಗೊಂಡ ಮೊದಲ ಶ್ರೀಲಂಕಾ ಪ್ರವಾಸ ಇದಾಗಿತ್ತು. ಇಸ್ಲಾಮಿಕ್ ಸ್ಟೇಟ್ಸ್ ಉಗ್ರರು ನಡೆಸಿದ ಈ ದಾಳಿಯ ತನಿಖೆಗೆ ಭಾರತದ ಗುಪ್ತಚರ ಇಲಾಖೆಯ ಸಹಕಾರವನ್ನು ಶ್ರೀಲಂಕಾಗೆ ನೀಡಲಾಗಿತ್ತು.
ಕಿರ್ಗಿಸ್ತಾನ್ (14-15 ಜೂನ್ 2019)
ಕಿರ್ಗಿಸ್ತಾನಿನ ಬಿಷ್ಕೇಕ್’ನಲ್ಲಿ ನಡೆದ ಶಾಂಘಾಯ್ ಕೋ-ಆಪರೇಷನ್ ಆರ್ಗನೈಸೇಷನ್ (SCO) ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ಮೋದಿ ಕಿರ್ಗಿಸ್ತಾನ್’ಗೆ ಭೇಟಿ ನೀಡಿದ್ದರು.
ಜಪಾನ್ (27-29 ಜೂನ್ 2019)
ಜಪಾನ್’ನ ಒಸಾಕಾದಲ್ಲಿ ನಡೆದ ಜಿ-20 ಶೃಂಗ ಸಭೆಯಲ್ಲಿ ಭಾಗವಹಿಸಲು ಈ ಪ್ರವಾಸ ಕೈಗೊಳ್ಳಲಾಗಿತ್ತು. ಈ ವೇಳೆ ಹಲವು ಜಾಗತಿಕ ನಾಯಕರನ್ನು ಭೇಟಿಯಾದ ಪ್ರಧಾನಿ ಮೋದಿ, ಬ್ರಿಕ್ಸ್ ದೇಶಗಳ ನಾಯಕರೊಂದಿಗೆ ಕೂಡಾ ಸಭೆ ನಡೆಸಿದ್ದರು. ಅಂದಿನ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ ಪ್ರಧಾನಿ ಮೋದಿ, ‘ಭಾರತದ ಮೇಲಿನ ಟ್ರಂಪ್ ಪ್ರೀತಿಯನ್ನು’ ಮುಕ್ತ ಕಂಠದಿಂದ ಶ್ಲಾಘಿಸಿದ್ದರು.
ಭೂತಾನ್ (17-18 ಆಗಸ್ಟ್ 2019)
2014ರ ಬಳಿಕ ಭೂತಾನ್’ಗೆ ಇದು ಪ್ರಧಾನಿ ಮೋದಿಯ ಎರಡನೇ ಭೇಟಿ. ಈ ಭೇಟಿಯಲ್ಲಿ ಭೂತಾನ್ ಹಾಗೂ ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಚರ್ಚೆ ನಡೆಸಲಾಗಿತ್ತು. ಇದೇ ವೇಳೆ ಹತ್ತು ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು.
ಫ್ರಾನ್ಸ್ (2-23 ಆಗಸ್ಟ್ 2019)
ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸುವ ಕುರಿತಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಮಾನುಯೆಲ್ ಮಾಕ್ರೋನ್ ಅವರಿಂದಿಗೆ ಪ್ರಧಾನಿ ಮೋದಿ ಸಭೆ ನಡೆಸಿದ್ದರು. ಇದೇ ವೇಳೆ ಫ್ರಾನ್ಸ್’ನಲ್ಲಿ ನೆಲೆಸಿರುವ ಭಾರತೀಯರ ಸಮುದಾಯದೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿದ್ದರು. 1950ರ ಹಾಗೂ 1960ರ ದಶಕದಲ್ಲಿ ನಡೆದ ಎರಡು ಏರ್ ಇಂಡಿಯಾ ವಿಮಾನಗಳ ದುರಂತದಲ್ಲಿ ಮಡಿದವರ ಸ್ಮಾರಕವನ್ನೂ ಮೋದಿ ಉದ್ಘಾಟಿಸಿದ್ದರು.
ಯುಎಇ ಹಾಗೂ ಬಾಹ್ರೈನ್ (23-25 ಆಗಸ್ಟ್ 2019)
ಮೂರು ದಿನಗಳ ಈ ಭೇಟಿಯ ವೇಳೆ ಯುಎಇಯಲ್ಲಿ ಪ್ರಧಾನಿ ಮೋದಿ ಅವರಿಗೆ ‘ಆರ್ಡರ್ ಆಫ್ ಜಾಯೆದ್’ ಪುರಸ್ಕಾರ ನೀಡಲಾಗಿತ್ತು. ಇದು ಯುಎಇಯ ಅತ್ಯಂತ ದೊಡ್ಡ ನಾಗರಿಕ ಪುರಸ್ಕಾರವಾಗಿದೆ. ಆ ಬಳಿಕ ಬಾಹ್ರೈನ್’ಗೆ ತೆರಳಿದರು. ಇದು ಗಲ್ಫ್ ದೇಶಗಳಿಗೆ ಭಾರತದ ಪ್ರಧಾನಿಯೊಬ್ಬರ ಮೊತ್ತ ಮೊದಲ ಭೇಟಿಯಾಗಿದೆ.
ರಷ್ಯಾ (4-5 ಸೆಪ್ಟೆಂಬರ್ 2019)
Eastern Economic Forum ಸಭೆಯಲ್ಲಿ ಭಾಗವಹಿಸುವ ಜತೆ ಜತೆಗೆ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದರು. ಭಾರತ ಹಾಗೂ ರಷ್ಯಾ ನಡುವೆ ಇರುವಂತಹ ಸಂಬಂಧವನ್ನು ವೃದ್ಧಿಸುವ ಕುರಿತಾಗಿ ಚರ್ಚೆ ನಡೆಸಲಾಗಿತ್ತು. ಇದೇ ವೇಳೆ ಪುಟನ್ ಅವರನ್ನು ಆತ್ಮೀಯ ಮಿತ್ರರು ಎಂದು ಪ್ರಧಾನಿ ಮೋದಿ ಹೇಳಿಕೊಂಡಿದ್ದರು. ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ದೆಹಲಿ ಮತ್ತು ಮಾಸ್ಕೊ ನಡುವೆ ಸೀಮಿತವಾಗದಂತೆ ಬೆಳೆಯಬೇಕು, ಎಂದು ಪ್ರಧಾನಿ ಮೋದಿ ತಮ್ಮ ಎರಡು ದಿನಗಳ ಪ್ರವಾಸದ ವೇಳೆ ಹೇಳಿದ್ದರು.
ಅಮೇರಿಕಾ (20-27 ಸೆಪ್ಟೆಂಬರ್ 2019)
ಈ ಪ್ರವಾಸದ ವೇಳೆ ಪ್ರಧಾನಿ ಮೋದಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದಾದ ಬಳಿಕ ಹ್ಯೂಸ್ಟನ್’ನಲ್ಲಿ ಏರ್ಪಡಿಸಿದ್ದ ಬೃಹತ್ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದರು. ಇದೇ ವೇಳೆ ಟ್ರಂಪ್ ಪರವಾಗಿ ಪ್ರಚಾರವನ್ನು ಕೂಡಾ ನಡೆಸಿದ್ದರು. ಅಮೇರಿಕಾ ಹಾಗು ಭಾರತ ಉತ್ತಮ ಬಾಂಧವ್ಯವನ್ನು ಹೊಂದಿದೆ. ಉಭಯ ರಾಷ್ಟ್ರಗಳು ನಂಬಿಕಸ್ಥ ಸ್ನೇಹಿತರು ಎಂದು ಪ್ರಧಾನಿ ಮೋದಿ ಹೇಳಿದ್ದರು.
ಸೌದಿ ಅರೇಬಿಯಾ (29 ಅಕ್ಟೋಬರ್ 2019)
ಸೌದಿ ಅರೇಬಿಯಾದ ರಿಯಾದ್’ನಲ್ಲಿ ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದರು. ಇದಾದ ಬಳಿಕ ಸೌದಿಯ ಯುವರಾಜನೊಂದಿಗೂ ನಿಯೋಗ ಮಟ್ಟದ ಸಭೆ ನಡೆಸಲಾಗಿತ್ತು. ಇದೇ ವೇಳೆ ಭಾರತ-ಸೌದಿ ನಡುವಿನ ಪಾಲುದಾರಿಕೆಯ ಒಪ್ಪಂದಕ್ಕೂ ಸಹಿ ಹಾಕಲಾಗಿತ್ತು.
ಇದರೊಂದಿಗೆ ಎರಡೂ ದೇಶಗಳ ಇ-ಮೈಗ್ರೇಷನ್ ವ್ಯವಸ್ಥೆಯಲ್ಲಿ ಸಮನ್ವಯತೆ ತರುವುದು, ಭಾರತದ RuPay ಕಾರ್ಡ್’ಗಳನ್ನು ಬಿಡುಗಡೆಗೊಳಿಸುವುದು ಸೇರಿದಂತೆ ಹಲವು ಇತರ ಒಪ್ಪಂದಗಳಿಗೂ ಇದೇ ಸಮಯದಲ್ಲಿ ಸಹಿ ಹಾಕಲಾಗಿತ್ತು.
ಥಾಯ್ಲೆಂಡ್ 2-4 ನವೆಂಬರ್ 2019
ಥಾಯ್ಲೆಂಡ್’ನಲ್ಲಿ ಜರುಗಿದ ಆಸಿಯಾನ್ ಶೃಂಗಸಭೆ ಹಾಗೂ ಪೂರ್ವ ಏಷ್ಯಾ ಮತ್ತು ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಕುರಿತಾದ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಥಾಯ್ಲೆಂಡ್ ಪ್ರಧಾನಿ ಪ್ರಯುತ್ ಚಾನ್-ಒ-ಚಾ ಆಮಂತ್ರಣದ ಮೇರೆಗೆ ಬ್ಯಾಂಕಾಕ್’ಗೂ ಮೋದಿ ಭೇಟಿ ನೀಡಿದ್ದರು.
ಬ್ರೆಜಿಲ್ 13-14 ನವೆಂಬರ್ 2019
ವಿಶ್ವದಾದ್ಯಂತ ಕರೋನಾ ಸೋಂಕು ತಾಂಡವವಾಡಲು ಶುರುವಾಗುವ ಮುಂಚೆ ಪ್ರಧಾನಿ ಮೋದಿ ಕೈಗೊಂಡ ಕೊನೆಯ ವಿದೇಶಿ