ಸದನದಲ್ಲಿ ಅಗೌರವ ಹಾಗೂ ಅಶಿಸ್ತಿನಿಂದ ವರ್ತಿಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ 10 ಮಂದಿ ಶಾಸಕರನ್ನ ಅಮಾನತು ಮಾಡಿ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಆದೇಶವನ್ನು ಹೊರಡಿಸಿದ್ದಾರೆ
ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರ ಮೇಲೆ ಕೆಲ ವಿಧೆಯಕಗಳ ನಕಲುಗಳನ್ನ ಹರಿದು ಬಿಜೆಪಿ ಶಾಸಕರು ಉಪಸಭಾಪತಿಯ ಮೇಲೆ ಎಸೆದಿದ್ದಾರೆ, ಹೀಗಾಗಿ ಸದನದಲ್ಲಿ ಅಗೌರವದಿಂದ ನಡೆದುಕೊಂಡ ಹತ್ತು ಮಂದಿ ಶಾಸಕರನ್ನ ಇದೀಗ ಅಮಾನತು ಮಾಡಲಾಗಿದೆ.
ಬಿಜೆಪಿ ಶಾಸಕರಾದ ಆರ್.ಅಶೋಕ್, ಡಾಕ್ಟರ್ ಅಶ್ವಥ್ ನಾರಾಯಣ್, ವಿ.ಸುನಿಲ್ ಕುಮಾರ್, ಅರವಿಂದ್ ಬೆಲ್ಲದ್, ವೇದವ್ಯಾಸ್ ಕಾಮತ್, ಯಶಪಾಲ ಸುವರ್ಣ, ಧೀರಜ್ ಮುನಿರಾಜ್, ಅರಗ ಜ್ಞಾನೇಂದ್ರ, ಭಾರತ್ ವೈ ಶೆಟ್ಟಿ, ಉಮಾನಾಥ್ ಕೋಟ್ಯಾನ್, ಅವರನ್ನು ಅಮಾನತುಗೊಳಿಸಿ ಸ್ಪೀಕರ್ ಯುಟಿ ಖಾದರ್ ಆದೇಶ ಹೊರಡಿಸಿದ್ದಾರೆ
ಕರ್ನಾಟಕ ವಿಧಾನಸಭೆ ಕಾರ್ಯ ವಿಧಾನ ಹಾಗೂ ನಡಾವಳಿ ನಿಯಮ 348ರ ಮೇರೆಗೆ ಇದೀಗ ಅಮಾನತು ಮಾಡಲಾಗಿದ್ದು, ಈ ಪ್ರಸ್ತಾವಕ್ಕೆ ಸ್ಪೀಕರ್ ಖಾದರ್ ಅಂಗೀಕಾರ ನೀಡಿದ್ದಾರೆ ಹಾಗೂ ಸದಸ್ಯರನ್ನ ಸದನದಿಂದ ತಕ್ಷಣಕ್ಕೆ ಹೊರಹೋಗುವಂತೆ ಸೂಚನೆಯನ್ನು ನೀಡಿ ಸದನವನ್ನು ಮುಂದೂಡಿದರು
ಇನ್ನು ಈ ವಿಚಾರವಾಗಿ ಮಾತನಾಡಿದ ಸ್ಪೀಕರ್ ಯುಟಿ ಖಾದರ್ ರಾಜಕೀಯದ ಅಸ್ತಿತ್ವಕ್ಕಾಗಿ ಈ ರೀತಿಯಾಗಿ ವರ್ತನೆ ಮಾಡುವಂಥದ್ದು ಸರಿಯಾದ ನಡವಳಿಕೆ ಅಲ್ಲ, ಸ್ಪೀಕರ್ ಪೀಠದ ಗೌರವವನ್ನು ಉಳಿಸುವ ಕೆಲಸವನ್ನು ಮಾಡಬೇಕು, ಸದಸ್ಯರ ಮಾತುಗಳನ್ನ ಕೇಳಲು ನಾವು ಸಿದ್ದ, ಆದರೆ ಪೀಠಕ್ಕೆ ಆಗೌರವ ತೋರಿಸುವ ಮೂಲಕ ಕಪ್ಪು ಚುಕ್ಕೆಯನ್ನು ತರಬಾರದು, ಮತದಾರರಿಗೆ ಹೆಮ್ಮೆ ತರುವಂತ ಕೆಲಸವನ್ನ ಮಾಡಬೇಕು ರಾಜ್ಯದ ಜನರು ನಿಮ್ಮನ್ನ ಸಹಿಸುವುದಿಲ್ಲ ಎಂಬಂತ ಹೇಳಿಕೆಯನ್ನು ಸ್ಪೀಕರ್ ನೀಡಿದ್ದಾರೆ