
ಸಿಎಂ ಸಿದ್ದರಾಮಯ್ಯರನ್ನು (Cm siddaramaiah) ಮೊದಲು ಸೋನಿಯಾ ಗಾಂಧಿಗೆ (Sonia gandhi ) ಭೇಟಿ ಮಾಡಿಸಿದ್ದೇ ನಾನು, ಆತನ ಅದೃಷ್ಟ ಚೆನ್ನಾಗಿತ್ತು ಹೀಗಾಗಿ ಸಿಎಂ ಆದ ಎಂಬ ಶಾಸಕ ಬಿ.ಆರ್ ಪಾಟೀಲರ (BR Patil) ವಿಡಿಯೋ ವೈರಲ್ ಆದ ಬೆನ್ನಲ್ಲೇ, ಶಾಸಕ ಯು ಟರ್ನ್ ಹೊಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಬಿ.ಆರ್ ಪಾಟೀಲ್ , ಯಾರೋ ನನ್ನ ಹಾಗೂ ಸಿಎಂ ಸಿದ್ದರಾಮಯ್ಯರ ಸಂಬಂಧ ಹಾಳು ಮಾಡಲು ಈ ವಿಡಿಯೋ ಬಿಟ್ಟಿದ್ದಾರೆ.ನನ್ಮ ಹೇಳಿಕೆಯನ್ನು ತಿರುಚಿ ತೇಜೋವಧೆ ಮಾಡಲಾಗಿದೆ ಎಂದಿದ್ದಾರೆ.
ನಾನು ನನ್ನ ಕೆ.ಆರ್ ಪೇಟೆಯಲ್ಲಿ ಸ್ನೇಹಿತರ ಜೊತೆ ಮಾತನ್ನಾಡುವಾಗ ಸಿದ್ದರಾಮಯ್ಯರ ವಿಚಾರ ಪ್ರಸ್ತಾಪವಾಯಿತು.ಆಗ ಸಿದ್ದರಾಮಯ್ಯ ಲಕ್ಕಿ ಲಾಟರಿಯಿಂದ ಸಿಎಂ ಆದರು ಅಂತಾ ಹೇಳಿದೆ.ಆದರೆ ನಾನು ಸೋನಿಯಾ ಗಾಂಧಿಯನ್ನ ಭೇಟಿ ಮಾಡಿಸಿದೆ ಎಂಬುದು ತಪ್ಪು ಎಂದಿದ್ದಾರೆ.

ನಾನೂ ಕೂಡ ಸೋನಿಯಾ ಗಾಂಧಿ ಭೇಟಿಗೆ ಅವರ ಜೊತೆ ಹೋಗಿದ್ದೆ.ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್.ಅವರನ್ನ ಸಿಎಂ ಮಾಡುವ ಶಕ್ತಿ ನನಗೆ ಇಲ್ಲಾ ನನ್ನ ಅವರ ಆತ್ಮೀಯ ಸಂಬಂಧವನ್ನು ಹಾಳು ಮಾಡಲು ಕೆಲವರು ಉದ್ದೇಶಪೂರ್ವಕವಾಗಿ ಯತ್ನಿಸುತ್ತಿದ್ದಾರೆ ಎಂದು ಬಿ.ಆರ್ ಪಾಟೀಲ್ ಹೇಳಿದ್ದಾರೆ.
ನಾವು ಒಟ್ಟು ಒಂಬತ್ತು ಜನ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಬಂದೆವು.ಕಾಂಗ್ರೆಸ್ ಕೂಡ ಅವರ ಜನಬೆಂಬಲ ನೋಡಿ ಸಿಎಂ ಮಾಡಿತು ಎಂದು ಶಾಸಕ ಬಿ.ಆರ್ ಪಾಟೀಲ್ ತೇಪೆ ಹಚ್ಚಿದ್ದಾರೆ.













