ಮಕರ ಸಂಕ್ರಾಂತಿಯಂದೇ (Makara sankranti) ರಾಜರಾಜೇಶ್ವರಿನಗರ (RR Nagar) ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ತಮ್ಮ ಕ್ಷೇತ್ರದ ಜನರಿಗೆ ಪ್ರಮಾಣ ಮಾಡಿದ್ದಾರೆ. ತಮ್ಮ ಕ್ಷೇತ್ರದ ಜನತೆಗೆ ಸಂಕ್ರಾಂತಿ ಶುಭ ಕೋರಿಡಾ ಶಾಸಕ ಮುನಿರತ್ನ (MLA muniratna) ತಮಗೆ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ನನಗೆ ಕ್ಷೇತ್ರದಲ್ಲಿ ಇಂದು ಬಲವಿಲ್ಲ, ಮತದಾರ ಬಂಧುಗಳ ಆಶೀರ್ವಾದ ಒಂದೇ ನನಗೆ ಶ್ರೀರಕ್ಷೆಯಾಗಿದೆ.ಮುಂದಿನ ದಿನಗಳಲ್ಲಿ ನಿಮಗೆ ಒಳ್ಳೆಯ ಕೆಲಸವನ್ನು ಮಾಡುವ ಶಕ್ತಿ ಬರಲಿ ಎಂದು ಪ್ರಾರ್ಥಿಸುತ್ತೇನೆ.ನಿಮಗೆಲ್ಲಾ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ಎಂದು ಹೇಳಿದ್ದಾರೆ.
ಇಂದು ನಾನು ಪ್ರಮಾಣ ಮಾಡುತ್ತಿದ್ದೇನೆ,ನನಗೆ ಬಹಳಷ್ಟು ಕಿರುಕುಳ ಇದೆ.ನನ್ನ ಜೀವಕ್ಕೂ ಕೂಡ ಅಪತ್ತು ಇದೆ.ನಾನು ಲೋಕಸಭಾ ಚುನಾವಣೆಯಲ್ಲಿ ಡಾ.ಸಿ.ಎನ್. ಮಂಜುನಾಥ್ ಪರ ಕೆಲಸ ಮಾಡಿದ್ದೇ ಮುಳುವಾಗಿದೆ. ಆ ಕಾರಣಕ್ಕಾಗಿ ನನ್ನನ್ನು ರಾಜೆಯವಾಗಿ ಟಾರ್ಗೆಟ್ ಮಾಡಿ ಹಿಂಸಿಸಲಾಗುತ್ತಿದೆ ಎಂದು ಮುನಿರತ್ನ ಹೇಳಿಕೊಂಡಿದ್ದಾರೆ.