ನೇರ ನುಡಿ, ಮೊನಚಾದ ಮಾತುಗಳಿಂದ ಗಮನ ಸೆಳೆಯುವ, ವಿದ್ಯಾವಂತ ರಾಜಕಾರಣಿ, ಪ್ರಸ್ತುತ ರಾಜ್ಯ ಸಚಿವ ಸಂಪುಟದ ಕ್ರಿಯಾಶೀಲ ಸಚಿವ ಶ್ರೀ ಸಂತೋಷ್ ಲಾಡ್ ಅವರು ಸಾಮಾಜಿಕ ಕಾಳಜಿ, ಹೃದಯವಂತಿಕೆ, ಬದ್ಧತೆಗೆ ಮತ್ತೊಂದು ಹೆಸರು ಎಂಬಂತಿರುವ ಜನಪ್ರತಿನಿಧಿ. ಇಂದು ಸಚಿವ ಸಂತೋಷ್ ಲಾಡ್ ಅವರಿಗೆ ಜನ್ಮದಿನದ ಸಂಭ್ರಮ. 

ಹೌದು ಸಚಿವ ಸಂತೋಷ್ ಲಾಡ್ ತಮ್ಮ 50 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಜನರಿಗಾಗಿ ತಾನು ಇರಬೇಕು, ಅವರಿಗಾಗಿ ಏನಾದರೂ ಮಾಡಬೇಕು ಎಂಬ ಬದ್ಧತೆಯಿಂದ, ಕಾಳಜಿಯಿಂದ, ಪ್ರೀತಿಯಿಂದ, ಸಂತೋಷದಿಂದ ಸಚಿವ ಸಂತೋಷ್ ಲಾಡ್ ಕೆಲಸ ಮಾಡುತ್ತಿದ್ದಾರೆ.
ರಾಜಕೀಯ ಜೀವನದಲ್ಲಿ ಶಾಸಕರಾಗಿ, ಸಚಿವರಾಗಿ, ಅಣ್ಣನಾಗಿ, ಸಹೋದರನಾಗಿ, ಬಂಧುವಾಗಿ, ಅಭಿಮಾನಿಯಾಗಿ ಸದಾ ಕಾಲ ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಂಡವರು. ಪಕ್ಷ ಸಂಘಟನೆ, ಜನ ಸೇವೆ ಯಾವುದಕ್ಕೂ ಹಿಂದೆಮುಂದೆ ನೋಡಿದವರಲ್ಲ.  

ಇಂದು ಸಂತೋಷ್ ಲಾಡ್ ಅವರ ಕ್ಷೇತ್ರ ಕಲಘಟಗಿಯಲ್ಲಿ ಅವರ ಹುಟ್ಟ ಹಬ್ಬದ ಸಂಭ್ರಮ ಜೋರಾಗಿದ್ದು, ಅಭಿಮಾನಿಗಳು, ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನಿಗೆ ಜನ್ಮದಿನದ ಶುಭ ಕೋರಿದ್ದಾರೆ.
 
			
 
                                 
                                 
                                