RSS ಸಂಘಟನೆ ಪ್ರಾರಂಭವಾಗಿ 100 ವರ್ಷಗಳು ಪೂರ್ಣಗೊಂಡ ಹಿನ್ನಲೆ ನವದೆಹಲಿಯಲ್ಲಿ (New delhi ) RSS ಶತಮಾನೋತ್ಸವ ದಿನ ಆಚರಣೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Pm modi) ಕೂಡ ಭಾಗವಹಿಸಿದ್ದಾರೆ.

ಈ ವೇಳೆ ಮಾತನಾಡಿರುವ ನಮೋ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ತಾವು ಸೇರಿದಂತೆ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕಳೆದ ನೂರು ವರ್ಷಗಳಿಂದ ಭಾರತೀಯ ಸಂಸ್ಕೃತಿ & ಸಂಪ್ರದಾಯಗಳನ್ನು ಹೊಸ ಪೀಳಿಗೆಗೆ RSS ಮೂಲಕ ಪರಿಚಯಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಹೀಗಾಗಿ ನಾನು, ಆರ್ಎಸ್ಎಸ್ನ ಭಾಗವಾಗಲು ಅದೃಷ್ಟಶಾಲಿಯಾಗಿದ್ದೇನೆ. ಇದೇ ನೂರು ವರ್ಷಗಳ ಹಿಂದೆ ಮರಾಠಾ ವ್ಯಕ್ತಿಯೊಬ್ಬರು ಪ್ರಾರಂಭಿಸಿದ ಈ RSS ಸಂಸ್ಥೆ ಆಲದ ಮರದಂತೆ ಅತಿ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿಕೊಳ್ಳುತ್ತಿದೆ ಎಂದು ಮೋದಿ ಹೇಳಿದ್ದಾರೆ.