ನವದೆಹಲಿ: ಮಧ್ಯಪ್ರದೇಶದ ನೇಪಾನಗರ, ಉತ್ತರ ಪ್ರದೇಶದ ಪ್ರೇಂಪುರ, ಗುಜರಾತ್‌ನ ಸೂರತ್ ಮತ್ತು ಪಂಜಾಬ್‌ನ ಬಟಿಂಡಾ-ದೆಹಲಿ ರೈಲು ಹಳಿಯಲ್ಲಿ ಭಾನುವಾರ ಮತ್ತು ಶನಿವಾರದಂದು ನಾಲ್ಕು ವಿವಿಧ ಸ್ಥಳಗಳಲ್ಲಿ ಅಪರಿಚಿತ ದುಷ್ಕರ್ಮಿಗಳು ರೈಲು ಹಳಿತಪ್ಪಿಸಲು ನಡೆಸಿದ ಪ್ರಯತ್ನವನ್ನು ಎಚ್ಚೆತ್ತ ರೈಲ್ವೆ ಸಿಬ್ಬಂದಿ ವಿಫಲಗೊಳಿಸಿದ್ದಾರೆ.
ಮಧ್ಯಪ್ರದೇಶದ ನೇಪಾನಗರದಲ್ಲಿ ದುಷ್ಕರ್ಮಿಗಳು ಡಿಟೋನೇಟರ್ Detonator)ಬಳಸಿ ವಿಶೇಷ ರೈಲನ್ನು Special train)ಹಳಿತಪ್ಪಿಸಲು ಯತ್ನಿಸಿದ್ದಾರೆ. ರೈಲು ಡಿಟೋನೇಟರ್‌ಗಳ ( train detonators)ಮೇಲೆ ಹಾದು ಹೋಗುತ್ತಿದ್ದಂತೆ, ಸ್ಫೋಟದ ಕಾರಣ ಚಾಲಕ ಎಚ್ಚರಗೊಂಡು ರೈಲನ್ನು ತಕ್ಷಣವೇ ನಿಲ್ಲಿಸಿದನು.ಅವರು ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿ, ಸಂಭಾವ್ಯ ಮಾರಣಾಂತಿಕ ಅಪಘಾತವನ್ನು ತಪ್ಪಿಸಿದರು. ಪಿತೂರಿಯಲ್ಲಿ 10 ಡಿಟೋನೇಟರ್‌ಗಳನ್ನು ಟ್ರ್ಯಾಕ್‌ಗಳಲ್ಲಿ ಇರಿಸಲಾಗಿತ್ತು. ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ATS ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), NIA ರೈಲ್ವೆ ಮತ್ತು ಸ್ಥಳೀಯ ಪೊಲೀಸರ ಉನ್ನತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಘಟನೆಯ ಕುರಿತು ಪ್ರತಿಕ್ರಿಯಿಸಿದ ರೈಲ್ವೆ ಮಂಡಳಿ ಅಧ್ಯಕ್ಷ ಸತೀಶ್ ಕುಮಾರ್, “ಇದು ವಿವಿಧ ತನಿಖೆಗಳ ವಿಷಯವಾಗಿದೆ, ಮತ್ತು ನಮ್ಮ ರೈಲ್ವೆ ಸಿಬ್ಬಂದಿ ಸಂಪೂರ್ಣ ಜಾಗರೂಕರಾಗಿದ್ದಾರೆ. ಘಟನೆ ಸಂಭವಿಸಿದಾಗ, ನಮ್ಮ ಭದ್ರತಾ ಸಂಸ್ಥೆ ತಕ್ಷಣ ತನಿಖೆ ಆರಂಭಿಸಿತು ಮತ್ತು ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಎರಡನೇ ಘಟನೆಯಲ್ಲಿ ಕಾನ್ಪುರ ಮತ್ತು ಪ್ರಯಾಗ್‌ರಾಜ್ ನಡುವಿನ ಪ್ರೇಮ್‌ಪುರ ರೈಲು ನಿಲ್ದಾಣದಲ್ಲಿ ರೈಲನ್ನು ಹಳಿತಪ್ಪಿಸಲು ದೊಡ್ಡ ಸಂಚು ರೂಪಿಸಲಾಗಿತ್ತು. ರೈಲ್ವೆ ಹಳಿ ಮೇಲೆ 5 ಕೆಜಿ ಗ್ಯಾಸ್ ಸಿಲಿಂಡರ್ ಇಡಲಾಗಿತ್ತು. ಇದನ್ನು ನೋಡಿದ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿ ಗೂಡ್ಸ್ ರೈಲನ್ನು ನಿಲ್ಲಿಸಿದರು. ಇಲ್ಲದಿದ್ದರೆ ದೊಡ್ಡ ಅಪಘಾತ ಸಂಭವಿಸಬಹುದಿತ್ತು. ಮಾಹಿತಿ ಪಡೆದು ಜಿಆರ್ ಪಿ, ಆರ್ ಪಿಎಫ್ ಸೇರಿದಂತೆ ಹಲವು ತಂಡಗಳು ಸ್ಥಳಕ್ಕೆ ಧಾವಿಸಿವೆ. ವಿಧಿವಿಜ್ಞಾನ ಮತ್ತು ಶ್ವಾನ ದಳದ ತಂಡಗಳೂ ತನಿಖೆ ನಡೆಸಿವೆ. ಕಳೆದ 38 ದಿನಗಳಲ್ಲಿ ಇದು ರೈಲು ಹಳಿ ತಪ್ಪಿಸಲು ಐದನೇ ಘಟನೆಯಾಗಿದೆ .
ಭಾನುವಾರ ಬೆಳಗ್ಗೆ 5:50ರ ಸುಮಾರಿಗೆ ಗೂಡ್ಸ್ ರೈಲು ಕಾನ್ಪುರದಿಂದ ಪ್ರಯಾಗರಾಜ್ ಕಡೆಗೆ ಹೋಗುತ್ತಿತ್ತು. ಕಾನ್ಪುರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಪ್ರೇಂಪುರ ನಿಲ್ದಾಣದಲ್ಲಿ ಗೂಡ್ಸ್ ರೈಲು ನಿಲ್ಲುವ ಹಂತದಲ್ಲಿತ್ತು. ಈ ವೇಳೆ ಲೊಕೊ ಪೈಲಟ್ ದೇವೇಂದ್ರ ಗುಪ್ತಾ ಅವರು ರೈಲು ಮಾರ್ಗದಲ್ಲಿ 5 ಕೆಜಿ ಗ್ಯಾಸ್ ಸಿಲಿಂಡರ್ ಬಿದ್ದಿರುವುದನ್ನು ಕಂಡಿದ್ದಾರೆ. ಈ ವೇಳೆ ತುರ್ತು ಬ್ರೇಕ್ ಹಾಕಿ ಗೂಡ್ಸ್ ರೈಲನ್ನು ನಿಲ್ಲಿಸಿದರು. ಬಳಿಕ ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಸ್ವಲ್ಪ ಸಮಯದ ನಂತರ, GRP ಮತ್ತು RPF ಸೇರಿದಂತೆ ಅನೇಕ ತಂಡಗಳು ಸ್ಥಳಕ್ಕೆ ತಲುಪಿದವು. ಸಿಲಿಂಡರ್ ಅನ್ನು ಪರೀಕ್ಷಿಸಿ ಹೊರತೆಗೆದರು. ಆದರೆ, ಸಿಲಿಂಡರ್ ಅನ್ನು ಪರಿಶೀಲಿಸಿದಾಗ ಅದು ಖಾಲಿಯಾಗಿರುವುದು ಕಂಡುಬಂದಿದೆ. ಹೀಗಿದ್ದರೂ ರೈಲು ಹಳಿ ತಪ್ಪಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ. ಈ ಹಿಂದೆಯೂ, ಸಬರಮತಿ ಎಕ್ಸ್‌ಪ್ರೆಸ್ ನಂತರ, ಕಾಳಿಂದಿ ಎಕ್ಸ್‌ಪ್ರೆಸ್ ಅನ್ನು ಸಹ ಹಳಿತಪ್ಪಿಸಲು ಪ್ರಯತ್ನಿಸಲಾಗಿದೆ. ಪಂಜಾಬ್‌ನಲ್ಲಿ, ದುಷ್ಕರ್ಮಿಗಳು ಭಾನುವಾರ ಬಟಿಂಡಾ-ದೆಹಲಿ ರೈಲ್ವೆ ಹಳಿಯಲ್ಲಿ ಸುಮಾರು ಹನ್ನೆರಡು ಕಬ್ಬಿಣದ ರಾಡ್‌ಗಳನ್ನು ಇರಿಸಿದ್ದಾರೆ. ಇದು ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಆದರೆ ಅಲ್ಲಿನ ರೈಲ್ವೇ ಚಾಲಕನ ಜಾಗರೂಕತೆಯಿಂದ ಭಾರೀ ಅನಾಹುತ ತಪ್ಪಿದೆ. ಇದರ ಬೆನ್ನಲ್ಲೇ ಬಟಿಂಡಾಗೆ ಬರುತ್ತಿದ್ದ ಗೂಡ್ಸ್ ರೈಲು ದೆಹಲಿ ರೈಲು ಹಳಿಯಲ್ಲಿ ಸುಮಾರು 45 ನಿಮಿಷಗಳ ಕಾಲ ನಿಲುಗಡೆ ಮಾಡಬೇಕಾಯಿತು.
ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಟ್ರ್ಯಾಕ್‌ನಲ್ಲಿದ್ದ ಅವಶೇಷಗಳನ್ನು ತೆಗೆದು ಸಂಪೂರ್ಣ ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಶಿರೋಮಣಿ ಅಕಾಲಿದಳದ ಸ್ಥಳೀಯ ವಾರ್ಡ್ ಉಸ್ತುವಾರಿ ಗೌತಮ್ ಮಸಿಹ್ ಮಾತನಾಡಿ, ಟ್ರ್ಯಾಕ್ ಮೇಲೆ ಕಬ್ಬಿಣದ ಸರಳುಗಳಿರುವ ಬಗ್ಗೆ ಬೆಳಗ್ಗೆ 7 ಗಂಟೆಗೆ ಮಾಹಿತಿ ಲಭಿಸಿದೆ ಎಂದರು.ಗುಜರಾತ್‌ನ ಸೂರತ್‌ನಲ್ಲಿ, ರೈಲ್ವೇ ಗಸ್ತು ಸಿಬ್ಬಂದಿಯ ಜಾಗರೂಕತೆಯು ಕಿಮ್-ಕೊಸಾಂಬಾ ನಡುವಿನ ಕಿಮ್ ಸೇತುವೆಯ ರೈಲ್ವೆ ಹಳಿಯ ಸೇಫ್ಟಿ ಪಿನ್ ಇಆರ್‌ಸಿ (ಎಲಾಸ್ಟಿಕ್ ರೈಲ್ ಕ್ಲಿಪ್) ಮತ್ತು ಫಿಶ್ ಪ್ಲೇಟ್ ಅನ್ನು ತೆಗೆದುಹಾಕುವ ಮೂಲಕ ರೈಲನ್ನು ಉರುಳಿಸುವ ಪಿತೂರಿಯನ್ನು ವಿಫಲಗೊಳಿಸುವಲ್ಲಿ ಸಹಾಯ ಮಾಡಿತು. ಶನಿವಾರ ಈ ಘಟನೆ ನಡೆದಿದ್ದು, ಗಸ್ತಿನಲ್ಲಿದ್ದ ಸುಭಾಷ್ ಪೋದಾರ್ ಎಚ್ಚರದಿಂದ ಭಾರಿ ಅನಾಹುತ ತಪ್ಪಿದೆ. ಘಟನೆಯ ಬಗ್ಗೆ ಕಿಮ್ ಸ್ಟೇಷನ್‌ನ ರೈಲ್ವೇ ಮಾಸ್ಟರ್‌ಗೆ ತಿಳಿದ ತಕ್ಷಣ ಅವರು ಕೊಸಾಂಬಾ ರೈಲು ನಿಲ್ದಾಣದಲ್ಲಿ ಗರೀಬ್ ರಥ ರೈಲನ್ನು ನಿಲ್ಲಿಸಿದರು.