ತಮಿಳುನಾಡು ಬಜೆಟ್ (Tamilnadu budget) ಪ್ರತಿಯಲ್ಲಿ ನಲ್ಲಿ ರೂಪಾಯಿ ಚಿಹ್ನೆ (Rupee symbol) ಬದಲಾವಣೆ ಮಾಡಿ ತಮಿಳಿನ ರೂಪಾಯಿ ಚಿಹ್ನೆ ಹಾಕಿರುವ ತಮ್ಮ ನಡೆಯನ್ನು ತಮಿಳುನಾಡು ಸಿಎಂ ಸ್ಟಾಲಿನ್ (MK Stalin) ಗಟ್ಟಿ ಧ್ವನಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಇನ್ನು ಇದೇ ವಿಚಾರವಾಗಿ ಡಿಎಂಕೆ (DMK) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್‌ಗೆ (Nirmala sitaraman) ತಿರುಗೇಟು ನೀಡಿದ್ದಾರೆ.ಈ ಬಗ್ಗೆ ಮಾತನಾಡಿರುವ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್, ಈ ಹಿಂದೆ ನಿರ್ಮಲಾ ಅವರು ರೂಪಾಯಿ ಚಿಹ್ನೆ ಬದಲು ತಮಿಳಿನ ‘ರೂ’ ಅಕ್ಷರವನ್ನು ಬಳಸಿದ್ದರು.ಈಗ ಯಾಕೆ ವಿರೋಧಿಸುತ್ತಿದ್ದಾರೆ ಎಂ.ಕೆ ಸ್ಟಾಲಿನ್ ಕಿಡಿಕಾರಿದ್ದಾರೆ.

ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯನ್ನು ವಿರೋಧಿಸಿ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು ಕೆಲವು ದಿನಗಳ ಹಿಂದೆ ಹಿಂದಿ ಹೇರಿಕೆಗೆ ಸೆಡ್ಡು ಹೊಡೆಯಲು ರಾಜ್ಯದ ಬಜೆಟ್ ಪ್ರತಿಯಲ್ಲಿ ಹಿಂದಿ ರುಆಯಿ ಚಿಹ್ನೆಯ ಬದಲು ತಮಿಳಿನ ರೂಪಾಯಿ ಚಿಹ್ನೆಯನ್ನು ಅಧಿಕೃತಗೊಳಿಸಿದ್ದರು. ಈ ಬಗ್ಗೆ ವ್ಯಾಪಕ ಚರ್ಚೆ ಗರಿಗೆದರಿದೆ.