ಕೇಂದ್ರ ಸರ್ಕಾರದ ನೂತನ ಕರೋನಾ ವೈರಸ್ ಲಸಿಕೆ ನೀತಿಯ ಬಗ್ಗೆ ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ಮೋದಿ ಸರ್ಕಾರದ ತಾರತಮ್ಯದ ನೀತಿ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು. ಕೋವಿಡ್ -19 ಲಸಿಕೆಯ ಬೆಲೆ ಕುರಿತು ಸರ್ಕಾರದ ನೀತಿ ಮತ್ತು ತಾರತಮ್ಯದ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶ್ನೆ ಎತ್ತಿದ ಬೆನ್ನಲ್ಲೇ ಈಗ, ಮಮತಾ ಬ್ಯಾನರ್ಜಿ ಲಸಿಕೆಯನ್ನು ಏಕೆ ವಿವಿಧ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಕೇಳಿದ್ದಾರೆ.
ಒಂದೇ ಲಸಿಕೆಗೆ ಮೂರು ಬಗೆಯ ದರ ನಿಗದಿ ಮಾಡಿರೋದು ಏಕೆ?
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕರೋನಾ ಲಸಿಕೆಯ ಬೆಲೆಗಳ ಕುರಿತು ಕೇಂದ್ರ ಸರ್ಕಾರದ ಉದ್ದೇಶ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
“ಬಿಜೆಪಿ ಒಂದು ದೇಶದ ಒಂದು ಚುನಾವಣೆಯ ಬಗ್ಗೆ ಮಾತನಾಡುತ್ತದೆ, ಆದರೆ ಲಸಿಕೆ ವಿಷಯದಲ್ಲಿ ಸರ್ಕಾರದ ನೀತಿ ಏಕೆ ಭಿನ್ನವಾಗಿದೆ? ಒಂದು ಲಸಿಕೆಯನ್ನು ವಿವಿಧ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ದೇಶದಲ್ಲಿ ಒಂದು ಲಸಿಕೆ, ಒಂದು ಬೆಲೆ ಅಂತ ಏಕೆ ಇರಬಾರದು. ಕೇಂದ್ರ ಸರ್ಕಾರ ಮಾತ್ರ ಲಸಿಕೆಯನ್ನು ಕಡಿಮೆ ಬೆಲೆಗೆ ಖರೀದಿಸಿ, ರಾಜ್ಯಗಳು ಹೆಚ್ಚಿನ ಬೆಲೆ ನೀಡುತ್ತಿದೆ. ಇದು ರಾಜ್ಯಗಳ ವಿರುದ್ಧ ತಾರತಮ್ಯವನ್ನು ತೋರುತ್ತದೆ. ವಿವಿಧ ಬೆಲೆಗೆ ಏಕೆ ಮಾರಟ ಮಾಡುತ್ತಿದ್ಧೆ ಇದರ ಉದ್ದೇಶ ಏನು? ಎಂದು ಕೇಂದ್ರ ಸರ್ಕಾರಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಶ್ನಿಸಿದ್ದಾರೆ.
ಇಂತಹ ತುರ್ತು ಪರಿಸ್ಥಿತಿಯಲ್ಲಿ ಎಲ್ಲರೂ ಒಂದೇ ದರದಲ್ಲಿ ಲಸಿಕೆ ಪಡೆಯಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.