ರಕ್ಷಿತ್ ಶೆಟ್ಟಿ(Rakshith Shetty) ನಿರ್ಮಾಣದ ಹಾಗೂ ಸುಮಂತ್ ಭಟ್ (Sumanth Bhat) ನಿರ್ದೇಶನದ ಈ ಚಿತ್ರದ ಟ್ರೇಲರ್ ಬಿಡುಗಡೆ. ಮಾರ್ಚ್ 7 ರಂದು ಸಿನಿಮಾ ತೆರೆಗೆ .

ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ರಕ್ಷಿತ್ ಶೆಟ್ಟಿ (Rakshith Shetty) ಪರಂವಃ ಸ್ಟುಡಿಯೋಸ್ (Param Studios) ಮೂಲಕ ಅನೇಕ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿದ್ದಾರೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ಮಿಥ್ಯ. ಪ್ರಸ್ತುತ ವಿಭಿನ್ನ ಕಥಾಹಂದರ ಹೊಂದಿರುವ “ಮಿಥ್ಯ” ಚಿತ್ರದ ಟ್ರೇಲರ್ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರ ಮಾರ್ಚ್ 7 ರಂದು ಬಿಡುಗಡೆಯಾಗುತ್ತಿದೆ.

“ಏಕಂ” ಎಂಬ ವೆಬ್ ಸಿರೀಸ್ ಸೇರಿದಂತೆ ಅನೇಕ ಕಿರುಚಿತ್ರಗಳನ್ನು ನಿರ್ದೇಶಿಸಿರುವ ಸುಮಂತ್ ಭಟ್ ಅವರಿಗೆ “ಮಿಥ್ಯ”, ಬೆಳ್ಳಿತೆರೆಯಲ್ಲಿ ಮೊದಲ ನಿರ್ದೇಶನದ ಚಿತ್ರ.
ತನ್ನ ಹನ್ನೊಂದನೇ ವಯಸ್ಸಿಗೆ ತಂದೆ ತಾಯಿಯನ್ನು ಕಳೆದುಕೊಂಡ ಹುಡುಗ ಮಿಥುನ್ ಮುಂಬೈನಿಂದ ಉಡುಪಿಗೆ ಬಂದು ತನ್ನ ಚಿಕ್ಕಪ್ಪ, ಚಿಕ್ಕಮ್ಮನ ಆಶ್ರಯ ಪಡೆಯುತ್ತಾನೆ. ಆನಂತರ ಹೊಸ ಪ್ರಪಂಚದ ಹುಡುಕಾಟ, ಹಳೆಯ ಸಂಬಂಧಗಳಲ್ಲಿ ಹೊಸತನವನ್ನು ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಗೆಳೆತನ ಹುಡುಕುವ ಪಯಣಕ್ಕೆ ಮುಂದಾಗುತ್ತಾನೆ. ಇದೇ ಚಿತ್ರದ ಪ್ರಮುಖ ಕಥಾಹಂದರವಾಗಿದರೂ ಇದು ಮಕ್ಕಳ ಚಿತ್ರವಲ್ಲ. ಮಕ್ಕಳು, ದೊಡ್ಡವರು ಎಲ್ಲರೂ ನೋಡುವಂತಹ ಚಿತ್ರ ಎನ್ನುವ ನಿರ್ದೇಶಕ ಸುಮಂತ್ ಭಟ್, ನಮ್ಮ ಚಿತ್ರ ಈಗಾಗಲೇ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿ ಜನರ ಮನ ಗೆದ್ದಿದೆ. ಚಿತ್ರ ಮಾರ್ಚ್ 7 ರಂದು ತೆರೆಗೆ ಬರಲಿದೆ ಎಂದು ತಿಳಿಸಿದ್ದಾರೆ.

ಕನ್ನಡದಲ್ಲಿ ಹೊಸ ರೀತಿಯ ಕಥೆಗಳು ಬರುತ್ತಿರಬೇಕು. ಹೊಸಪ್ರಯೋಗಗಳು ಆಗುತ್ತಿರಬೇಕು. ಅಂತಹ ಹೊಸಕಥೆಯೊಂದಿಗೆ ತೆರೆಗೆ ಬರುತ್ತಿರುವ ನಮ್ಮ “ಮಿಥ್ಯ” ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ಮಾಪಕ ರಕ್ಷಿತ್ ಶೆಟ್ಟಿ.
ಚಿತ್ರದಲ್ಲಿ ಮೂರು ಮುಖ್ಯಪಾತ್ರಗಳಿದೆ. ಮಾಸ್ಟರ್ ಅತೀಶ್ ಎಸ್ ಶೆಟ್ಟಿ ಮಿಥುನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್ ತುಮ್ಮಿನಾಡು, ರೂಪ ವರ್ಕಾಡ್ ಸಹ ಮುಖ್ಯಭೂಮಿಕೆಯಲ್ಲಿದ್ದಾರೆ.

ಉದಿತ್ ಕುರಾನ ಛಾಯಾಗ್ರಹಣ, ಭುವನೇಶ್ ಮಣಿವಣನ್ ಸಂಕಲನ ಹಾಗೂ ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ “ಮಿಥ್ಯ” ಚಿತ್ರಕ್ಕಿದೆ.









