ಭಾರತದ ದೂರಸಂಪರ್ಕ ಇಲಾಖೆ (ಡಿಒಟಿ), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ವಿಪತ್ತು ಸಂದರ್ಭದಲ್ಲಿ ಜನರಿಗೆ ನೀಡಲಾಗುವ ಎಚ್ಚರಿಕೆಯ ಸೂಚನೆಯ ಬಗ್ಗೆ ಇಂದು ( ಅಕ್ಟೋಬರ್ 12) ಪ್ರಾಯೋಗಿಕ ಪರೀಕ್ಷೆ ನಡೆದಿದೆ.
ಈ ಸಂದರ್ಭದಲ್ಲಿ ಧ್ವನಿ ಮತ್ತು ಕಂಪನದೊಂದಿಗೆ ಮೊಬೈಲ್ ಫೋನ್ಗೆ ಎಚ್ಚರಿಕೆಯ ಸಂದೇಶ ಬಂದಿದೆ. ಈ ಎಚ್ಚರಿಕೆಗಳು ವಿಪತ್ತು ಸಂದರ್ಭದಲ್ಲಿ ಜನರನ್ನು ಎಚ್ಚರಿಸುವ ಯೋಜಿತ ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದ್ದು, ಯಾರೂ ಕೂಡಾ ಈ ಎಚ್ಚರಿಕೆಯ ಹಿನ್ನೆಯಲ್ಲಿ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಭಾರತದ ದೂರಸಂಪರ್ಕ ಇಲಾಖೆ (ಡಿಒಟಿ) ತಿಳಿಸಿದೆ.