
ಬೆಂಗಳೂರು: ಪಂಚೆ ಧರಿಸಿದ್ದಾರೆ ಎಂಬ ಕಾರಣದಿಂದ ಮಾಲ್ ಒಳಗೆ ಬಿಡದೆ ಕಾಯಿಸಿ ಹಾವೇರಿಯ ರೈತರನ್ನು (Haveri Farmer) ಅವಮಾನ ಮಾಡಿದ ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ನ (GT World Mall) ಸಿಬ್ಬಂದಿಯ ವರ್ತನೆಗೆ ರಾಜ್ಯದ ಸಚಿವರುಗಳು (State ministers) ಗರಂ ಆಗಿದ್ದಾರೆ.ಈ ಬಗ್ಗೆ ಪೊಲೀಸ್ ನೋಟೀಸ್ ನೀಡುವ ಸೂಚನೆ ನೀಡಿದ್ದಾರೆ.ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಈ ಕುರಿತು ಗರಂ ಆಗಿದ್ದು, ʼಪಂಚೆ ಧರಿಸಿಕೊಂಡೇ ಏಳು ವರ್ಷಗಳ ಕಾಲ ಸಿಎಂ ಆಗಿ ಸಿದ್ದರಾಮಯ್ಯ ರಾಜ್ಯದ ಆಡಳಿತ ಮಾಡುತ್ತಿದ್ದಾರೆ. ಇದರಿಂದ ಅವರು ಪಾಠ ಕಲಿಯಬೇಕುʼ ಎಂದು ಟೀಕಿಸಿದ್ದಾರೆ. ʼಆ ಮಾಲ್ ನಡೆಸುತ್ತಿರುವವರಿಗೆ ಬುದ್ಧಿ ಕಡಿಮೆ ಇರಬೇಕು. ನಮ್ಮ ಇಲಾಖೆ ಇಲ್ಲವೇ ಪೊಲೀಸ್ ಇಲಾಖೆಯಿಂದ ಈ ಬಗ್ಗೆ ಪತ್ರ ಬರೆಯುತ್ತೇವೆʼ ಎಂದು ಅವರು ಹೇಳಿದ್ದಾರೆ.