
ಕೊಪ್ಪಳದಲ್ಲಿ ಬಲ್ದೋಟಾ ಕಂಪನಿ ವಿರುದ್ಧ ಆಡಳಿತ ಪಕ್ಷದ ಶಾಸಕ, ಸಂಸದರಿಂದಲೇ ಪ್ರತಿಭಟನೆ ನಡೆಸಲಾಗ್ತಿದೆ. ಹಿಟ್ನಾಳ್ ಸೋದರರ ಪ್ರತಿಭಟನೆಯಲ್ಲಿ ಜನಾದರ್ನ ರೆಡ್ಡಿ ಕೂಡ ಭಾಗಿಯಾಗಿದ್ದು, ಸರ್ಕಾರದ ಗಣಿನೀತಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅಂದು ರೆಡ್ಡಿ ಗಣಿಗಾರಿಕೆ ವಿರುದ್ಧ ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ್ರು. ಇಂದು ಸಿದ್ದರಾಮಯ್ಯ ಗಣಿನೀತಿ ವಿರುದ್ಧ ಜನಾರ್ದನ ರೆಡ್ಡಿ ಪ್ರತಿಭಟನೆ ನಡೆಸ್ತಿದ್ದಾರೆ.

ಇನ್ವೆಸ್ಟ್ ಕರ್ನಾಟಕ ಒಡಂಬಡಿಕೆ ಹಿನ್ನೆಲೆ, ಕೊಪ್ಪಳದಲ್ಲಿ ಬಲ್ದೋಟಾ ಕಂಪೆನಿ ಸ್ಪಾಂಜ್ ಐರನ್ ತಯಾರಿಕೆಗೆ ಮುಂದಾಗಿದೆ. ಆದ್ರೆ ಇದಕ್ಕೆ ಗವಿಮಠದ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಕರೆ ಮಾಡಿರುವ ಗವಿಮಠದ ಶ್ರೀಗಳು, ಗಣಿಗಾರಿಕೆಗೆ ಅವಕಾಶ ನೀಡದಂತೆ ಮನವಿ ಮಾಡಿದ್ದಾರೆ. ಸದ್ಯ ಇದರಿಂದ ಅಸಹಾಯಕ ಸ್ಥಿತಿಯಲ್ಲಿರುವ ಸಿಎಂ ಸಿದ್ದರಾಮಯ್ಯಗೆ ಒಂದೆಡೆ ಗಣಿಗಾರಿಕೆಗೆ ಸ್ವಪಕ್ಷದಿಂದ ವಿರೋಧ.. ಮತ್ತೊಂದೆಡೆ ಹೂಡಿಕೆ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತೆ ಎಂಬ ಆತಂಕ ಶುರುವಾಗಿದೆ.

ಹಿಟ್ನಾಳ್ ಬ್ರದರ್ಸ್ ಮತ್ತು ರೆಡ್ಡಿ ದಿಢೀರ್ ಗಣಿಗಾರಿಕೆಗೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರತಿಭಟನೆಗೆ ವೈಯಕ್ತಿಕ ಕಾರಣಗಳ ನೆಪವೆಂದು ಚರ್ಚಿಸಲಾಗ್ತಿದೆ. ಸಿಎಂ ಆಪ್ತ ವಲಯದಲ್ಲಿದ್ದುಕೊಂಡೇ ಪ್ರತಿಭಟನೆಗಿಳಿದಿರುವುದಕ್ಕೆ ಹಿಟ್ನಾಳ್ ಸೋದರರ ಮೇಲೆ ಸಿಎಂ ಸಿಟ್ಟಾಗಿದ್ದರಂತೆ. ಇನ್ವೆಸ್ಟ್ ಕರ್ನಾಟಕದಲ್ಲಿ ಬಲ್ದೋಟಾ ಕಂಪನಿ ಜೊತೆ ಗಣಿಗಾರಿಕೆ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಸದ್ಯ ಈಗ ಸ್ವಪಕ್ಷದಲ್ಲೇ ವಿರೋಧ ವ್ಯಕ್ತವಾಗಿರುವುದು ಸರ್ಕಾರಕ್ಕೆ ಟೆನ್ಷನ್ ಶುರುವಾಗಿದೆ.

ಕೊಪ್ಪಳದಲ್ಲಿ MSPL ಕಾರ್ಖಾನೆ ಸ್ಥಾಪನೆ ವಿಚಾರವಾಗಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಇಂದು ಬಹಿರಂಗ ಸಭೆ ವೇಳೆ ಗವಿಮಠದ ಶ್ರೀಗಳು ಕಣ್ಣೀರು ಹಾಕಿದ್ದಾರೆ. ಕೊಪ್ಪಳದ ಸುತ್ತಮುತ್ತಲಿನ ಫ್ಯಾಕ್ಟರಿ ಧೂಳಿನಿಂದ ಆಗುವ ಅನಾಹುತಗಳ ಕುರಿತು ವಿಡಿಯೋ ಪ್ಲೇ ಮಾಡಲಾಗಿತ್ತು. ಈ ವೇಳೆ ವಿಡಿಯೋ ನೋಡುತ್ತಾ ಶ್ರೀಗಳು ಕಣ್ಣೀರು ಹಾಕಿದ್ದಾರೆ.