ಹರಿಯಾಣ ಚುನಾವಣಾ ಪ್ರಚಾರದಲ್ಲಿ (Hariyana election campaign) ಪ್ರಧಾನಿ ನರೇಂದ್ರ ಮೋದಿ (Pm narendra modi) ಸಿಎಂ ಸಿದ್ದರಾಮಯ್ಯ (Cm siddaramaiah) ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಹರಿಯಾಣದಲ್ಲಿ ಕಾಂಗ್ರೆಸ್ ಈ ಹಿಂದೆ ಯಾವ ಪರಿಸ್ಥಿತಿಗೆ ಬಂದಿತ್ತೋ,ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅದೇ ಪರಿಸ್ಥಿತಿಗೆ ಬಂದಿದೆ ಎಂದಿದ್ದಾರೆ.

ಕರ್ನಾಟಕದ ಸಿಎಂ ಮೇಲೆ ಜಮೀನು ಹಗರಣದ ಆರೋಪ ಇದೆ. ಈ ಪ್ರಕರಣ ದಾಖಲಾದ ತಕ್ಷಣವೇ ಸಿದ್ದರಾಮಯ್ಯ ಹೈ ಕೋರ್ಟ್ (High court) ಮೆಟ್ಟಿಲೇರಿದ್ರು, ಆದ್ರೆ ಹೈ ಕೋರ್ಟ್ ಕೂಡ ಅವರಿಗೆ ಚಾಟಿ ಬೀಸಿದೆ. ನಿನ್ನೆ ಹೈ ಕೋರ್ಟ್ ಆದೇಶ ನೀಡಿದ್ದು, ಹಗರಣದ ತನಿಖೆ ಆಗಲಿ ಅಂತಾ ಹೇಳಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಕಷ್ಟಪಟ್ಟು ಎರಡು ವರ್ಷ ಪೂರೈಸಿದ್ದಾರೆ. ಅದೇ ಮಾದರಿಯ ಪಾಪ ಮಾಡಲು ಮತ್ತೆ ಹರಿಯಾಣದಲ್ಲಿ ಅವಕಾಶ ಕೊಡ್ತೀರಾ? ಅಂತಹ ತಪ್ಪುಗಳನ್ನು ನೀವು ಹರಿಯಾಣದ ಜನ ಮಾಡಬೇಡಿ ಅಂತ ಪ್ರಧಾನಿ ಮತದಾರನಿಗೆ ಕರೆ ಕೊಟ್ಟಿದ್ದಾರೆ.