‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಲ ಮಾಡಿ ತುಪ್ಪ ತಿನ್ನು ವ ಚಾಳಿ ಇದೆ. ಅದಕ್ಕಾ ಗಿಯೇ ಇರುವ ಎಲ್ಲ ಸರ್ಕಾರಿ ಸ್ವಾಮ್ಯ ದ ಸಂಸ್ಥೆ ಗಳನ್ನು ಮಾರಾಟ ಮಾಡುತ್ತಿದ್ದಾರೆ’ ಎಂದು ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಭಾನುವಾರ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಸರ್ಕಾರಕ್ಕೆ ಬರುವ ತೆರಿಗೆ ಹಣ, ಜಿಎಸ್ಟಿ ತೆರಿಗೆ ಸಾಕಷ್ಟು ಬಂದರೂ ಸರ್ಕಾರ ಆಸ್ತಿ ಮಾರಾಟಮಾಡಲು ಮುಂದಾಗಿದೆ. ಸರ್ಕಾರಿ ಸ್ವಾಮ್ಯ ದ ಸಂಸ್ಥೆ ಖಾಸಗಿಯವರಿಗೆ ಕೊಟ್ಟರೆ ತಾವು ಭರವಸೆ ನೀಡಿದ್ದ ಉದ್ಯೋಗ ಸೃಷ್ಟಿ ಹೇಗೆ ಮಾಡುತ್ತಾರೆ’ ಎಂದರು.
ನರೇಂದ್ರ ಮೋದಿ ಅವರಿಗೆ ಸಾಲ ಮಾಡಿ ತುಪ್ಪ ತಿನ್ನುವ ಚಾಳಿ ಇದೆ. ಹಾಗಾಗಿಯೇ ಎಲ್ಲಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನ ಮಾರಾಟ ಮಾಡುತ್ತಿದ್ದಾರೆ. ಸಾಕಷ್ಟು ತೆರಿಗೆ ಬಂದರೂ ಆಸ್ತಿ ಮಾರಾಟ ಮಾಡಲು ಸರ್ಕಾರ ಮುಂದಾಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆ ಖಾಸಗಿಯವರಿಗೆ ಕೊಟ್ಟರೆ ತಾವು ಭರವಸೆ ನೀಡಿದ್ದ ಉದ್ಯೋಗ ಸೃಷ್ಟಿ ಹೇಗೆ ಮಾಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ರೈತ ವಿರೋಧಿ ಕಾಯ್ದೆ ಹಾಗೂ ಜನರ ವೈಯಕ್ತಿಕ ಸ್ವಾತಂತ್ರ್ಯ ಹರಣ ಮಾಡುವ ಪೆಗಾಸಸ್ ಗೂಢಚರ್ಯೆ ಕುರಿತು ಚರ್ಚಿಸಲು ಮುಂದಾದರೆ ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಚರ್ಚೆಗೇ ಬರುವುದಿಲ್ಲ. ಪ್ರಧಾನಿಯಾದವರು ಲೋಕಸಭೆ, ರಾಜ್ಯಸಭೆಯ ಕಲಾಪಗಳಿಗೆ ಬರಬೇಕು. ಆದರೆ ನರೇಂದ್ರ ಮೋದಿ ಅವರು ತಮಗೂ ರಾಜ್ಯಸಭೆಗೂ ಸಂಬಂಧವಿಲ್ಲದಂತೆ ಇದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರು ದೇಶದ ಆಸ್ತಿಗಳನ್ನು ತಮಗೆ ಬೇಕಾದ ಉದ್ಯಮಿಗಳಿಗೆ ಹಸ್ತಾಂತರಿಸುತ್ತಿದ್ದಾರೆ. ಸರ್ಕಾರಿ ಆಸ್ತಿಗಳನ್ನು ಪಡೆದ ಉದ್ಯಮಿಗಳು ಚುನಾವಣೆಯಲ್ಲಿ ಬಿಜೆಪಿಗೆ ಹಣಕಾಸು ಸಹಾಯ ಮಾಡುತ್ತಾರೆ. ಒಟ್ಟಾರೆ ನರೇಂದ್ರ ಮೋದಿ ಅವರ ದುರಾಡಳಿತದಿಂದ ಜನರು ಮುಗಿಯದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.