ವಿಜಯೇಂದ್ರ ಅವರನ್ನು ರಾಜ್ಯಾದ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಯಡಿಯೂರಪ್ಪ ಅವರಲ್ಲ. ಹೈಕಮಾಂಡ್ ನಾಯಕರು ಆಯ್ಕೆ ಮಾಡಿದ್ದಾರೆ. ಆದರೂ ಯತ್ನಾಳ್ ಈತರ ಮಾತನಾಡುತ್ತಿದ್ದಾರೆ ಎಂದರೆ ಯತ್ನಾಳ್ ಅವರು ಯಾವ ಪಕ್ಷದಲ್ಲಿದ್ದಾರೆ ಅನ್ನೋ ಅನುಮಾನ ಮೂಡಿಸುತ್ತಿದೆ ಎಂದು ಮಾಜಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.
ರಾಜಸ್ಥಾನದಲ್ಲಿ ಮೊದಲ ಬಾರಿಗೆ ಗೆದ್ದ ಶಾಸಕನಿಗೆ ಸಿಎಂ ಸ್ಥಾನ ಕೊಟ್ಟಿದೆ. ಅಲ್ಲಿನ ಹಿರಿಯ ಘಟಾನುಘಟಿ ನಾಯಕರು ಅದನ್ನ ಒಪ್ಪಿಕೊಂಡು ಸುಮ್ನೆ ಇದ್ದಾರೆ. ಹೀಗಾಗಿ ಯತ್ನಾಳ್ ಅವರು ಕೂಡ ಪಕ್ಷದ ಹಿತ ದೃಷ್ಟಿಯಿಂದ ಸೈಲೆಂಟ್ ಆಗಿದ್ದರೆ ಒಳ್ಳೆಯದು. ಇಲ್ಲವಾದರೆ ಯತ್ನಾಳ್ ಅವರ ಬದ್ಧತೆ ಯಾರಿಗೆ ಅನ್ನೋದು ನಾವು ಪ್ರಶ್ನೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಸಮಸ್ಯೆ ಕೂಡ ಸರಿಯಾಗುತ್ತದೆ. ಎಲ್ಲ ಸರಿಯಾಗುತ್ತದೆ ಅನ್ನೋ ಆಶಾಭಾವನೆ ಇದೆ ಎಂದು ಹೇಳಿದ್ದಾರೆ.