ಪ್ರಧಾನಿ ನರೇಂದ್ರ ಮೋದಿ ದೆಹಲಿ ವಿವಿಯ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹಿತ ವಚನವನ್ನ ನೀಡಿದ್ದಾರೆ.. ಇನ್ನು ಈ ಕಾರ್ಯಕ್ರಮದಲ್ಲಿ ಭಾಗಿಯಾಗೋದಕ್ಕಾಗಿ ಮೆಟ್ರೋದಲ್ಲಿ ಸಹಪ್ರಯಾಣಿಕರೊಂದಿಗೆ ಸಂಚರಿಸಿದ ಮೋದಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಇನ್ನು ಪ್ರಧಾನಿ ಮೋದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಕ್ಕೆ, ಸಹ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದು. ಮತ್ತೊಂದು ಕಡೆ ಬಿಜೆಪಿ (BJP) ತನ್ನ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ಮೋದಿ ಬಿಗಿ ಭದ್ರತೆಯೊಂದಿಗೆ ಮೆಟ್ರೋ ಆವರಣಕ್ಕೆ ಪ್ರವೇಶಿಸೋದು ಮತ್ತು ಮೆಟ್ರೋ ಸ್ಮಾರ್ಟ್ ಕಾರ್ಡ್‌ಗಳನ್ನ ಮೋದಿ ಬಳಸುತ್ತಿರುವ ವಿಡಿಯೋ ಹಂಚಿಕೊಳ್ಳಲಾಗಿದೆ.
ಪ್ರಧಾನಿ ಮೋದಿ ಇಂದು ಬೆಳಗ್ಗೆ ಮೆಟ್ರೋ ಹಳದಿ ರೇಖೆಯಲ್ಲಿ (Metro Yellow Line) ಪ್ರಯಾಣಿಸಿದ್ದು ಸಮಯಪುರ್ ಬದ್ಲಿ ನಿಲ್ದಾಣದಿಂದ ದಿಲ್ಲಿ ವಿವಿ ಕಡೆಗೆ ಹೋಗುವ ಮೆಟ್ರೋ ರೈಲು ಏರಿದ್ರು. ತದ ನಂತರ ಮೋದಿ ದೆಹಲಿ ವಿಶ್ವವಿದ್ಯಾಲಯ ಕ್ಯಾಂಪಸ್‌ಗೆ ತಲುಪಿದರು.
ಇನ್ನು ತಮ್ಮ ಮೆಟ್ರೋ ಪ್ರಯಾಣದ ಕುರಿತು ದೆಹಲಿ ವಿಶ್ವವಿದ್ಯಾಲಯ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಹ ಪ್ರಯಾಣಿಕರ ಜತೆಯಲ್ಲಿ ಮೆಟ್ರೋದಲ್ಲಿ ಪ್ರಯಾಣಿಸೋದು, ಹಾಗೆಯೇ ಅವರೊಂದಿಗೆ ಕ್ಯಾಂಪಸ್‌ಗೆ ಬರುವುದು ಬಹಳ ಖಷಿ ತಂದಿದೆ. ಇಬ್ಬರು ಸ್ನೇಹಿತರು ಒಟ್ಟಿಗೆ ಕೂತು ಹಲವು ವಿಚಾರಗಳ ಕುರಿತು ಚರ್ಚಿಸುತ್ತಿದ್ದರು ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ, ತಾವು ನೋಡಿದ ಸಿನಿಮಾ, ಓಟಿಟಿ ವೇದಿಕೆ, ಸಾಮಾಜಿಕ ಜಾಲತಾಣಗಳ ಬಗ್ಗೆಯೂ ಅವರು ಮಾತನಾಡಿಕೊಳ್ಳುತ್ತಿದ್ದರು. ಇದೆಲ್ಲರ ಅನುಭವವನ್ನ ಪಡೆಯಲು ನಾನು ಆಗಮಿಸಲು ಮೆಟ್ರೋ ಮಾರ್ಗ ಆಯ್ಕೆ ಮಾಡಿಕೊಂಡೆ ಎಂದು ಮಾಹಿತಿಯನ್ನ ನೀಡಿದ್ರು
ಇನ್ನೂ ಒಂದು ಕಡೆ ಪ್ರಧಾನಿ ಮೋದಿ ಮೆಟ್ರೋ ಸಂಚಾರದ ಬಗ್ಗೆ ಸಾಕಷ್ಟು ಜನ ಮೆಚ್ಚುಗೆಯ ಮಾತುಗಳನ್ನ ಆಡುತ್ತಿದ್ದರೆ ಮತ್ತೊಂದು ಕಡೆ ಇದೇ ಪ್ರಧಾನಿ ಮೋದಿ ಮಣಿಪುರ ಪ್ರತಿ ಉರಿದಿದ್ದರು ಯಾಕೆ ಮೌನವಾಗಿ ಕುಳಿತಿದ್ದಾರೆ ಯಾಕೆ ಮೌನಿ ಪ್ರಧಾನಿಯಾಗಿದ್ದಾರೆ ಎಂಬ ಪ್ರಶ್ನೆಗಳನ್ನ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಿದ್ದಾರೆ ಆದರೆ ಇದಕ್ಕೆ ಬಿಜೆಪಿಯ ಯಾವ ನಾಯಕರು ಕೂಡ ಸ್ಪಷ್ಟವಾದ ಉತ್ತರವನ್ನು ನೀಡುತ್ತಿಲ್ಲ