ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ಸಿಎಂ ಸಿದ್ದರಾಮಯ್ಯ (Siddaramiah) ಹಾಗೂ ಡಿಸಿಎಂ ಡಿಕೆಶಿ (DKS) ನಡುವೆ ಒಂದೆಲ್ಲಾ ಒಂದು ರೀತಿಯ ಶಿತಲಸಮರಗಳು ನಡೆಯುತ್ತಲೇ ಇದೆ. ಈ ಇಬ್ಬರು ಮಹಾನ್ ನಾಯಕರ ಬೆಂಬಲಿಗರಂತೂ ಕೊಂಚ ಜಾಸ್ತಿ ಎಂಬಂತೆಯೇ ತಮ್ಮ ನಾಯಕರನ್ನ ಹಾಡಿ ಹೊಗಳಿ ಮನ ಮೆಚ್ಚಿಸೋ ಕೆಲ್ಸ ಮಾಡ್ತಾರೆ. ಭಾನುವಾರ ಚಿತ್ರದುರ್ಗದಲ್ಲಿ ನಡೀತಿರೋ ಅಹಿಂದ ಸಮಾವೇಶದಲ್ಲಿ ಶಾಸಕ ಪ್ರದೀಪ್ ಈಶ್ವರ್ (Pradeep ishwar) ಡಿಸಿಎಂ ಡಿಕೆಶಿ ಎದುರಿಗೆ ಸಿಎಂ ಸಿದ್ದರಾಮಯ್ಯ ಅವರನ್ನ ಹಾಡಿ ಹೊಗಳಿ ತಮ್ಮ ನಿಷ್ಠೆ ತೋರಿಸಿದ್ದಾರೆ.
ಸಮಾವೇಶದಲ್ಲಿ ಭಾಗಿಯಾಗಿದ್ದ ಪ್ರದೀಪ್ ಈಶ್ವರ್ , ವೇದಿಕೆಯಲ್ಲಿ ಭಾವೋದ್ವೇಗದಿಂದ ಭಾಷಣ ಮಾಡಿದ್ರು. 1948 ಆಗಸ್ಟ್ 12 ಕ್ಕೆ ಕರ್ನಾಟಕದಲ್ಲಿ ಒಬ್ಬ ಗಂಡಸು ಹುಟ್ಟಿದ ಅವರೇ ನಮ್ಮ ಸಿದ್ದರಾಮಯ್ಯ . ಬೇರೆ ಸರ್ಕಾರದವರು ಚಂದ್ರ ಲೋಕದಲ್ಲಿ ನೀರು ಹುಡುಕುತ್ತಿದ್ರೆ , ನಮ್ಮ ಸಿದ್ದರಾಮಯ್ಯ ನವ್ರು ಬಡವರ ಕಣ್ಣೀರು ಒರೆಸೋ ಪ್ರಯತ್ನ ಮಾಡ್ತಿದ್ದಾರೆ. ನಿಜಕ್ಕೂ ಸಿದ್ದರಾಮಯ್ಯ ಹೃದಯವಂತ ರಾಜಕಾರಣಿ. ಇವತ್ತಿನ ಕಾಲಘಟ್ಟದ ದಿ ಲೆಜೆನ್ಡ್ ರಾಜಕಾರಣಿಯಾಗಿದ್ದಾರೆ ಅಂತ ಹಾಡಿ ಹೊಗಳಿದ್ರು. ಸಿಎಂ ಸಿದ್ದು ಹಾಗೂ ಡಿಸಿಎಂ ಡಿಕೆಶಿ ಬಡವರ ಪಾಲಿನ ಆಶಾಕಿರಣ. ಸಿದ್ದರಾಮಯ್ಯ ಸಿಎಂ ಆದ ಮೇಲೆ 5 ಗ್ಯಾರಂಟಿ ಜಾರಿ ಮಾಡಿದ್ದಾರೆ. ಎಲ್ಲವೂ ಯಶಸ್ವಿಯಾಗಿವೆ. ಸಿಎಂ ಸಿದ್ದು ಕೋಟ್ಯಂತರ ಜನರ ಕಣ್ಣೀರನ್ನ ಒರೆಸಿದ್ದಾರೆ ಹಾಗೂ ಹೊಟ್ಟೆ ತುಂಬಿಸಿದ್ದಾರೆ. ಮುಂದೆಯೂ ಖಂಡಿತ ಒಳ್ಳೆ ಆಡಳಿತ ನೀಡಿಲಿದ್ದಾರೆ ಅಂತ ಹೇಳಿದ್ರು . ಒಟ್ನಲ್ಲಿ ಶಾಸಕ ಪ್ರದೀಪ್ ಈಶ್ವರ್ , ಡಿಸಿಎಂ ಮುಂದೆಯೇ ಸಿಎಂ ನ ಹೈಲೈಟ್ ಮಾಡಿ ಭಾಷಣ ಮಾಡಿರೋದು ರಾಜಕೀಯ ಪಂಡಿತರ ಹುಬ್ಬೇರುವಂತೆ ಮಾಡಿದೆ.