ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಕ್ಸಮರಕ್ಕೆ ವ್ಯಂಗ್ಯದ ಮೂಲಕವೇ ಟಾಂಗ್ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಅವರ ವಾಕ್ಚಾತುರ್ಯ ಇಡೀ ಸದನವೇ ನಗೆಗಡಲಲ್ಲಿ ತೇಲುವಂತೆ ಮಾಡಿತ್ತು .
ರಾಷ್ಟ್ರಪತಿಯ ದ್ರೌಪದಿ ಮುರ್ಮು ಅವರ ಭಾಷಣವನ್ನ 140 ಕೋಟಿ ಜನರು ಸೆಲೆಬ್ರೇಷನ್ ಮಾಡಿದ್ರು. ಈ ಅಮೃತ ಮಹೋತ್ಸವದಲ್ಲಿ ರಾಷ್ಟ್ರಪತಿಗಳು ದೇಶದ ಮಹಿಳೆಯರ ಮತ್ತು ಆದಿವಾಸಿ ಸಮುದಾಯದ ಗೌರವ ಹೆಚ್ಚಿಸಿದ್ದಾರೆ ಎಂದರು.
ಸದನದಲ್ಲಿ ಎಲ್ಲ ನಾಯಕರು ರಾಷ್ಟ್ರಪತಿ ಭಾಷಣದ ಮೇಲೆ ಚರ್ಚೆ ಮಾಡಿದ್ರು. ಯಾರಿಗೆ ಎಷ್ಟು ಗೊತ್ತಿದೆ, ಎಷ್ಟು ತಿಳಿದಿದೆ, ಅವರವರ ಸಿದ್ಧಾಂತದ ಮೇಲೆ ಚರ್ಚೆ ನಡೆಸಿದ್ದಾರೆ. ಕೆಲ ನಾಯಕರು ಜೋರಾಗಿ ಭಾಷಣ ಮಾಡಿದ್ರೆ, ಇನ್ನು ಹಲವರು ಖುಷಿಯಿಂದ ರಾಷ್ಟ್ರಪತಿಗಳ ಭಾಷಣ ಆಲಿಸಿದ್ರು. ಆದ್ರೆ ಒಬ್ಬ ಮಹಾನ್ ನಾಯಕ ರಾಷ್ಟ್ರಪತಿಗಳನ್ನ ಅಪಮಾನ ಮಾಡಿದ. ಇದರಿಂದಾಗಿ ಅವರ ಮನಸ್ಥಿತಿ ಬಹಿರಂಗವಾಯಿತು ಎಂದರು ಪ್ರಧಾನಿ.
ಕೊರೊನಾ ದೊಡ್ಡ ಮಹಾಮಾರಿ ಇಡೀ ವಿಶ್ವವೇ ಬೆಚ್ಚಿ ಬಿದ್ದಿತ್ತು. ಜನರಿಗೆ ಒಂದೊತ್ತಿನ ಊಟಕ್ಕೂ, ಕುಡಿಯುವ ನೀರಿಗೂ ಕಷ್ಟಕರವಾಗಿತ್ತು. ನಮ್ಮ ದೇಶಕ್ಕೆ ಇದು ಸವಾಲಾಗಿ ಪರಿಣಮಿಸಿತ್ತು. ಆದ್ರೆ ದೇಶ ಎಲ್ಲವನ್ನು ಧೈರ್ಯದಿಂದ ಎದುರಿಸಿದೆ. 140 ಕೋಟಿ ಜನರು ಇಂದು ನೆಮ್ಮದಿಯಾಗಿದ್ದಾರೆ. ಇಂದು ಕ್ಷಣಾರ್ಧದಲ್ಲಿ ಕೊರೊನಾ ಸರ್ಟಿಫಿಕೆಟ್ ಅನ್ನ ಮೊಬೈಲ್ ಅಲ್ಲಿ ಪಡೆಯಬಹುದು. ಇಂತಹ ಸಾಧನೆ ಮಾಡಿರೋದು ನಮ್ಮ ಸರ್ಕಾರ ಎಂದು ಹೇಳಿದರು.
ಭಾರತ ಸಮಸ್ಯೆಗಳಿಂದ ಬೇರೆ ರಾಷ್ಟ್ರಗಳ ಮೇಲೆ ಅವಲಂಭಿಸುತ್ತಿತ್ತು. ಈಗ ಬೇರೆ ದೇಶಗಳೇ ನಮ್ಮ ಭಾರತದ ಮೇಲೆ ಅವಲಂಭಿತವಾಗಿವೆ. ದೇಶದ ಪಾಲಿಸಿಗಳು ದೂರದೃಷ್ಟಿಯಿಂದ ಕೂಡಿದ್ದು, ಹಲವು ದಶಕಗಳ ಬಳಿಕ ಅಭಿವೃದ್ಧಿಯಾಗುತ್ತಿದೆ ಎಂದು ರಾಷ್ಟ್ರಪತಿಗಳ ಭಾಷಣದಲ್ಲಿ ಉಲ್ಲೇಖಿಸಲಾಗಿದೆ. ಇದನ್ನ ಎಲ್ರೂ ಒಪ್ಪಿದ್ದಾರೆ ಎಂದರು.
ಕೆಲವು ಜನರು ಭಾರೀ ನಿರಾಸೆಯಲ್ಲಿದ್ದಾರೆ. ಆದ್ರೆ ಅವರಿಗೆ ದೇಶದ ಅಭಿವೃದ್ಧಿಯನ್ನು ಸ್ವೀಕರಿಸಲು ಆಗುತ್ತಿಲ್ಲ. ದೇಶ ಸ್ಟಾರ್ಟ್ ಅಪ್ನಲ್ಲಿ ಮುಂದೆ ಸಾಗುತ್ತಿದೆ. ಒಂದು ಯೂನಿಕಾನ್ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ದೇಶದಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ಲಿಮಿಟೆಡ್ ಆಗಿದ್ದವು. ಆದ್ರೆ ಈಗ ಅವುಗಳ ಕೊರತೆ ಕಾಡ್ತಿಲ್ಲ. ದೇಶ ಮೊಬೈಲ್ ರೆಡಿ ಮಾಡುವಲ್ಲಿ ವಿಶ್ವದಲ್ಲೇ ಮುಂದೆ ಇದೆ ಎಂದು ರಾಹುಲ್ ಗಾಂಧಿಗೆ ಮಾತಿನ ಮೂಲಕ ತಿವಿದರು.