
ಚಿಕ್ಕಮಗಳೂರು ಕೆ.ಯು.ಐ.ಡಿ.ಎಫ್.ಸಿ. ಹಾಗೂ ನಗರಸಭೆ ವತಿಯಿಂದ ಯಗಚಿ ಹಳ್ಳದಲ್ಲಿ ಅಳವಡಿಸಿರುವ ಮುಖ್ಯ ಒಳಚರಂಡಿ ಮಾರ್ಗವನ್ನು ಹಳ್ಳದ ಮೇಲ್ಬಾಗಕ್ಕೆ 14.15 ಕೋಟಿ ರೂ. ವೆಚ್ಚದಲ್ಲಿ ಒಟ್ಟು 6.50 ಕಿ.ಮೀ. ಉದ್ದದ ಪೈಪ್ಲೈನ್ ಮೂಲಕ ಹರಿಸುವ ಕಾಮಗಾರಿಗೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯನ್ನೂ ಹೊಂದಿರುವ ಇಂಧನ ಸಚಿವ ಕೆ.ಜೆ. ಜಾರ್ಜ್ ಶಂಕುಸ್ಥಾಪನೆ ನೆರವೇರಿಸಿದರು.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪರಿಸರ ಪರಿಹಾರ ನಿಧಿಯಡಿ ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯಲ್ಲಿ ಒಳಚರಂಡಿಯ ಮಲಿನ ನೀರು ಯಗಚಿ ಹಳ್ಳಕ್ಕೆ ಸೇರ್ಪಡೆಯಾಗಿ ನೀರು ಕಲುಷಿತವಾಗುವುದನ್ನು ತಡೆಯಲು
ಈ ಯೋಜನೆ ರೂಪಿಸಲಾಗಿದೆ. 12 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.ಈ ಸಂದರ್ಭದಲ್ಲಿ ಶಾಸಕ ಟಿ.ಡಿ. ರಾಜೇಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.