ಬೆಂಗಳೂರು:ಸಾವರ್ಕರ್ (Veer Savrkar) ಗೋಹತ್ಯೆಯ ವಿರೋಧಿಯಲ್ಲ. ಅವರು ಚಿತ್ಪಾವನ ಬ್ರಾಹ್ಮಣರಾಗಿದ್ದರಾದರೂ ಮಾಂಸಾಹಾರಿಯಾಗಿದ್ದರು, ಅವರು ಗೋಮಾಂಸ (Beef Eater) ತಿನ್ನುತ್ತಿದ್ದರು ಎಂದು ಹೇಳಿಕೆ ನೀಡಿದ್ದ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿತ್ತು.
ಇದೀಗ ಬಿಜೆಪಿ ಟ್ವೀಟ್ಗೆ ಸಚಿವ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ವಿನಾಕಾರಣ ಟ್ವೀಟ್ನಲ್ಲಿ ಎಳತಂದಿದ್ದಕ್ಕೆ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಪತ್ನಿ ದೂರು.
ಗೋಮಾಂಸ (Beef Eater) ತಿನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ಕೆಂಡಕಾರಿತ್ತು. ಈ ಟ್ವೀಟ್ ನೋಡಿ ಇದೀಗ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ಅವರು, ಬಿಜೆಪಿ ಟ್ವೀಟ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ವೇಳೆ, ರಾಜಕೀಯ ವಾಕ್ಸಮರದಲ್ಲಿ ನನ್ನ ಹೆಸರು ಎಳೆದು ತರಬೇಡಿ. ಆರೋಪ ಪ್ರತ್ಯಾರೋಪಗಳ ಸಂದರ್ಭದಲ್ಲಿ ಅನಗತ್ಯವಾಗಿ ಬಿಜೆಪಿ ತಮ್ಮ ಹೆಸರನ್ನ ಎಳೆದು ತರುತ್ತಿದೆ. ನಾನು ರಾಜಕೀಯದಲ್ಲಿ ಇಲ್ಲ. ರಾಜಕೀಯ ಕುಟುಂಬದಲ್ಲಿರುವ ಒಬ್ಬ ಮಹಿಳೆ ಅಷ್ಟೇ. ರಾಜಕೀಯಕ್ಕೂ ನನಗೂ ಸಂಬಂಧವಿಲ್ಲ. ನಾನು ಮುಸ್ಲಿಂ ಕುಟುಂಬದಿಂದ ಬಂದು ಹಿಂದೂ ಕುಟುಂಬದಲ್ಲಿದ್ದೇನೆ. ಈ ಒಂದೇ ಕಾರಣಕ್ಕೆ ಬಿಜೆಪಿ ತನ್ನ ರಾಜಕೀಯಕ್ಕಾಗಿ ನನ್ನ ಹೆಸರನ್ನ ತಳುಕು ಹಾಕುವುದು ಸರಿಯಲ್ಲ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಶಾಸಕ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ತಬಸ್ಸುಮ್.
ಬಿಜೆಪಿಯ ಶಾಸಕ ಯತ್ನಾಳ್ ಇದೇ ರೀತಿಯ ಆಕ್ಷೇಪಾರ್ಹ ಹೇಳಿಕೆ ನೀಡಿದಾಗ ತಬಸ್ಸುಮ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣಕ್ಕೆ ಸ್ಟೇ ಕೋರಿದ್ದ ಯತ್ನಾಳ್ ಅವರಿಗೆ ಹೈ ಕೋರ್ಟ್ ನ ಜಸ್ಟಿಸ್ ನಾಗಪ್ರಸನ್ನ ಅವರ ಪೀಠ ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ತಡೆಯಾಜ್ಞೆ ನೀಡಲು ನಿರಾಕರಿಸಿದ್ದರು.ಆದರೆ ಇದೀಗ ಬಿಜೆಪಿ ತನ್ನ ಟ್ವೀಟ್ನಲ್ಲಿ ತಬಸ್ಸುಮ್ ಅವರ ಹೆಸರನ್ನ ಉಲ್ಲೇಖಿಸಿ ಟೀಕಿಸಿದೆ. ಬಿಜೆಪಿಯ ಈ ನಡೆ ಪುನಾರಾವರ್ತನೆ ಆಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವ ದಿನೇಶ್ ಗುಂಡೂರಾವ್ ಪತ್ನಿ ತಬಸ್ಸುಮ್ ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾರೆ.