ದಕ್ಷಿಣ ಕನ್ನಡ (South canara) ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ (BJP) ಲೆಕ್ಕಾಚಾರಕ್ಕೆ ಸೆಡ್ಡು ಹೊಡೆಯಲು ಕಾಂಗ್ರೆಸ್ (Congress) ಮುಂದಾಗಿದೆ. ಮೋದಿ (Modi) ಎಂಟ್ರಿ ಬೆನ್ನಲ್ಲೇ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿರುವ ಬಿಜೆಪಿ, ಉಡುಪಿ-ಚಿಕ್ಕಮಗಳೂರು (udupi chikkamagaluru) ಕ್ಷೇತ್ರದಲ್ಲಿ ಕೂಡ ಪ್ಲಸ್ ಆಗುವ ನಿರೀಕ್ಷೆಯಲ್ಲಿದೆ. ಮಂಗಳೂರಿನಲ್ಲಿ (mangalore) ಬಿಜೆಪಿ ನಡೆಸಿದ ಯಶಸ್ವಿ ನರೇಂದ್ರ ಮೋದಿ (Narendra modi) ರೋಡ್ ಶೋ ಗೆ ಟಕ್ಕರ್ ನೀಡಲು ಕಾಂಗ್ರೆಸ್ ರಣತಂತ್ರ ಹೆಣೆಯಲಿ ಸಜ್ಜಾಗಿದೆ. ಮೋದಿ ವಿರುದ್ಧಾ ಪ್ರಿಯಾಂಕರನ್ನ (Priyanka vadra) ಬಳಸಲು ಕಾಂಗ್ರೇಸ್ ಚಿಂತನೆ ನಡೆಸಿದೆ.
ಹೀಗಾಗಿ ಪ್ರಿಯಾಂಕ ವಾಡ್ತಾರನ್ನ ಮಂಗಳೂರಿಗೆ ಕರೆತರಲು ರಾಜ್ಯ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಹಿಂದುತ್ವ (Hinduthva) ಮತ್ತು ಬಿಜೆಪಿಯ ಭದ್ರಕೋಟೆಯಾಗಿದ್ದು, ಬಿಜೆಪಿಯ ಹಿಂದುತ್ವದ ಅಲೆಯ ಈ ಲೆಕ್ಕಾಚಾರಕ್ಕೆ ಕಾಂಗ್ರೆಸ್ ಸಾಮರಸ್ಯದ ರಣತಂತ್ರ ಹೆಣೆಯಲು ಮುಂದಾಗಿದೆ.
ಯಾವ ರೀತಿ ಬಿಜೆಪಿ ಭರ್ಜರಿ ನಮೋ ರೋಡ್ ಶೋ ನಡೆಸಿತ್ತೋ, ಅದೇ ರೀತಿ ಪ್ರಿಯಾಂಕ ವಾಡ್ರಾ ರೋಡ್ ಶೋ (Road Show) ಮೂಲಕ ಸೆಡ್ಡು ಹೊಡೆಯಲು ಕಾಂಗ್ರೆಸ್ ದೊಡ್ಡ ಪ್ಲಾನ್ ಮಾಡಿದೆ. ಹೀಗಾಗಿ ಶೀಘ್ರವಾಗಿ ಪ್ರಿಯಾಂಕಾ ವಾಡ್ರಾ ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿದ್ದು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಗರಿಗೆದರಿದೆ. ಅಷ್ಟೇ ಅಲ್ಲದೇ ಶೀಘ್ರ ದಲ್ಲೇ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸಿ ಎಂ ಸಿದ್ದರಾಮಯ್ಯ (CM Siddaramiah) ಹಾಗು ಡಿ ಕೆ ಶಿವಕುಮಾರ್ (DK Shivakumar) ಕೂಡ ಲಗ್ಗೆ ಇಡಲಿದ್ದು ಕೇಸರಿ ಕೋಟೆಯನ್ನ ಛಿದ್ರಗೊಳಿಸಲು ಅಣಿಯಾಗುತ್ತಿದ್ದಾರೆ.