ಸಚಿವ ಕೆ.ಎನ್ ರಾಜಣ್ಣ (KN Rajanna) ಹಾಗೂ ಇತರರ ಮೇಲಿನ ಮೇಲಿನ ಹನಿಟ್ರ್ಯಾಪ್ (Honey trap) ಪ್ರಕರಣದ ತನಿಖೆಯನ್ನು CBIಗೆ ಒಪ್ಪಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (Vijayendra) ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ ಆಗ್ರಹಿಸಿದ್ದಾರೆ.

ಈ ಹನಿ ಟ್ರ್ಯಾಪ್ ಪ್ರಕರಣವನ್ನು ಭೇದಿಸಲು SITಯಿಂದ ಸಾಧ್ಯವಿಲ್ಲ ಎಂದು ಬಿವೈವಿ ಹೇಳಿದ್ದಾರೆ. ಪ್ರಸ್ತುತ ಹನಿಟ್ರ್ಯಾಪ್ ನಲ್ಲಿ ರಾಜಕಾರಿಣಿಗಳನ್ನು ಸಿಲುಕಿಸುವ ಯತ್ನಗಳು ಹೆಚ್ಚಾಗಿದ್ದು ದೊಡ್ಡ ಸಂಚಲನ ಮೂಡಿಸಿದೆ. ಹೀಗಾಗಿ ಈ ಬಗ್ಗೆ ಸ್ವತಃ ಸದನದಲ್ಲಿ ಕೆ.ಎನ್ ರಾಜಣ್ಣ ವಿಚಾರ ಪ್ರಸ್ತಾಪ ಮಾಡಿದ್ದು CBI ಗೆ ನೀಡಿ ಎಂದಿದ್ದಾರೆ.

ಈ ಬಗ್ಗೆ ಖುದ್ದು ಸಚಿವರು ಗರಂ ಆಗಿದ್ದು ಅಧಿವೇಶನ ಮುಗಿಯುತ್ತಿದ್ದಂತೆ ಖುದ್ದು ಸಚಿವರು ಈ ಬಗ್ಗೆ ಬಹಿರಂಗವಾಗಿಯೇ ಮಾಧ್ಯಮಗಳ ಮುಂದೆ ಈ ಹನಿಟ್ರ್ಯಾಪ್ ವಿಚಾರದ ಬಗ್ಗೆ ಮಾತನಾಡಲಿದ್ದಾರೆ ಎನ್ನಲಾಗಿದ್ದು ರಾಜಕೀಯ ಬೆಳವಣಿಗೆ ಕುತೂಹಲ ಕಾಯ್ದುಕೊಂಡಿದೆ.