ಖಾಲಿಸ್ತಾನಿ ವಿರೋಧಿ ಪ್ರತಿಭಟನೆಯ ವೇಳೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಪಂಜಾಬ್ನ ಪಟಿಯಾಲದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಶನಿವಾರ ಪಂಜಾಬ್ ಸರ್ಕಾರ ಮೂವರು ಪೊಲೀಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಜಿಲ್ಲೆಯಾದ್ಯಂತ ಇಂರ್ಟನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ.
ಮುಖ್ವಿಂದರ್ ಸಿಂಗ್ ಚಿನ್ನಾರನ್ನು ನೂತನ ಐಜಿಯಾಗಿ ನೇಮಿಸಲಾಗಿದೆ. ದೀಪಕ್ ಪಾರಿಕ್ ಪಂಜಾಬ್ನ ಡಿಎಸ್ಪಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ವಜೀರ್ ಸಿಂಗ್ ಆಯುಕ್ತರಾಗಿ ನೇಮಕವಗಿದ್ದಾರೆ.
ಗೃಹ ಇಲಾಖೆಯ ಆದೇಶದ ಮೇರೆಗೆ ಜಿಲ್ಲೆಯಾದ್ಯಂತ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಬೆಳ್ಳಗ್ಗೆ 9ರಿಂದ ಸಂಜೆ 6ರವರೆಗೆ ಇಂರ್ಟನೆಟ್ ಸೇವೆ ಸ್ಥಗಿತವಾಗಿರುತ್ತದೆ.
