ರಾಜ್ಯದಲ್ಲಿ ಬಿಜೆಪಿಯವರು (BJP) ನಮ್ಮ ಕಾಂಗ್ರೆಸ್ (Congress) ಶಾಸಕರಿಗೆ BJP ಸೇರಲು ₹100 ಕೋಟಿ ಆಫರ್ ನೀಡುತ್ತಿದ್ದಾರೆ ಎಂಬ ಮಂಡ್ಯದ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ (Ravi ganiga) ಆರೋಪವನ್ನು ಅವರದ್ದೇ ಪಕ್ಷದ ಕಾಂಗ್ರೆಸ್ ಶಾಸಕರೇ ತಳ್ಳಿಹಾಕಿದ್ದಾರೆ.
ಈ ಬಗ್ಗೆ ಮಾತನಾಡುವ ವೇಳೆ ಮಂಡ್ಯದ ಕಾಂಗ್ರೆಸ್ ಶಾಸಕ ಗಣಿಗ ರವಿ, ಕಿತ್ತೂರು ಕಾಂಗ್ರೆಸ್ ಶಾಸಕ (Kittur MLA) ಮತ್ತು ಚಿಕ್ಕಮಗಳೂರಿನ ಕಾಂಗ್ರೆಸ್ ನಾಯಕರ (Chikkamaglore MLA) ಹೆಸರುಗಳನ್ನು ಪ್ರಸ್ತಾಪಿಸಿದ್ದರು. ನಮ್ಮ ಈ ಇಬ್ಬರು ಶಾಸಕರನ್ನು ಬಿಜೆಪಿಯವರು ಯಾಕೆ ಮತ್ತು ಎಲ್ಲಿ ಸಂಪರ್ಕಿಸಿದ್ರು ಎಂಬುದನ್ನ ಬಿಜೆಪಿಯವರು ಹೇಳಬೇಕು ಎಂದು ಆಗ್ರಹಿಸಿದ್ದರು.
ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿತ್ತೂರು ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ್ (Baba saheb Patil) ಮತ್ತು ಚಿಕ್ಕಮಗಳೂರಿನ ಕಾಂಗ್ರೆಸ್ ಶಾಸಕ HD ತಮ್ಮಯ್ಯ (HD tammayya) ತಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಬಿಜೆಪಿಯಲ್ಲಿ ಸ್ನೇಹಿತರಿದ್ದಾರೆ. ಅದನ್ನು ಹೊರತುಪಡಿಸಿದ್ರೆ, ತಮಗೆ ಯಾವುದೇ ದುಡ್ಡಿನ ಆಫರ್ ಬಂದಿಲ್ಲ. ಶಾಸಕ ರವಿ ಗಣಿಗ ನೀಡಿರುವ ಹೇಳಿಕೆ ಸುಳ್ಳು. ಅವರು ಯಾಕೆ ಹೀಗೆ ಹೇಳಿದ್ದಾರೆ ಎಂಬುದಾಗಿ ಅವರನ್ನೇ ಕೇಳಿ ಎಂದು ಕಾಂಗ್ರೆಸ್ ಶಾಸಕರು ಕಿಡಿಕಾರಿದ್ದಾರೆ.