• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರೋಮ್‌ನಲ್ಲಿ ಮೋದಿ–ಮೆಲೋನಿ ಸ್ನೇಹದ ಸದ್ದು: ಮೇಲೋನಾಗೆ ‘ಮೆಲೋಡಿ’ ಚಾಕೊಲೇಟ್ ಗಿಫ್ಟ್‌!

ಪ್ರತಿಧ್ವನಿ by ಪ್ರತಿಧ್ವನಿ
May 20, 2026
in Top Story
0
ರೋಮ್‌ನಲ್ಲಿ ಮೋದಿ–ಮೆಲೋನಿ ಸ್ನೇಹದ ಸದ್ದು: ಮೇಲೋನಾಗೆ ‘ಮೆಲೋಡಿ’ ಚಾಕೊಲೇಟ್ ಗಿಫ್ಟ್‌!
Share on WhatsAppShare on FacebookShare on Telegram

ಐದು ರಾಷ್ಟ್ರಗಳ ವಿದೇಶಿ ಪ್ರವಾಸದ ಕೊನೆಯ ಹಂತವಾಗಿ ಪ್ರಧಾನಿ  ನರೇಂದ್ರ ಮೋದಿ ಅವರು ಮಂಗಳವಾರ ಇಟಲಿಯ ರಾಜಧಾನಿ ರೋಮ್ ಗೆ ಭೇಟಿ ನೀಡಿದರು. ಪ್ರಧಾನಿ ಮೋದಿ ಅವರನ್ನು ಇಟಲಿ ಪ್ರಧಾನಿ ಮಲೋನಿ ಆತ್ಮೀಯವಾಗಿ ಸ್ವಾಗತಿಸಿದರು.

ADVERTISEMENT

ರೋಮ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಅಲ್ಲಿನ ಭಾರತೀಯ ಸಮುದಾಯ ಅದ್ಧೂರಿ ಸ್ವಾಗತ ಕೋರಿತು. ತಾವು ತಂಗಿದ್ದ ಹೋಟೆಲ್‌ನಲ್ಲಿ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದ ಮೋದಿ, ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಇದೇ ವೇಳೆ ಇಟಲಿಯ ಕಲಾವಿದರೊಬ್ಬರು ಭಾರತದ ಪರಂಪರೆಯಿಂದ ಪ್ರೇರಿತವಾಗಿ ಬಿಡಿಸಿದ್ದ ವಾರಣಾಸಿಯ ಘಾಟ್‌ಗಳ ಚಿತ್ರವನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿದರು.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಪ್ರಧಾನಿ ಮೋದಿ ರಾತ್ರಿ ಭೋಜನ ಕೂಟದಲ್ಲಿ ಭಾಗವಹಿಸಿದರು. ಬಳಿಕ ಇಬ್ಬರೂ ಸೇರಿ ವಿಶ್ವಪ್ರಸಿದ್ಧ ಐತಿಹಾಸಿಕ Colosseum ಸ್ಮಾರಕಕ್ಕೆ ಭೇಟಿ ನೀಡಿದರು.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಮೋದಿ, “ರೋಮ್‌ಗೆ ಬಂದಿಳಿದ ಬಳಿಕ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಭೋಜನದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಬಳಿಕ ಒಟ್ಟಿಗೆ ಕೊಲೋಸಿಯಮ್ ವೀಕ್ಷಣೆ ಮಾಡಿದೆವು” ಎಂದು ಬರೆದುಕೊಂಡಿದ್ದಾರೆ.

ಇಬ್ಬರು ನಾಯಕರ ಕಾರು ಪ್ರಯಾಣ, ಆತ್ಮೀಯ ಮಾತುಕತೆ ಹಾಗೂ ಐತಿಹಾಸಿಕ ಸ್ಮಾರಕ ವೀಕ್ಷಣೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಉಭಯ ರಾಷ್ಟ್ರಗಳ ನಾಯಕರ ನಡುವಿನ ಸ್ನೇಹಪೂರ್ಣ ಬಾಂಧವ್ಯ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಪ್ರಧಾನಿ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ನಡುವಿನ ಸ್ನೇಹ ಈಗ ‘ಮೆಲೋಡಿ’ ಚಾಕೊಲೇಟ್ ಮೂಲಕ ಮತ್ತೆ ಸುದ್ದಿಯಾಗಿದೆ. ಹಿಂದೆ ನಡೆದ ವಿಶ್ವಸಂಸ್ಥೆಯ ಸಿಒಪಿ-28 ಶೃಂಗಸಭೆಯಲ್ಲಿ ಇಬ್ಬರ ಸೆಲ್ಫಿಯನ್ನು ‘Melodi’ ಎಂದು ಕರೆಯಲಾಗಿತ್ತು. ಇದೇ ಹಿನ್ನೆಲೆಯಲ್ಲಿ ಮೋದಿ, ಮೆಲೋನಿಗೆ Parle ಕಂಪನಿಯ ಜನಪ್ರಿಯ ‘Melody’ ಚಾಕೊಲೇಟ್ ಉಡುಗೊರೆಯಾಗಿ ನೀಡಿರುವ ವಿಡಿಯೋ ಭಾರಿ ವೈರಲ್ ಆಗಿದೆ.ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾರತದಲ್ಲಿ ಮೆಲೋಡಿ ಚಾಕೊಲೇಟ್‌ಗೆ ಬೇಡಿಕೆ ಏಕಾಏಕಿ ಹೆಚ್ಚಾಗಿದೆ. ಸಣ್ಣ ಅಂಗಡಿಗಳಿಂದ ಹಿಡಿದು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳವರೆಗೆ ಮೆಲೋಡಿ ಸ್ಟಾಕ್ ಖಾಲಿಯಾಗುತ್ತಿದೆ ಎನ್ನಲಾಗಿದೆ.

Blinkit ಸೇರಿದಂತೆ ಹಲವು ಇ-ಕಾಮರ್ಸ್ ವೇದಿಕೆಗಳಲ್ಲಿ ಮೆಲೋಡಿ ಚಾಕೊಲೇಟ್ “Out of Stock” ಆಗಿದೆ. ₹50 ಮತ್ತು ₹100 ಬೆಲೆಯ ಪ್ಯಾಕ್‌ಗಳು ವೇಗವಾಗಿ ಮಾರಾಟವಾಗುತ್ತಿದ್ದು, ಗ್ರಾಹಕರು ಖರೀದಿಸಲು ಮುಗಿಬಿದ್ದಿದ್ದಾರೆ.ಇದರ ಜೊತೆಗೆ ಷೇರುಮಾರುಕಟ್ಟೆಯಲ್ಲೂ ಪಾರ್ಲೆ ಉತ್ಪನ್ನಗಳ ಬೇಡಿಕೆ ಏರಿಕೆಯಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ “Melodi moment” ಮತ್ತೆ ಟ್ರೆಂಡ್ ಆಗಿದೆ.

ಪ್ರಧಾನಿ ಮೋದಿ ಯಾವ ಪ್ರದೇಶಕ್ಕೆ ಭೇಟಿ ನೀಡಿದರೂ ಅಥವಾ ಯಾವುದಾದರೂ ಉತ್ಪನ್ನವನ್ನು ಉಲ್ಲೇಖಿಸಿದರೂ ಅದು ಟ್ರೆಂಡ್ ಆಗುವುದು ಹೊಸದೇನಲ್ಲ. ಈ ಹಿಂದೆ ಲಕ್ಷದ್ವೀಪ ಭೇಟಿ ಬಳಿಕ ಅಲ್ಲಿನ ಪ್ರವಾಸೋದ್ಯಮಕ್ಕೆ ಭಾರೀ ಉತ್ತೇಜನ ಸಿಕ್ಕಿತ್ತು. ಇದೀಗ ‘ಮೆಲೋಡಿ’ ಚಾಕೊಲೇಟ್ ಕೂಡ ಅದೇ ರೀತಿಯ ಕ್ರೇಜ್ ಸೃಷ್ಟಿಸಿದೆ.

Tags: ColosseumGiorgia MeloniItaly VisitMelodiMelody ChocolateModi Meloni FriendshipNarendra ModiParle MelodyPM ModiRome Visit
Previous Post

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

Next Post

ಮೃತ್ಯು ಬಗ್ಗೆ ಅಪಪ್ರಚಾರ ಯಾಕೆ? ಟ್ವಿಶಾ ಶರ್ಮಾ ಸಾವು ಪ್ರಕರಣಕ್ಕೆ ಹೊಸ ತಿರುವು

Related Posts

ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್
Top Story

ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

by ಪ್ರತಿಧ್ವನಿ
May 20, 2026
0

- *ಸರ್ವರನ್ನೂ ಒಳಗೊಳ್ಳುವ ಕ್ರೀಡಾ ಸೌಕರ್ಯ ನಿರ್ಮಾಣಕ್ಕೆ ಸರ್ವಜ್ಞನಗರ ಸಜ್ಜು* ಬೆಂಗಳೂರು,ಮೇ 20,2026: ಬಾಣಸವಾಡಿ ರೈಲ್ವೆ ನಿಲ್ದಾಣದ ಸಮೀಪ ಒಳಚರಂಡಿ ಕಾಮಗಾರಿ ಕೈಗೊಳ್ಳಲು ಸಹಕರಿಸಿ, ರಾಜ್ಯ ಸರ್ಕಾರದ...

Read moreDetails
ರೋಮ್‌ನಲ್ಲಿ ಮೋದಿ–ಮೆಲೋನಿ ಸ್ನೇಹದ ಸದ್ದು: ಮೇಲೋನಾಗೆ ‘ಮೆಲೋಡಿ’ ಚಾಕೊಲೇಟ್ ಗಿಫ್ಟ್‌!

ಅಭಿಷೇಕ್ ಬ್ಯಾನರ್ಜಿಗೆ ಬಿಜೆಪಿ ಹೊಸ ಶಾಕ್..! 43 ಆಸ್ತಿಗಳ ಪಟ್ಟಿ ಬಿಡುಗಡೆ

May 20, 2026
ರೋಮ್‌ನಲ್ಲಿ ಮೋದಿ–ಮೆಲೋನಿ ಸ್ನೇಹದ ಸದ್ದು: ಮೇಲೋನಾಗೆ ‘ಮೆಲೋಡಿ’ ಚಾಕೊಲೇಟ್ ಗಿಫ್ಟ್‌!

ಮೃತ್ಯು ಬಗ್ಗೆ ಅಪಪ್ರಚಾರ ಯಾಕೆ? ಟ್ವಿಶಾ ಶರ್ಮಾ ಸಾವು ಪ್ರಕರಣಕ್ಕೆ ಹೊಸ ತಿರುವು

May 20, 2026
ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

May 20, 2026
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
Next Post
ರೋಮ್‌ನಲ್ಲಿ ಮೋದಿ–ಮೆಲೋನಿ ಸ್ನೇಹದ ಸದ್ದು: ಮೇಲೋನಾಗೆ ‘ಮೆಲೋಡಿ’ ಚಾಕೊಲೇಟ್ ಗಿಫ್ಟ್‌!

ಮೃತ್ಯು ಬಗ್ಗೆ ಅಪಪ್ರಚಾರ ಯಾಕೆ? ಟ್ವಿಶಾ ಶರ್ಮಾ ಸಾವು ಪ್ರಕರಣಕ್ಕೆ ಹೊಸ ತಿರುವು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!