ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಪಟ್ಟಂತೆ, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ (Basanagowda daddal) ಇಂದು ಇ.ಡಿ (E.D) ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ನಿನ್ನೆ ಇ.ಡಿ ಪ್ರೇಸ್ ರಿಲೀಸ್ನಲ್ಲಿ (Press release), ಈ ಹಗರಣದಲ್ಲಿ ಶಾಸಕ ದದ್ದಲ್ ಪಾತ್ರ ಇದೆ ಎಂದು ಹೇಳಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗಿರುವ ದದ್ದಲ್ರನ್ನ ಸುಧೀರ್ಘ ವಿಚಾರಣೆಗೆ ಒಳಪಡಿಸಿ ನಂತರ ಬಂಂಧಿಸಬಹುದಾದ ಸಾಧ್ಯತೆಗಳಿದೆ.
ಈಗಾಗಲೇ ಈ ಕೇಸ್ನಲ್ಲಿ 2 ಬಾರಿ ಇ.ಡಿ ದದ್ದಲ್ಗೆ ನೋಟಿಸ್ ನೀಡಿದ್ದು. ಇಂದು ಬೆಳಗ್ಗೆ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ನಂತರ ಇಂದೇ ಅವರನ್ನ ಬಂಧಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಮಾಜಿ ಸಚಿವ ಬಿ ನಾಗೇಂದ್ರ (B nagendra) ಅರೆಸ್ಟ್ ಆಗ್ ಇದ್ದ ಹಾಗೇ ಶಾಸಕ ದದ್ದಲ್ ನಾಪತ್ತೆಯಾಗಿದ್ರು.
ಅಧಿವೇಶನ (Session) ಆರಂಭಗೊಂಡ ನಂತರ ಪ್ರತ್ಯಕ್ಷಗೊಂಡ ದದ್ದಲ್, ಇದೀಗ ಇ.ಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಬಸನಗೌಡ ದದ್ದಲ್ರ ರಾಯಚೂರು ಮತ್ತು ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆಸಿದ್ದ ಇ.ಡಿ ಟೀಂ ಸಾಕಷ್ಟು ಮಾಹಿತಿ ಕಲೆಹಾಕಿ ದದ್ದಲ್ ಆಪ್ತರನ್ನೂ ವಶಕ್ಕೆ ಪಡೆದಿತ್ತು.