ಡಿಕೆ ಸುರೇಶ್ (Dk suresh) ಅವರೇ ಮೊದಲು ನಿಮ್ಮಣ್ಣನ ಹಿನ್ನೆಲೆ ಹುಡುಕಿ, ಆಮೇಲೆ ನನ್ನ ತಮ್ಮನ ಹಿನ್ನೆಲೆ ಹುಡುಕಿ.ನಿಮ್ಮಣ್ಣನಂಥ ನೂರು ಜನ ಹಾಕಿದರೂ ನನ್ನ ತಮ್ಮ ಆಗಲ್ಲ ಎಂದು ಡಿಕೆ ಶಿವಕುಮಾರ್ (Dk Shivakumar) ಅವರನ್ನು ಉದ್ದೇಶಿಸಿ ಮುನಿರತ್ನ (Muniratna) ಡಿಕೆ ಸುರೇಶ್ ಗೆ ಟಾಂಗ್ ಕೊಟ್ಟಿದ್ದಾರೆ.

ಮೊದಲು ನಿಮ್ಮಣ್ಣನ ಬಳಿ ನಾಲ್ಕು ಸಾವಿರದ ಹಳೇ ಜಾವಾ ಇತ್ತು.ನಿಮ್ಮಣ್ಣನಿಗೆ ಎಲ್ಲರ ಜೊತೆ ಹೊಂದಿಕೊಂಡು ಎಲ್ಲರ ಜತೆ ಸ್ನೇಹಿಯಾಗಿ ಬದುಕುವಂತೆ ಬುದ್ಧಿ ಹೇಳಿ.ನನ್ನ ಮೇಲೆ ಸುಳ್ಳು ಕೇಸ್ ಹಾಕಿಸಿದ್ದೀರಿ, ಆ ದೇವರು ಮೆಚ್ಚಲ್ಲ ನಿಮ್ಮನ್ನ ಎಂದು ವಾಗ್ದಾಳಿ ನಡೆಸಿದ್ದಾರೆ.

ನೀವು ತಪ್ಪು ಮಾಡಿದ್ದೀರಿ, ಏನಾಗುತ್ತೋ ನೋಡೋಣ.ಅಧಿಕಾರ ಇದೆ ಒಳ್ಳೇ ರೀತಿಯ ಆಡಳಿತ ಕೊಡಿ, ಅದನ್ನು ಬಿಟ್ಟು ದ್ವೇಷದ ರಾಜಕಾರಣ ಮಾಡಬೇಡಿ ಅಂತ ಡಿಕೆ ಸುರೇಶ್ ಹೇಳಿಕೆಗೆ ಬಿಜೆಪಿ ಶಾಸಕ ಮುನಿರತ್ನ ವಾಗ್ಬಾಣ ಬಿಟ್ಟಿದ್ದಾರೆ.












