ಹಾಸನ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್ ಪಕ್ಷದಲ್ಲಿ ಪ್ರತಿ ಬಾರಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ ಈಗ ತಲೆ ಬಿಸಿಯಾಗಿದೆ ಎಂದು ಹೇಳಬಹುದು.
ಆದರೆ ಈಗ ಜೆಡಿಎಸ್ ಪಕ್ಷದ ಮುಖಂಡರು ಪಕ್ಷಾಂತರ ಪರ್ವ ಆರಂಭಿಸಿದ್ದು, ಈಗ ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ಅವರ ಸರದಿಯಾಗಿದೆ.
ಈ ಕುರಿತು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಎಚ್.ಡಿ.ದೇವೇಗೌಡರಂತಹ ಮುತ್ಸದ್ದಿ ರಾಜಕಾರಣಿಯನ್ನು ಮೂಲೆಗುಂಪು ಮಾಡಿದ್ದು ನನಗೆ ತುಂಬಾ ನೋವಾಗಿದೆ. ಅಂತಹ ಮಹಾನ್ ನಾಯಕನನ್ನೇ ಜಿಲ್ಲೆಯಿಂದ ಹೊರದಬ್ಬಿದವರು ನನ್ನನ್ನು ಬಿಡ್ತಾರಾ ಎಂದು ಜೆಡಿಎಸ್ ಪಕ್ಷದ ಬಗ್ಗೆ ಕಿಡಿಕಾರಿದ್ದಾರೆ.

ಇವರ ಸ್ವಾರ್ಥಕ್ಕಾಗಿ ನನ್ನನ್ನ ಬಲಿ ಕೊಡಕ್ಕೆ ಹೊರಟಿಲ್ಲ. ನಮ್ಮ ಜನರನ್ನ ಮತ್ತು ನಮ್ಮ ರೈತರನ್ನ ಬಲಿ ಕೊಡೋಕೆ ಹೊರಟಿದ್ದಾರೆ ನಾನು ಕೆಟ್ಟವನು ಅವರಿಗೆ ಟಿಕೆಟ್ ಕೊಡಬೇಡಿ ಎಂದು ಜನರಿಂದ ಹೇಳಿಸಿದ್ರು ಆದರೆ, ನಾನು ಅವರ ಹಾಗೆ ಮೈಕ್ ಹಾಕಿಕೊಂಡು ಮನೆ ಮುಂದೆ ಗಲಾಟೆ ಮಾಡಲು ಆಗುತ್ತಾದಾ ಎನ್ನುವ ಮೂಲಕ ಮಾಜಿ ಸಚಿವ ಎಚ್ ಡಿ ರೇವಣ್ಣ ಮತ್ತು ಅವರ ಪುತ್ರರ ವಿರುದ್ಧ ಎಟಿ ರಾಮಸ್ವಾಮಿ ಗುಡುಗಿದ್ದಾರೆ.
ಜೆಡಿಎಸ್ ಪಕ್ಷವನ್ನು ಬಿಟ್ಟು ಅನ್ಯ ಪಕ್ಷಗಳಿಗೆ ಹಲವು ಜೆಡಿಎಸ್ ನಾಯಕರು ಹೋಗುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಶಿವಲಿಂಗೇಗೌಡ ಬಳಿಕ ಅರಕಲಗೊಡು ಶಾಸಕ ಎ.ಟಿ. ರಾಮಸ್ವಾಮಿ ಪಕ್ಷ ತೊರೆಯಲು ರೆಡಿ ಇದ್ದಾರೆ ಎನ್ನುವ ಮಾತು ರಾಜಿಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.