ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 9 ವರ್ಷಗಳೇ ಕಳೆದಿವೆ. ಆದರೆ ಈ ವರೆಗೆ ಅವರು ಒಂದೇ ಒಂದು ಸುದ್ದಿಗೋಷ್ಠಿ ನಡೆಸಿಲ್ಲ. ಸಾರ್ವಜನಿಕರ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸಿಲ್ಲ. ಇದೇ ವಿಷಯಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಸೈಲೆಂಟ್ ಪ್ರಧಾನಿ ಎಂದು ಈ ಹಿಂದೆ ಬಿಜೆಪಿ ಲೇವಡಿ ಮಾಡುತ್ತಿತ್ತು.ಅದೇ ಮಾತು ಮೋದಿಗೂ ಅನ್ವಯವಾಗುವಂತಿದ್ದು.
ಈ ಕುರಿತು ವಿಪಕ್ಷ ನಾಯಕರು ಟೀಕಾ ಪ್ರಹಾರ ನಡೆಸಿದ್ದರು. ಅಷ್ಟೇ ಅಲ್ಲದೆ ಪ್ರಧಾನಿ ಮೋದಿ ಸರ್ವಾಧಿಕಾರಿ, ಸುದ್ದಿಗೋಷ್ಠಿ ನಡೆಸುವುದಿಲ್ಲ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಅವರಿಗೆ ಪತ್ರಕರ್ತರನ್ನು ಕಂಡರೆ ಭಯ, ಅವರಿಗೆ ಸಂವಾದದಲ್ಲಿ ನಂಬಿಕೆ ಇಲ್ಲ ಎಂದೆಲ್ಲ ಪ್ರತಿಪಕ್ಷಗಳ ನಾಯಕರು ಇಂದಿಗೂ ಟೀಕಿಸುತ್ತಾರೆ. ಮೋದಿ ಅವರು ಕೂಡ, ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕಳೆದ ಒಂಬತ್ತು ವರ್ಷದಲ್ಲಿ ಒಮ್ಮೆಯೂ ಸುದ್ದಿಗೋಷ್ಠಿ ನಡೆಸಿಲ್ಲ, ಪತ್ರಕರ್ತರ ಪ್ರಶ್ನೆಗಳಿಗೆ ಮುಖಾಮುಖಿ ಆಗಿಲ್ಲ.
ಆದರೆ, ಇದೇ ಮೊದಲ ಬಾರಿಗೆ ಮೋದಿ ಅಮೆರಿಕದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ವಿಶೇಷ ಎಂದರೆ ಈ ಬಾರಿ ಪತ್ರಕರ್ತರು ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಿದ್ದು, ಎರಡು ಪ್ರಶ್ನೆಗಳನ್ನು ಕೇಳಲು ಮಾತ್ರ ಅವಕಾಶ ನೀಡಿದ್ದರು ಎನ್ನಲಾಗಿದೆ. ಈ ಕುರಿತು ಅಮೆರಿಕ ಶ್ವೇತಭವನವೇ ಪ್ರಕಟಣೆಯಲ್ಲಿ ತಿಳಿಸಿದ್ದು, ಮೋದಿ ಹಾಗೂ ಬೈಡೆನ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಪತ್ರಕರ್ತರು ಒಬ್ಬರಿಗೆ ಎರಡು ಪ್ರಶ್ನೆಗಳನ್ನು ಮಾತ್ರ ಕೇಳಿದೆ ಎಂದು ಮಾಹಿತಿ ನೀಡಿದೆ.ಒಟ್ಟಾರೆಯಾಗಿ ಮೋದಿ ಪತ್ರಿಕಾಗೋಷ್ಠಿ ನಡೆಸುವುದಿಲ್ಲ ಎಂಬ ಟೀಕೆಗಳ ಮಧ್ಯೆಯೇ ಸಪ್ತ ಸಾಗರದಾಚೆ ಸುದ್ದಿಗೋಷ್ಠಿ ನಡೆಸಿದ್ದು, ಜನರಲ್ಲಿ ಕುತೂಹಲ ಕೆರಳಿಸಿದೆ.