ಬೆಂಗಳೂರು: ಕಾರು (Car) ಅಪಘಾತದ (Accident) ಬಳಿಕ ಡ್ರೈವರ್ ಭಯದಿಂದ ವೇಗವಾಗಿ ಕಾರು ಚಲಾಯಿಸುವುದಿಲ್ಲ. ಬೇಗ ಹೋಗಪ್ಪ ಅಂದ್ರೂ 30 ಕಿ.ಮೀ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಕಾರು ಚಲಾಯಿಸುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿಕೊಂಡಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ (Womens Day 2025) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ, ತಮ್ಮ ಕಾರಿನ ಅಪಘಾತದ ಬಗ್ಗೆ ನೆನಪಿಸಿಕೊಂಡು ಮಾತನಾಡಿದರು. ರಸ್ತೆ ಅಪಘಾತವಾದ ಮೇಲೆ ಇದು ನನ್ನ ಮೊದಲ ಕಾರ್ಯಕ್ರಮ. ಅಪಘಾತದ ಬಳಿಕ ನನ್ನ ಕಾರು ಚಾಲಕ 30ರ ಮೇಲೆ ಚಲಾಯಿಸುವುದಿಲ್ಲ ಎಂದಿದ್ದಾರೆ.

ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಅಪಘಾತವಾಗಿತ್ತು. ನಾಯಿ ಅಡ್ಡ ಬಂದಿದ್ದನ್ನ ತಪ್ಪಿಸಲು ಹೋಗಿ ರಸ್ತೆ ಪಕ್ಕದ ಮರಕ್ಕೆ ಕಾರು ಡಿಕ್ಕಿ ಹೊಡೆದಿತ್ತು. ಈ ವೇಳೆ ಅವರ ಬೆನ್ನುಮೂಳೆಗೆ ಬಲವಾದ ಪೆಟ್ಟು ಬಿದ್ದಿತ್ತು. ಚಿಕಿತ್ಸೆಯ ಬಳಿಕ ಅವರ ಆರೋಗ್ಯ ಸುಧಾರಿಸಿದ್ದು, ವಿಶ್ರಾಂತಿಯ ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.