ಹಾಸನ: ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರಿಗೆ ಆಹ್ವಾನ ನೀಡದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ(BJP Karnataka) ನಾಯಕರಿಗೆ ಸಚಿವ ಕೆ.ಎನ್. ರಾಜಣ್ಣ(KN Rajanna) ತಿರುಗೇಟು ನೀಡಿದ್ದಾರೆ. ಹಾಸನದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿಯವರದ್ದೇ ಒಂದು ಅಜೆಂಡಾ ಇರುತ್ತದೆ. ಯಾರಿಗೆ ಕರಿಯಬೇಕು, ಯಾರನ್ನ ಕರಿಯಬಾರದು ಎಲ್ಲಾ ಇರುತ್ತೆ. ಹೀಗಾಗಿ ಈ ವಿಚಾರವಾಗಿ ಬಿಜೆಪಿ ಅಜೆಂಡಾನಾ ನಾವ್ಯೇಕೆ ಪ್ರಶ್ನೆ ಮಾಡಲು ಹೋಗಬೇಕು?. ಅಲ್ಲಿನ ರಾಮಮಂದಿರಕ್ಕೆ ಹೋಗಿ ರಾಮನ ದರ್ಶನ ಮಾಡಿ, ರಾಮನ ಪೂಜೆ ಮಾಡಿದರೆ ಮಾತ್ರ ಆಶೀರ್ವಾದನಾ? ನಮ್ಮೂನಲ್ಲಿರುವ ರಾಮನನ್ನು ಪೂಜೆ ಮಾಡಿದ್ರೆ ನಮಗೆ ರಾಮ ಆಶೀರ್ವಾದ ಮಾಡೋದಿಲ್ಲವೇ? ಎಂದು ಪ್ರಶ್ನಿಸಿರುವ ಅವರು, ಅಲ್ಲೇ ಹೋಗಿ ಪೂಜೆ ಮಾಡಬೇಕಾ ಎಂದು ವ್ಯಂಗ್ಯವಾಡಿದ್ದಾರೆ. ದೇವರು ಸರ್ವಾಂತರಯಾಮಿ, ಎಲ್ಲಾ ಕಡೆ ಇದ್ದಾನೆ. ನಮ್ಮಲ್ಲೂ ಇದ್ದಾನೆ, ನಿಮ್ಮಲ್ಲೂ ಇದ್ದಾನೆ, ಎಲ್ಲಾ ಜಾಗದಲ್ಲೂ ಇದ್ದಾನೆ. ಹೀಗಾಗಿ ನಾವು ನಮ್ಮ ತೃಪ್ತಿಗೆ, ಮನಸ್ಸಿನ ನೆಮ್ಮದಿಗೆ ದೇವಸ್ಥಾನಕ್ಕೆ ಹೋಗೋದು. ಅಲ್ಲಿ ಶ್ರೀರಾಮದ ದರ್ಶನಕ್ಕೆ, ಪೂಜೆಗೆ ಹೋಗಿಬಿಟ್ಟರೆ ಆಶೀರ್ವಾದ ಆಗಿ ಬಿಡುತ್ತಾ? ಎಂದು ಪ್ರಶ್ನಿಸಿದ ಅವರು, ಇಲ್ಲಿರುವ ಶ್ರೀರಾಮನ ದೇವಸ್ಥಾನಕ್ಕೆ ಹೋದರೆ ಶ್ರೀರಾಮ ಆಶೀರ್ವಾದ ಆಗೋದಿಲ್ಲವೇ? ಅವರವರ ನಂಬಿಕೆಗೆ ಅನುಗುಣವಾಗಿ ಅವರವರು ನಡೆದುಕೊಳ್ಳುತ್ತಾರೆ. ಅದರಲ್ಲಿ ಸರಿ ತಪ್ಪು ಅಂತ ವ್ಯಾಖ್ಯಾನ ಮಾಡಲು ಹೋಗಲ್ಲ. ಅವರದ್ದು ಸಣ್ಣತನ ಅಂತ ಹೇಳೋಣ, ದೊಡ್ಡತನ ಅಂತ ಹೇಳೋಣ, ನೀವೇ ಹೇಳಿ ಎಂದಿದ್ದಾರೆ.
ಕನಕನ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್
ಕನಕದಾಸರು ಕುಲದ ಅವಮಾನವನ್ನು ಅನುಭವಿಸಿ ಬಳಿಕ ಅಳಿಸಿದರು: ಕೆ.ವಿ.ಪಿ ಕನಕದಾಸರನ್ನು ಭಕ್ತಿಗೆ ಕಟ್ಟಿಹಾಕದೆ-ಅವರ ಬಂಡಾಯವನ್ನೂ ನಾವು ಅರಿಯಬೇಕಿದೆ: ಕೆ.ವಿ.ಪಿ ಪ್ರತಿಭಾ ಪುರಸ್ಕಾರ ಅಂದರೆ ಆತ್ಮವಿಶ್ವಾಸದ ರಕ್ತದಾನವಿದ್ದಂತೆ: ಕೆ.ವಿ.ಪ್ರಭಾಕರ್...
Read moreDetails