ಭಗವಾನ್ ಶ್ರೀರಾಮನನ್ನು (SriRam) ಟೆಂಟ್ ಹೌಸ್‌ನಲ್ಲಿದ್ದ ಗೊಂಬೆ ಎಂದಿದ್ದ ಸಚಿವ ಕೆಎನ್ ರಾಜಣ್ಣ (KN Rajanna) ಮತ್ತು ಅವರ ಕುಟುಂಬ ಇಂದು ರಾಮಜಪದಲ್ಲಿ ತೊಡಗಿಕೊಳ್ಳುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ.
ಭಗವಾನ್ ಶ್ರೀರಾಮನನ್ನು ಅವಮಾನಿಸಿಯೂ ಸಚಿವ ರಾಜಣ್ಣ ಮತ್ತವರ ಕುಟುಂಬ ಅಪ್ಪಟ ರಾಮಭಕ್ತರೆನಿಸಿಕೊಂಡಿದ್ದಾರೆ. ಅಯೋಧ್ಯೆಯ ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕೆಎನ್ ರಾಜಣ್ಣ ಕುಟುಂಬ ಹೋಮ-ಹವನದಲ್ಲಿ ಪಾಲ್ಗೊಂಡಿದ್ದಾರೆ. ಮಧುಗಿರಿ ತಾಲೂಕಿನ ಕಿತ್ತಾಗಳಿಯ ಶ್ರೀರಾಮ ದೇವಸ್ಥಾನದಲ್ಲಿ ಹೋಮ ಮಾಡಲಾಗಿದೆ. ನವಗ್ರಹ, ಗಣಪತಿ ಹಾಗೂ ಶ್ರೀರಾಮ ಹೋಮ ಕೈಗೊಂಡಿದ್ದು, ಕೆಎನ್ ರಾಜಣ್ಣ, ಅವರ ಪತ್ನಿ ಶಾಂತಲ ಹಾಗೂ ಕುಟುಂಬದ ಸದಸ್ಯರು ಹೋಮದಲ್ಲಿ ಭಾಗಿಯಾಗಿದ್ದಾರೆ
ಪತ್ನಿ ಶಾಂತಲಾರ ಮನೆ ದೇವರು ಶ್ರೀರಾಮ ಹಾಗಾಗಿ ಇಂದು ವಿಶೇಷ ಪೂಜೆ ಮಾಡಿದ್ದಿವಿ ಎಂದು ಕೆ ಎನ್ ರಾಜಣ್ಣ ಹೇಳಿದರು. ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದು ಕೆಲವರು ಹೇಳಬಹುದು. ಆದರೆ ನಾನು ಶ್ರೀರಾಮನಲ್ಲಿ ದೈವತ್ವವನ್ನೂ, ಪೂಜಾರ್ಹ ವ್ಯಕ್ತಿ ಎಂದು ನಂಬಿದ್ದೇನೆ. ಹಾಗಾಗಿ ಪೂಜೆ ಮಾಡುತ್ತೇನೆ ಎಂದರು
ನೂರಾರು ಕೋಟಿ ವೆಚ್ಚ ಮಾಡಿ ದೇವಸ್ಥಾನ ಕಟ್ಟೋ ಬದಲು ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸಬೇಕೆಂಬ ವಾದಕ್ಕೆ ಪ್ರತಿಕ್ರಿಯಿಯಿಸಿದ ಅವರು, ದೇವಸ್ಥಾನವನ್ನು ಕಟ್ಟೋದು ತಪ್ಪಲ್ಲ. ದೇವಸ್ಥಾನದ ಅವಶ್ಯಕತೆ ಇದೆ. ಅಲ್ಲದೇ ನನ್ನ ಹೇಳಿಕೆಯ ಡ್ಯಾಮೆಜ್ ಕಂಟ್ರೋಲ್ ಗೆ ಇಂದು ರಾಮನ ಪೂಜೆ ಮಾಡಿಲ್ಲ. ನಾನೂ ಅಪ್ಪಟ ರಾಮಭಕ್ತ ಎಂದು ಹೇಳಿದರು