ಉದ್ಯಮಿ ಮೋಹನ್ ದಾಸ್ ಪೈ (Mohan Das pai) ವಿರುದ್ಧ ಸಚಿವ ಎಂ.ಬಿ ಪಾಟೀಲ್ (MB Ptail) ಗರಂ ಆಗಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್, ಇನ್ಫೋಸಿಸ್ (Infosys) ಕರ್ನಾಟಕದಲ್ಲಿ ಮಾತ್ರ ಇಲ್ಲ, ಬೇರೆ ರಾಜ್ಯದಲ್ಲಿ, ದೇಶದಲ್ಲಿ ಇದೆ. ಇವರು ಬೆಳದದ್ದು ನಮ್ಮ ರಾಜ್ಯದಲ್ಲಿ. ನಮಗ ಸಲಹೆ ನೀಡಲಿ, ಆದ್ರೆ ಎಲ್ಲವನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಾಕ್ತಾರೆ ಅಂತ ಕಿಡಿಕಾರಿದ್ದಾರೆ.

ನಮ್ಮ ಹುಬ್ಬಳ್ಳಿಗೆ ಇನ್ಪೋಸಿಸ್ ಹೋಗಲ್ಲ. ಬೇರೆ ಬೇರೆ ರಾಜ್ಯದವರು ಇಲ್ಲಿಗೆ ಬರ್ತಾರೆ, ಕಾರ್ ತಗೊತಾರೆ.ಬೆಂಗಳೂರು ಗ್ರೋಯಿಂಗ್ ಸಿಟಿ, ಹೀಗಿಯುವಾಗ ನಾಲ್ಕು ಗೋಡೆಗಳ ಮಧ್ಯ ಸಲಹೆ ನೀಡಿ. ಆಗ ಅದಕ್ಕೆ ಬೆಲೆಯಿದೆ. ಆದ್ರೆ ಕನ್ನಡಿಗರು ಈ ಆಟಿಡ್ಯೂಡ್ ಬಯಸಲ್ಲ. ಇದರಿಂದ ನೀವು ದೊಡ್ಡವರಾಗಲ್ಲ ಎಂದಿದ್ದಾರೆ.

ಮೊಹಂದ್ ದಾಸ್ ಪೈ ಅವರೇ ನೀವು ಬುದ್ದಿವಂತರು ಇದೀರಿ, ಸಲಹೆ ನೀಡಿ. ಆದ್ರೆ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡ್ತಿರಿ. ಆದ್ರೆ ಅದನ್ನೇ ಪ್ರಧಾನಿಗಳು ಕಾಪಿ ಮಾಡಿದ್ರೆ ಆಗ ಟೀಕೆ ಮಾಡಲ್ಲ.ಈ ರೀತಿ ಟ್ವೀಟ್ ಗಳಿಂದ ನೀವು ದೊಡ್ಡವರಾಗಲ್ಲ. ಪುಣೆ ಸೇರಿದಂತೆ ಬೇರೆ ಬೇರೆ ರಾಜ್ಯ, ದೇಶದಲ್ಲಿ ಇನ್ಫೋಸಿಸ್ ಏಕಿದೆ?ನಿಮಗೆ ಅನ್ವಯವಾಗಲ್ವ? ನಿಮ್ಮ ವರ್ತನೆಯನ್ನ ಕನ್ನಡಿಗರು ಲೈಕ್ ಮಾಡಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ಹರಿಹಾಯ್ದಿದ್ದಾರೆ.