ಕೆಂಪೇಗೌಡ ಜಯಂತಿ (Kempegowda jayanti) ಆಚರಣೆಯ ವೇಳೆ ಸರ್ಕಾರಿ ಕಾರ್ಯಕ್ರದ ವೇದಿಕೆಯಲ್ಲಿ ಚಂದ್ರಶೇಖರನಾಥ ಸ್ವಾಮೀಜಿ (Chandrashekaranatha swamiji) ಆಡಿದ ಮಾತುಗಳು ಕಾಂಗ್ರೆಸ್ (Congress) ಪಾಳಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಲ್ಲೇ ಇದೀಗ ಬಣಗಳಾಗಿದ್ದು, ಸಚಿವರು ಶಾಸಕರ ಪರ ವಿರೋಧದ ಚರ್ಚೆ ಹೆಚ್ಚಾಗಿದೆ.
ಸಿಎಂ ಸಿದ್ದರಾಮಯ್ಯ (cm siddaramaiah) ತಮ್ಮ ಸ್ಥಾನವನ್ನು ಡಿಕೆಶಿ ಗೆ ಬಿಟ್ಟುಕೊಡಬೇಕು ಎಂದು ಹೇಳಿದ ಸ್ವಾಮೀಜಿಯ ಮಾತಿಗೆ ಕೌಂಟರ್ ಕೊಟ್ಟಿದ್ದ ಸಚಿವ ಕೆ ಎನ್ ರಾಜಣ್ಣ (KN rajanna), ನಾನೇ ಕಾವಿ ಧರಿಸಿ ಬರುತ್ತೇನೆ, ಸ್ವಾಮಿಜಿಗಳು ತಮ್ಮ ಪೀಠ ಬಿಟ್ಟುಕೊಡ್ತಾರಾ ಎಂದು ಟಾಂಗ್ ಕೊಟ್ಟಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾಮಿಜಿ ಸಚಿವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿ ಸವಾಲು ಹಾಕಿದ್ದಾರೆ. ಸಚಿವ ರಾಜಣ್ಣ ಹೆಂಡತಿ ಮಕ್ಕಳು ಎಲ್ಲವನ್ನೂ ಬಿಟ್ಟು ಬರಲಿ, ತಾವು ತಮ್ಮ ಸ್ಥಾನ ನೀಡಲು ಸಿದ್ಧ ಎಂದು ಸಚಿವರಿಗೆ ಸವಾಲು ಹಾಕಿದ್ದಾರೆ. ಆ ಮೂಲಕ ಸಿಎಂ ಬದಲಾವಣೆ ಚರ್ಚೆ ತೀರ್ವ ಸ್ವರೂಪ ಪಡೆದುಕೊಂಡಿದೆ.